Advertisement

KIOCL-NMDC ವಿಲೀನಕ್ಕಾಗಿ ನಿಯೋಗದಿಂದ ಡಾ| ಹೆಗ್ಗಡೆ ಭೇಟಿ

12:26 AM Sep 05, 2024 | Team Udayavani |

ಬೆಳ್ತಂಗಡಿ: ಕೇಂದ್ರ ಸರಕಾರದ ಉಕ್ಕು ಸಚಿವಾಲಯದಲ್ಲಿರುವ ಸಾರ್ವ ಜನಿಕ ಉದ್ದಿಮೆಗಳಾದ ಕೆಐಒಸಿಎಲ್‌ (KIOCL) ಸಂಸ್ಥೆ ಯನ್ನು ಎನ್‌ಎಂಡಿಸಿ (NMDC) ಸಂಸ್ಥೆಯೊಂದಿಗೆ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿಯವರನ್ನು ಒತ್ತಾಯಿಸುವ ಸಲುವಾಗಿ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌ ನೇತೃತ್ವದ ನಿಯೋಗವು ರಾಜ್ಯಸಭಾ ಸದಸ್ಯರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮನವಿ ನೀಡಿತು.

Advertisement

ಮನವಿಯನ್ನು ಸ್ವೀಕರಿಸಿ ಡಾ| ಹೆಗ್ಗಡೆಯವರು ಮಾತನಾಡಿ, ಪ್ರಧಾನಿಗೆ ಈ ನಿಟ್ಟಿನಲ್ಲಿ ಮಾಹಿತಿ ನೀಡಿ ತ್ವರಿತಗತಿಯಲ್ಲಿ ವಿಲೀನ ಪ್ರಕ್ರಿಯೆಯನ್ನು ಮಾಡುವಂತೆ ಮನವಿ ಮಾಡುತ್ತೇನೆ. ಕುಮಾರಸ್ವಾಮಿಯವರು ಸದ್ಯದಲ್ಲೇ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಆಗ ಈ ಬಗ್ಗೆ ಮಾತುಕತೆ ಮಾಡಿ ಗುಣಾತ್ಮಕವಾಗಿ ಒಟ್ಟಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸೋಣ ಎಂದರು.

ಭಾರತೀಯ ಮಜ್ದೂರ್‌ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್‌ ಸಾಲಿಯನ್‌, ಬಿಎಂಎಸ್‌ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನಿಲ್‌ ಕುಮಾರ್‌ ಯು., ಕುದುರೆಮುಖ ಮಜ್ದೂರ್‌ ಸಂಘದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರೇಗೌಡ, ಕಾರ್ಯಾಧ್ಯಕ್ಷರಾದ ಭಗವಾನ್‌ದಾಸ್‌ ಬಿ.ಎನ್‌., ಕೆಂಚೇಗೌಡ, ಖಜಾಂಚಿ ಉದಯ ಕುಮಾರ್‌ ಬಿ.ಸಿ., ಸಂಘಟನ ಕಾರ್ಯದರ್ಶಿ ಶ್ರೀಧರ್‌ ಉಳ್ಳಾಲ್‌, ಪಾಲಯ್ಯ, ಶ್ರೀಮಂದ್ರ ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next