Advertisement

FIDE Candidates : ದೀರ್ಘ‌ ಪಂದ್ಯಗಳಲ್ಲಿ ಆಡಲು ಬೇಸರ; ಕಾರ್ಲ್ಸನ್‌!

10:53 PM Apr 04, 2024 | Team Udayavani |

ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಚೆಸ್‌ ಪಂದ್ಯಾವಳಿಯಿಂದ 3 ಬಾರಿಯ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್ಸನ್‌ ಹಿಂದೆ ಸರಿದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಮಾದರಿಯ ಸಾಂಪ್ರದಾಯಿಕ ಕೂಟದಲ್ಲಿ, ಪಂದ್ಯಗಳು ದೀರ್ಘ‌ಕಾಲ ನಡೆಯುತ್ತದೆ. ಅಷ್ಟು ಕಾಲ ಆಡುವುದು ಬೇಸರ ತರುತ್ತದೆ ಎಂಬ ಕಾರಣದಿಂದ ತಾನು ಆಡುತ್ತಿಲ್ಲ ಎಂದವರು ಹೇಳಿದ್ದಾರೆ!

Advertisement

ಈ ಹಿಂದೆ ಮಾಧ್ಯಮವೊಂದರ ಜತೆ ಮಾತನಾಡಿದ್ದ ಅವರು,  ದೀರ್ಘ‌ ಕಾಲ ನಡೆಯುವ ಚೆಸ್‌ ಪಂದ್ಯಾವಳಿಗಳನ್ನು ನಾನು ಆನಂದಿಸುವುದಿಲ್ಲ. ಕ್ರೀಡಾಕೂಟದಿಂದ ಹಿಂದೆ ಸರಿಯಲು ಇದೇ ಪ್ರಮುಖ ಕಾರಣ. ಇದರಿಂದ ನನ್ನ ರೇಟಿಂಗ್‌ ಕುಸಿಯಬಹುದು. ಆದರೆ ವಿವಿಧ ಮಾದರಿಗಳನ್ನು ಗಮನಿಸಿದಾಗ ಉತ್ತಮ ಆಟಗಾರ ಯಾರು ಎಂಬುದು ನಿಮಗೆ ತಿಳಿಯುತ್ತದೆ ಎಂದು ಹೇಳಿದ್ದರು.

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಮೊದಲ  40 ನಡೆಗಳಿಗೆ 120 ನಿಮಿಷ ನೀಡಲಾಗುತ್ತದೆ. ಬಳಿಕ 30 ನಿಮಿಷಗಳಲ್ಲಿ ಆಟವನ್ನು ಪೂರ್ಣ ಗೊಳಿಸಬೇಕಾಗುತ್ತದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತದ ಐವರು ಆಟಗಾ ರರು ಪಾಲ್ಗೊಂಡಿದ್ದು, ಇದರಲ್ಲಿ ಚಾಂಪಿಯನ್‌ ಆಗುವ ಸ್ಪರ್ಧಿ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next