Advertisement
ಈ ನಿಟ್ಟಿನಲ್ಲಿ ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಹಾಗೂ ಸಿಬ್ಬಂದಿ ಅಗತ್ಯ ಮಾಹಿತಿ ಸಿದ್ಧಪಡಿಸಿಕೊಂಡು ಫೆ. 22 ರಂದು ಚುನಾವಣಾ ಆಯೋಗದ ಕಚೇರಿಗೆ ತೆರಳಲು ಆಯೋಗ ಅ ಧಿಸೂಚನೆ ನೀಡಿದೆ. ಚುನಾವಣಾ ಆಯೋಗ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳನ್ನು ನಿಗ ದಿಪಡಿಸಿದ್ದು ಅದಕ್ಕೆ ಸಂಬಂಧಿ ಸಿ ಕ್ಷೇತ್ರಗಳನ್ನು ಹೊಂದಾಣಿಕೆ ಮಾಡುವ ಸವಾಲು ಈಗ ಜಿಲ್ಲಾಡಳಿತದ ಮುಂದಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಈವರೆಗೆ 37 ಜಿಪಂ ಕ್ಷೇತ್ರಗಳಿದ್ದವು. ಚುನಾವಣಾ ಆಯೋಗ ಇದಕ್ಕೆ ಮತ್ತೆ 4 ಕ್ಷೇತ್ರಗಳನ್ನು ಸೇರಿಸಲು ಸೂಚಿಸಿದ್ದು, ಇದರಿಂದಾಗಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 41ಕ್ಕೆ ಏರಿಕೆಯಾಗಲಿದೆ.
Related Articles
Advertisement
ಕ್ಷೇತ್ರ ಪುನರ್ ವಿಂಗಡಣೆ ಮಾನದಂಡಗಳೇನು?: ಪ್ರತಿ ಜಿಲ್ಲಾ ಪಂಚಾಯಿತಿಗೆ 35 ರಿಂದ 40 ಸಾವಿರ ಜನಸಂಖ್ಯೆ ಇರುವಂತೆ ನೋಡಿಕೊಂಡು, ಯಾವುದೇ ಗ್ರಾಮ ಪಂಚಾಯಿತಿಗಳನ್ನು ವಿಭಜನೆ ಮಾಡದೆ ಜಿಪಂ ಕ್ಷೇತ್ರ ರಚನೆ ಮಾಡಬೇಕು. ಸಂಚಾರ, ಸಂಪರ್ಕ ವ್ಯವಸ್ಥೆ, ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನದಿ, ಜಲಾಶಯ, ಬೆಟ್ಟ, ಗುಡ್ಡ, ಅರಣ್ಯ ಇತ್ಯಾದಿಗಳನ್ನು ಪಟ್ಟಿ ಮಾಡಬೇಕು. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದ ಹೆಸರನ್ನೇ ಕ್ಷೇತ್ರದ ಹೆಸರನ್ನಾಗಿ ನಾಮಕರಣ ಮಾಡಬೇಕು. 2011ನೇ ಜನಗಣತಿ ಆಧಾರದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಕ್ಷೇತ್ರವಾರು ಜನಸಂಖ್ಯೆಯಲ್ಲಿ ಆಗಿರುವ ಗಣನೀಯ ಬದಲಾವಣೆಗಳನ್ನು ಗಮನಿಸಿ ಹೊಸ ಕ್ಷೇತ್ರಗಳನ್ನು ರಚಿಸಬೇಕಿದೆ.
ಜಿಲ್ಲಾಡಳಿತ ಏನು ಮಾಡಲಿದೆ?: ಹೊಸ ಜಿಲ್ಲಾ ಪಂಚಾಯಿತಿಕ್ಷೇತ್ರಗಳು ಕೇವಲ 4 ಮಾತ್ರ ಹೆಚ್ಚಾಗುವುದರಿಂದ ಇಡೀ ತಾಲೂಕನ್ನು ಮುಂದಿಟ್ಟುಕೊಂಡು ನಾಲ್ಕು ತಾಲೂಕುಗಳಲ್ಲಿ ನಾಲ್ಕು ಕ್ಷೇತ್ರಗಳನ್ನು ಹೊಂದಿಸಬಹುದು. ಆದರೆ ಈಗ ಇರುವ 136 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು 109ಕ್ಕೆ ಇಳಿಸುವ ಸವಾಲಿದೆ. ಪ್ರತಿ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ ಭೌಗೋಳಿಕವಾಗಿ ಗಮನಿಸಿ, ಜನಸಂಖ್ಯೆ ಮಿತಿ ಇಟ್ಟುಕೊಂಡು ಚುನಾವಣಾ ಆಯೋಗದ ನಿಬಂಧನೆಗಳಂತೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿಕೊಂಡು ಫೆ. 22 ರಂದು ಚುನಾವಣಾ ತಹಶೀಲ್ದಾರ್ ಆಯೋಗದ ಮುಂದೆ ಹೋಗಬೇಕಿದೆ.
ತಿಪ್ಪೇಸ್ವಾಮಿ ನಾಕೀಕೆರೆ