ಮಂಗಳೂರು: ಗಣಿಗಾರಿಕೆ ಮತ್ತು ಖನಿಜ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಷ್ಟ್ರೀಯ ಖನಿಜ ಶೋಧನಾ ಕಾರ್ಯಕ್ರಮ ದಡಿ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್)ಗೆ ಚಿನ್ನದ ನಿಕ್ಷೇಪ ಶೋಧನೆಗೆ
ಅನುವು ಮಾಡಿಕೊಡಲಾಗಿದೆ. ಮೈಸೂರಿನಲ್ಲಿ ಚಿನ್ನದ ನಿಕ್ಷೇಪ ಶೋಧಕ್ಕಾಗಿ 200 ಚ.ಕಿ.ಮೀ. ಪ್ರದೇಶವನ್ನು ಈಗಾಗಲೇ ಒದಗಿಸಲಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್ ತಿಳಿಸಿದ್ದಾರೆ.
ಕೆಐಒಸಿಎಲ್ ಸ್ಥಾವರಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಕಬ್ಬಿಣ ಅದಿರು ಗಣಿಗಾರಿಕೆ, ಪರಿಷ್ಕರಣೆ ನಡೆಸುತ್ತಿದ್ದ ಕೆಐಒಸಿಎಲ್ ಇನ್ನು ಮುಂದೆ ಚಿನ್ನದ ನಿಕ್ಷೇಪ ಪತ್ತೆಗೂ ಮುಂದಾಗಲಿದೆ ಎಂದರು.
ದೇವದಾರಿ ಗಣಿ ಲಭ್ಯತ.ನಾಡಿನ ತಿರುಪುರದಲ್ಲಿ 100 ಚ. ಕಿ.ಮೀ. ಪ್ರದೇಶದಲ್ಲಿ ಕಬ್ಬಿಣದ ಅದಿರು ಶೋಧನೆ ನಡೆಸುವುದ ರೊಂದಿಗೆ ಮುಂದಿನ 6 ತಿಂಗಳೊಳಗೆ ಇದರ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಿದೆ. ಅಲ್ಲದೆ ಬಳ್ಳಾರಿ ಜಿಲ್ಲೆಯ ದೇವದಾರಿಯಲ್ಲಿ 475 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಸಂಸ್ಥೆಗೆ ಅನುಮತಿ ದೊರಕಿದ್ದು, ರಾಜ್ಯ ಸರಕಾರದಿಂದ ಕೆಲವು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಇದು ಕಾರ್ಯಾರಂಭಿಸಲಿದೆ ಎಂದು ಸಚಿವರು ತಿಳಿಸಿದರು.
ಕೂಳೂರು ಊದುಕುಲುಮೆ ಪುನರಾರಂಭ ಕೂಳೂರಿನಲ್ಲಿ ಸ್ಥಗಿತಗೊಂಡಿರುವ ಕೆಐಒಸಿಎಲ್ ಊದು ಕುಲುಮೆ ಸ್ಥಾವರವನ್ನು ಪುನರಾರಂಭಿಸಲಾಗುತ್ತಿದೆ. ಡಕ್ಟೆ„ಲ್ ಐರನ್ (ಡಿಐ) ಘಟಕವನ್ನು ಪ್ರಾರಂಭಿಸಲಾಗುವುದು ಎಂದರು.
ಅಧಿಕ ಉಕ್ಕು ಉತ್ಪಾದನೆ ಆಶಯ ಉಕ್ಕು ಸಚಿವಾಲಯ ಕಾರ್ಯದರ್ಶಿ ಡಾ| ಅರುಣಾ ಶರ್ಮ ಮಾತನಾಡಿ, ಕೇಂದ್ರದ ಉಕ್ಕು ನೀತಿಯನುಸಾರ 2030ರ ವೇಳೆಗೆ ಉಕ್ಕು ಉತ್ಪಾದನೆಯನ್ನು 30 ಕೋ.ಟನ್‌ಗೆ ಹೆಚ್ಚಿಸಬೇಕಿದೆ. ತಲಾ ಉಕ್ಕು ಬಳಕೆಯನ್ನು 60 ಕಿ.ಗ್ರಾಂನಿಂದ 100 ಕಿ.ಗ್ರಾಂಗೆ ಏರಿಸುವ ಗುರಿ ಇದೆ ಎಂದರು.
ಕೆಐಒಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವಿ. ಸುಬ್ಬರಾವ್ ಉಪಸ್ಥಿತರಿದ್ದರು. ಚೌಧರಿ ಬೀರೇಂದ್ರ ಸಿಂಗ್ ಸೋಲಾರ್ ಘಟಕಕ್ಕೆ ಶಿಲಾನ್ಯಾಸ ಊದು ಕುಲುಮೆ ಸ್ಥಾವರದ ಸನಿಹದ 8 ಎಕರೆ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವ ಸಂಬಂಧ ಸಚಿವ ಬೀರೇಂದ್ರ ಸಿಂಗ್ ಶಿಲಾನ್ಯಾಸ ನೆರವೇರಿಸಿದರು. 1 ಮೆಗಾ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ದಿನಕ್ಕೆ 4,500 ಯುನಿಟ್ ವಿದ್ಯುತ್ ಉತ್ಪಾದಿಸಲಿದೆ ಎಂದವರು ಇದೇ ವೇಳೆ ತಿಳಿಸಿದರು.