Advertisement
ಎಲ್ಲದಕ್ಕೂ ಜ್ವರವೇ ಆರಂಭ: ಹವಾಮಾನ ವೈಪರಿತ್ಯ ದಿಂದ ಕೆಮ್ಮು, ಶೀತ, ಜ್ವರ ಸಾಮಾನ್ಯ ಹಾಗಾಗಿ ಈ ಕುರಿತು ಸಾರ್ವಜನಿಕರು ನಿರ್ಲಕ್ಷಿಸುತ್ತಾರೆ. ಆದರೆ ಸೋಂಕಿನ ಕಾಯಿಲೆಗಳ ಮುಖ್ಯಲಕ್ಷಣವೇ ಜ್ವರ ಎಂಬುದನ್ನು ಮರೆಯುವಂತಿಲ್ಲ. ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಟೈಫಾಯ್ದ್, ವೈರಾಣುವಿನ ಜ್ವರ, ಕಾಲರಾ ಮುಂತಾದವುಗಳು ಆರಂಭದಲ್ಲಿ ಕಾಣಿಸಿ ಕೊಳ್ಳುವುದು ಜ್ವರದ ರೂಪದಲ್ಲೇ ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಿದೆ.
Related Articles
Advertisement
ಶುದ್ಧ ಹಾಗೂ ಸ್ವಚ್ಛ ಆಹಾರ ಸೇವನೆ: ಮನೆಗಳಲ್ಲಿ ಕುದಿಸಿದ ನೀರು ಇಲ್ಲವೇ ಶುದ್ಧ ಕುಡಿಯುವ ನೀರಿನ ಘಟಕ ನೀರನ್ನು ಸೇವನೆ ಮಾಡಬೇಕು. ಬಿಸಿಯಾದ ಊಟ, ಶುದ್ಧವಾದ ಆಹಾರ ಪದಾರ್ಥ ಸೇವಿಸಬೇಕು. ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಶುಚಿತ್ವ ಕಾಪಾಡುವ ಹೋಟೆಲ್ಗಳಲ್ಲಿ ಆಹಾರ ಸೇವನೆಗೆ ಮುಂದಾಗಬೇಕು. ತೆರೆದಿಟ್ಟ ತಿಂಡಿ, ತಿನಿಸು ಮತ್ತು ಕತ್ತರಿಸಿದ ಇಟ್ಟಿರುವ ಹಣ್ಣುಗಳ ಸೇವನೆ ಮಾಡ ಬಾರದು. ರಸ್ತೆ ಬದಿಯಲ್ಲಿನ ಕ್ಯಾಂಟಿನ್‌ಗಳಲ್ಲಿ ಆಹಾರ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಎದುರಾಗಲಿವೆ. ಊಟಕ್ಕೆ ಮೊದಲು ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕಿದೆ.
ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ: ಮನೆ ಸುತ್ತ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಸೊಳ್ಳೆಯ ಸಂತತಿ ಹೆಚ್ಚಿದಂತೆ ಮುಂಜಾಗ್ರತೆ ವಹಿಸಬೇಕು. ಮನೆ ಯಲ್ಲಿ ಸೊಳ್ಳೆ ಕಾಟವಿದ್ದರೆ ಸೊಳ್ಳೆಪರದೆ ಬಳಸಬೇಕು. ನಿರಪಯುಕ್ತ ವಸ್ತುಗಳಲ್ಲಿ ನೀರು ಶೇಖರಣೆ ಯಾಗ ದಂತೆ ನೋಡಿಕೊಳ್ಳಬೇಕು, ಪ್ರತಿ ಮೂರು ದಿವಸಕ್ಕೆ ಒಮ್ಮೆ ನೀರು ಶೇಖರಣೆ ಮಾಡುವ ವಸ್ತುಗಳನ್ನು ತೊಳೆದು ಶುಚಿಯಾಗಿ ಇಟ್ಟುಕೊಳ್ಳಬೇಕಿದೆ.
ಸೊಳ್ಳೆ ಬಗ್ಗೆ ಎಚ್ಚರವಿರಲಿ: ಕೊಳಚೆ ನೀರಿನಲ್ಲಿ ಮಾತ್ರ ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ, ನಾವು ಕಡಿಯ ಲಿಕ್ಕೆಂದು ಅಡುಗೆ ಮನೆಯಲ್ಲಿ ಶೇಖರಣೆ ಮಾಡಿರುವ ನೀರಿನಲ್ಲಿಯೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಶುಚಿಯಾದ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಯ ಗಳಿಂದ ಡೆಂಘೀ ಇಲ್ಲವೇ ಚಿಕೂನ್‌ಗುನ್ಯಾ ಕಾಯಿಲೆ ಗಳು ಬರಲಿವೆ ಹಾಗಾಗಿ ಸೊಳ್ಳೆಯ ಬಗ್ಗೆ ಎಚ್ಚರ ವಹಿಸಬೇಕಾಗಿದೆ.
ಆರೋಗ್ಯ ಇಲಾಖೆ ಮಾಹಿತಿ: ಕಳೆದ ಎರಡು ವರ್ಷರಿಂದ ಪುರಸಭೆ ವ್ಯಾಪ್ತಿಯಲ್ಲಿ ತಿಂಗಳಿಗೆ ಎರಡು ದಿವಸ ಅಂದರೆ ತಿಂಗಳ ಮೊಲದನೇ ಹಾಗೂ ಮೂರನೇ ಶುಕ್ರವಾರ ಪಟ್ಟಣದ 23 ವಾರ್ಡ್‌ನಲ್ಲಿ ಲಾರ್ವಾ ಸಮೀಕ್ಷೆ ನಡೆಯುತ್ತಿದೆ. ತಾಲೂಕಿನಲ್ಲಿರುವ 40 ಮಂದಿ ಕಿರಿಯ ಆರೋಗ್ಯ ಸಹಾಯಕರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಟ್ಟಣಕ್ಕೆ ನಿಯೋಜನೆ ಮಾಡುವ ಮೂಲಕ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ಮಾಹಿತಿ ದಾಖಲೆಯಲ್ಲಿದೆ.
ಯಾವಾಗ ಸಮೀಕ್ಷೆ ಮಾಡುತ್ತಾರೆ? :ಎರಡು ವರ್ಷ ನಿರಂತರವಾಗಿ ತಿಂಗಳಿಗೆ ಎರಡು ದಿವಸ ಪಟ್ಟಣದಲ್ಲಿ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದ್ದರೆ ಸಾಂಕ್ರಾಮಿಕ ರೋಗ ಕಡಿಮೆಯಾಗಬೇಕಿತ್ತು. ಮನೆ ಗಳ ಆವರಣದಲ್ಲಿ ಕೊಳಚೆ ನೀರು ಸಂಗ್ರಹವಾಗು ವುದು ನಿಲ್ಲಬೇಕಿತ್ತು. ಇದ್ಯಾವುದು ಆಗಿಲ್ಲ ಎಂದರೆ ಇನ್ನು ಯಾವ ರೀತಿಯಲ್ಲಿ ಸಮೀಕ್ಷೆಗಳು ಹಾಗೂ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎನ್ನುವುದು ಪಟ್ಟಣದ ಸಾರ್ವಜನಿಕರ ಪ್ರಶ್ನೆಯಾಗಿದೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ