Advertisement
ರೋಗ ಲಕ್ಷಣ ತಿಳಿದುಬಂದಿಲ್ಲ: ಮಕ್ಕಳಲ್ಲಿ ಜ್ವರ, ಕೆಮ್ಮು, ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡಿವೆ.ಕೋವಿಡ್ ಸೋಂಕು ಇದೆ ಅಥವಾ ಇಲ್ಲ ಎಂಬುದು ಪರೀಕ್ಷೆಯ ಫಲಿತಾಂಶದಿಂದ ಗೊತ್ತಾಗಬೇಕಾಗಿದೆ.ಅನಾರೋಗ್ಯ ಲಕ್ಷಣಗಳ ಬಗ್ಗೆ ಈಗಲೇ ಏನನ್ನು ಹೇಳಲಾಗುವುದಿಲ್ಲ. ಕುಡಿಯುವ ನೀರಿನಿಂದಲೂ ಈ ಸಮಸ್ಯೆ ಉದ್ಭವಿಸಿರಬಹುದು ಎಂದರು. ಅನಾರೋಗ್ಯ ಲಕ್ಷಣಗಳಿದ್ದರೂ ಕೆಲವು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿ ತೀವ್ರ ಜ್ವರದಿಂದಬಳಲಿ ಸುಸ್ತಾಗಿದ್ದನ್ನು ಕಂಡು ಡಾ.ಸುನಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.
Related Articles
Advertisement
ಶೌಚಾಲಯ, ನೀರಿನ ಸಮಸ್ಯೆ: ನೀರು, ಶೌಚಾಲಯ ಸಮಸ್ಯೆ ಬಗ್ಗೆ ಪಾಲಕರ ಅಸಮಾಧಾನ ಶಾಲೆಯಲ್ಲಿ ಶುದ್ಧ ನೀರು, ಶೌಚಾಲಯ ಮತ್ತಿತರ ಸಮಸ್ಯೆಗಳ ಬಗ್ಗೆ ಪಾಲಕರಾದ ತಿಮ್ಮಪ್ಪರಾಜು, ಅಂಬಿಕಾ, ಆಶಾ, ಸೌಮ್ಯ, ಸೌಜನ್ಯ, ಗ್ರಾಮದ ಮುಖಂಡರಾದ ವೆಂಕಟೇಶ್, ಪುಟ್ಟಮಾದಯ್ಯ ಮತ್ತಿತರರು ಹಾಜರಿದ್ದ ಅಧಿಕಾರಿಗಳ ಗಮನಕ್ಕೆ ತಂದರು. ಶಾಲೆಯ ಆಹಾರ ಸೇವನೆಯಿಂದಲೇ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ದೂರಿದರು.
ತಾಪಂ ಇಒ ವಿರುದ್ಧ ಗ್ರಾಮಸ್ಥರ ಕಿಡಿ: ಶಾಲೆಗೆ
ಕಾಂಪೌಂಡ್ ನಿರ್ಮಿಸಲಾಗಿದೆ, ಆದರೆ ಗೇಟ್ ಅಳವಡಿಸಿಲ್ಲ. ಶಾಲಾ ಆವರಣದಲ್ಲಿರುವ ನೀರಿನ ಟ್ಯಾಂಕ್‌ಗೆ ಭದ್ರತೆ ಇಲ್ಲ. ಕೂಡಲೆ ಅಳವಡಿಸಬೇಕು ಎಂದು ಗ್ರಾಮಸ್ಥರು ತಾಪಂ ಇಒ ಅವರನ್ನು ಆಗ್ರಹಿಸಿದಾಗ ಇಒ ಅವರು ರಾತ್ರಿ ವೇಳೆ ಗ್ರಾಮಸ್ಥರೆ ಕಾವಲು ಕಾಯಬೇಕು ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒಬೇಜವಾಬ್ದಾರಿ ಹೇಳಿಕೆ, ಮಕ್ಕಳ ಆರೋಗ್ಯ ವಿಚಾರಿಸದ ಅಧಿಕಾರಿಗಳ ನಡೆಯನ್ನು ಗ್ರಾಪಂ ಮಾಜಿ ಸದಸ್ಯ ದೇವರಾಜು ಖಂಡಿಸಿದರು.
ಹುಲಿಕೆರೆ ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆ ಬಗ್ಗೆಗ್ರಾಪಂ ಗಮನಕ್ಕೂ ತಂದಿಲ್ಲ. ಕಳೆದ ವಾರವೇ ಇಲ್ಲಿನ ಶಾಲೆಯ ನೀರಿನ ಪರೀಕ್ಷೆ ನಡೆಸಲಾಗಿದೆ. ನೀರು ಮಾನವ ಬಳಕೆಗೆಯೋಗ್ಯವಾಗಿದೆ ಎಂದು ವರದಿ ಇದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಮತ್ತೂಮ್ಮೆನೀರಿನ ಪರೀಕ್ಷೆ ನಡೆಸಿ ಶುದ್ಧ ನೀರು ಗ್ರಾಪಂನಿಂದ ದೊರೆಯುವಂತೆಮಾಡಲಾಗುವುದು. ವೈದ್ಯರಿಂದ ಮಕ್ಕಳ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳಬಗ್ಗೆ ನಿಗಾ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. – ತೇಜಾ ಸತೀಶ್, ಅಧ್ಯಕ್ಷರು, ಹುಲಿಕೆರೆ-ಗುನ್ನೂರು ಗ್ರಾಪಂ