Advertisement
ಕಾಶ್ಮೀರ ಕಣಿವೆಯಲ್ಲಿ ಉಗ್ರವಾದವನ್ನು ಹತ್ತಿಕ್ಕುವ ಕಾರ್ಯದಲ್ಲಿ ಕೇಂದ್ರ ಸರಕಾರ ಪ್ರಮುಖ ಹೆಜ್ಜೆಗಳನ್ನು ಇಡುತ್ತಲೇ ಇದೆಯಾದರೂ, ಕಣಿವೆಯು ನಾನಾ ವಿಧದಲ್ಲಿ ಭದ್ರತಾಪಡೆಗಳಿಗೆ ಸವಾಲು ಒಡ್ಡುತ್ತಲೇ ಇದೆ. “ಆಪರೇಷನ್ ಆಲೌಟ್’ ಹೆಸರಲ್ಲಿ ನಮ್ಮ ಭದ್ರತಾ ಪಡೆ ಅನೇಕ ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಆತಂಕವಾದಿಗಳ ಹುಡುಕಾಟ ಮತ್ತು ಅವರ ನಿರ್ನಾಮದ ಕಾರ್ಯಾಚರಣೆ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಬಂದ ಬಳಿಕ ಸಹಜವಾಗಿಯೇ ರಕ್ಷಣಾ ತಂತ್ರಗಳಲ್ಲಿ, ರಣ ನೀತಿಗಳಲ್ಲಿ ವೇಗವಾಗಿ ಬದಲಾವಣೆಗಳಾಗುವ ನಿರೀಕ್ಷೆ ಹೆಚ್ಚಿದೆ.
Related Articles
ನಂತರದ ಪ್ರತಿಯೊಂದು ಶವ ಯಾತ್ರೆಯ ಸಂದರ್ಭದಲ್ಲೂ ಉಗ್ರ ಸಂಘಟನೆಗಳು ಅದನ್ನು “ರಿಕ್ರೂಟಿಂಗ್ ಗ್ರೌಂಡ್’ ಮಾಡಿಕೊಂಡುಬಿಟ್ಟಿವೆ. ಈ ಶವಯಾತ್ರೆಯ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತವೆ. ಇದು ದೇಶದ ಇತರೆ ರಾಜ್ಯಗಳ ಯುವಕರನ್ನು ಬ್ರೇನ್‌ವಾಶ್ ಮಾಡುವ ತಂತ್ರವೂ ಹೌದು. ಈ ಕಾರಣಕ್ಕಾಗಿಯೇ ಕೇಂದ್ರ ಗೃಹ ಸಚಿವಾಲಯ ಮತ್ತು ಜಮ್ಮು-ಕಾಶ್ಮೀರದ ಸುರûಾ ಏಜೆನ್ಸಿಗಳ ಅಧಿಕಾರಿಗಳು ಇಂಥ ಶವಯಾತ್ರೆಗಳ ಮೇಲೆ ನಿರ್ಬಂಧ ಹೇರುವಂತೆ ಶಿಫಾರಸು ಮಾಡುತ್ತಲೇ ಬಂದಿವೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡುವುದಾದರೆ ಇಂಥದ್ದೊಂದು ನಿರ್ಬಂಧ ಜಾರಿಯಾಗಬೇಕು.
Advertisement
ಎಲ್ಲಿಯವರೆಗೂ ಸ್ಥಳೀಯ ಯುವಕರು ಉಗ್ರ ಸಂಘಟನೆಗಳ ಜಾಲಕ್ಕೆ ಸಿಲುಕುವುದನ್ನು ತಡೆಯಲು ಆಗುವುದಿಲ್ಲವೋ ಅಲ್ಲಿಯವರೆಗೂ ಕಾಶ್ಮೀರ ಶಾಂತವಾಗಲಾರದು. ಒಬ್ಬ ಉಗ್ರನನ್ನು ಹೊಡೆದುರುಳಿಸಿದಾಗ ಇನ್ನೈದು ಉಗ್ರರು ಹುಟ್ಟಿಕೊಂಡರೆ ಸೇನೆಗೆ ಸಂಕಷ್ಟ ಹೆಚ್ಚುತ್ತಲೇ ಹೋಗುತ್ತದೆ.
ಶವ ಹೂಳುವ ಸಮಯದಲ್ಲಿ ಅಲ್ಲಿ ಮೃತ ಉಗ್ರನ ಕೆಲ ಸಂಬಂಧಿಕರು ಇದ್ದರೆ ಅವರಿಚ್ಛೆಗೆ ಅನುಗುಣವಾದ ರೀತಿಯಲ್ಲಿ ದಫನ ಕಾರ್ಯ ಮಾಡಬಹುದು. ಆದರೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದಾಗ ಆ ಕಾರ್ಯ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೇ ಎಂದರೆ, ಅದು ಉಗ್ರರ ಹುಟ್ಟಿಕೊಳ್ಳುವ ಸ್ಥಳವಾಗಿಬಿಡುತ್ತದೆಂದರೆ ಅದನ್ನು ಹತ್ತಿಕ್ಕುವ ಕೆಲಸ ಆಗಲೇಬೇಕು.