Advertisement

ಫ‌ುಟ್‌ಬಾಲ್‌ ವಿಶ್ವ ಶ್ರೇಯಾಂಕ: 21 ವರ್ಷದ ನಂತರ 100ಕ್ಕೇರಿದ ಭಾರತ

12:17 PM May 05, 2017 | Team Udayavani |

ನವದೆಹಲಿ: ಹೊಸದಾಗಿ ಫಿಫಾ ಫ‌ುಟ್‌ಬಾಲ್‌ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, 101ನೇ ಶ್ರೇಯಾಂಕದಲ್ಲಿದ್ದ ಭಾರತ 100ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಭಾರತ 21 ವರ್ಷಗಳ ನಂತರ ವಿಶ್ವದಲ್ಲೇ ಅಗ್ರ 100ರಲ್ಲಿ ಸ್ಥಾನ ಪಡೆದಂತಾಗಿದೆ.

Advertisement

ಭಾರತದ ಜತೆಗೆ ಲಿಥುವೇನಿಯಾ ಮತ್ತು ಎಸ್ತೋನಿಯಾ ರಾಷ್ಟ್ರಗಳು ಕೂಡ 100ನೇ ಶ್ರೇಯಾಂಕವನ್ನು ಪಡೆದಿವೆ. ಇದಕ್ಕೂ ಹಿಂದೆ ಭಾರತ 1996 ಏಪ್ರಿಲ್‌ನಲ್ಲಿ 100ನೇ ಶ್ರೇಯಾಂಕ ಪಡೆದಿತ್ತು. 1996 ಫೆಬ್ರವರಿಯಲ್ಲಿ ಭಾರತ 94ನೇ ಶ್ರೇಯಾಂಕ ಪಡೆದಿತ್ತು. ಇದು ಭಾರತದ ಶ್ರೇಷ್ಠ ಶ್ರೇಯಾಂಕವಾಗಿದೆ. ಭಾರತ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಶ್ರೇಯಾಂಕ ಏರಿಕೆಗೆ ಕಾರಣವಾಗಿದೆ. ಇದೇ ವರ್ಷದ ನಡೆದ ಎಎಫ್ಸಿ ಏಷ್ಯನ್‌ ಕಪ್‌ ಅರ್ಹತಾ ಪಂದ್ಯದಲ್ಲಿ ಭಾರತ 1-0ದಿಂದ ಮ್ಯಾನ್ಮಾರ್‌ ವಿರುದ್ಧ ಗೆಲುವು ಸಾಧಿಸಿತ್ತು.

ಅದೇ ರೀತಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಕಾಂಬೋಡಿಯಾ ವಿರುದ್ಧ 3-2ರಿಂದ ಜಯ ಸಾಧಿಸಿತ್ತು. ಇದು
ಭಾರತ ತಂಡದ ಶ್ರೇಯಾಂಕ ಏರಿಕೆಗೆ ಕಾರಣವಾಗಿದೆ. ಭಾರತ ಅಗ್ರ 100ರಲ್ಲಿ ಸ್ಥಾನ ಪಡೆದಿರುವುದಕ್ಕೆ ಅಖೀಲ ಭಾರತ
ಫ‌ುಟ್ಬಾಲ್‌ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next