Advertisement

ಕೋಳಿ ಫಾರ್ಮ್ ನಿಂದ ದುರ್ವಾಸನೆ: ಕ್ರಮಕ್ಕೆ ಗ್ರಾಮಸ್ಥರ ಮನವಿ

03:19 PM Sep 28, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಕರಕಲಮಾದಹಳ್ಳಿಪಕ್ಕ ತಲೆ ಎತ್ತಿರುವ ಕೋಳಿ ಫಾರ್ಮ್ ನಿಂದ ದುರ್ವಾಸನೆ ಬರುತ್ತಿದ್ದು, ಗ್ರಾಮದ ತುಂಬೆಲ್ಲನೋಣಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ಕೂಡಲೇಕ್ರಮ ವಹಿಸಬೇಕು. ಜೊತೆಗೆ ಕೆರೆಯ ಏರಿಯಲ್ಲಿನೀರು ಸೋರಿಕೆಯಾಗುತ್ತಿರುವ ಹಿನ್ನೆಲೆ ಏರಿದುರಸ್ತಿ ಪಡಿಸಬೇಕೆಂದು ಗ್ರಾಮಸ್ಥರು ಶಾಸಕಸಿ.ಎಸ್‌.ನಿರಂಜನಕುಮಾರ್‌ ಅವರಲ್ಲಿ ಮನವಿ ಮಾಡಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು,ಕೇರಳ ಮೂಲಕ ವ್ಯಕ್ತಿಯೋರ್ವ ಗ್ರಾಪಂನಿಂದಪರವಾನಗಿ ಪಡೆಯದೆ ಹತ್ತಾರು ಎಕರೆಯಲ್ಲಿಕೋಳಿ ಫಾರ್ಮ್ ಆರಂಭಿಸಿದ್ದಾರೆ. ಸೆಸ್ಕ್ನಿಂದವಿದ್ಯುತ್‌ ಸಂಪರ್ಕ ನೀಡಲಾಗಿದೆ. ಆರೋಗ್ಯಇಲಾಖೆ, ಪಶು ಪಾಲನಾ ಇಲಾಖೆಯಿಂದಯಾವುದೇ ಅನುಮತಿ ಪಡೆದಿಲ್ಲ. ಈಗ ಫಾರ್ಮ್ನಿಂದ ದುರ್ವಾಸನೆ ಬೀರುತ್ತಿದ್ದು, ಜನರಿಗೆ ರೋಗದ ಭೀತಿ ಎದುರಾಗಿದೆ ಎಂದು ಅಳಲುತೋಡಿಕೊಂಡರು.

ಈ ವೇಳೆ ತಾಪಂ ಇಒ ಶ್ರೀಕಂಠರಾಜೇ ಅರಸ್‌ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕನಿರಂಜನಕುಮಾರ್‌, ಕೂಡಲೇ ಪರಿಶೀಲನೆ ನಡೆಸಿಕ್ರಮ ವಹಿಸಬೇಕು. ಪಿಡಿಒಗಳು ತಮಗಿಷ್ಟಬಂದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತವರವಿರುದ್ಧ ಕ್ರಮಕ್ಕೆ ಮುಂದಾಗಿ ಎಂದು ಸೂಚನೆ ನೀಡಿದರು.

ಶಿವಪುರ ಗ್ರಾಮದಲ್ಲಿ ತಾಪಂ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಬಸ್‌ ನಿಲ್ದಾಣ ಕಳೆದ 2ವರ್ಷದಿಂದ ಅರ್ಧಕ್ಕೆ ನಿಂತಿದೆ. ಇದನ್ನುಪೂರ್ಣಗೊಳಿಸುವಂತೆ ಗ್ರಾಮದ ಯುವಕಮಂಜು ಮನವಿ ಮಾಡಿದರು. ಈ ವೇಳೆ ತಾಪಂ ಇಒ ಮಾತನಾಡಿ, ಅನುದಾನ ಕೊರತೆಯಿಂದಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಕಾರಣ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ನಿರಂಜನಕುಮಾರ್‌ ಹೆಚ್ಚುವರಿ ಅನುದಾನ ಎಷ್ಟುಬೇಕು ಎಂಬುದರ ಪಟ್ಟಿ ನೀಡಿದರೆ ಶಾಸಕರ ಅನುದಾನದಲ್ಲಿ ಬಿಡುಗಡೆ ಮಾಡಲಾಗುವುದು. ಮುಂದೆ ನಡೆಯುವ ಯಾವುದೇ ಕೆಲಸಕ್ಕು ಪೂರ್ಣ ಪ್ರಮಾಣದ ಹಣ ಬಂದರೆ ಮಾತ್ರಕಾಮಗಾರಿ ಆರಂಭಿಸಬೇಕು. ಅರ್ಧಂಬರ್ಧಮಾಡಿ ನಿಲ್ಲಿಸುವುದಾದರೆ ಕಾಮಗಾರಿಆರಂಭಿಸಬಾರದು ಎಂದು ಎಚ್ಚರಿಕೆ ನೀಡಿದರು.

Advertisement

ಚಾವಡಿ ನಿರ್ಮಾಣಕ್ಕೆ ಹೊನ್ನೆಗೌಡನಹಳ್ಳಿಗ್ರಾಮಸ್ಥರು ಮನವಿ ಮಾಡಿದರು. ಪಟ್ಟಣದ 3ನೇವಾರ್ಡ್‌ನಲ್ಲಿ ಕುಡಿಯುವ ನೀರು, ವಿದ್ಯುತ್‌ಸಮಸ್ಯೆ ಹೆಚ್ಚಿನ ರೀತಿಯಲ್ಲಿದ್ದು, ಬಗೆಹರಿಸುವಂತೆ30ಕ್ಕೂ ಹೆಚ್ಚು ಮಹಿಳೆಯರು ಕೋರಿದರು.ಜಮೀನು ದಾರಿ ಬಿಡಿಸುವಂತೆ ಹೊಂಗಳ್ಳಿ ರೈತನೊಬ್ಬ ತಿಳಿಸಿದ, ಸಾಗುವಳಿ ನೀಡುವಂತೆ ದೇಶಿಪುರ ಗ್ರಾಮಸ್ಥರು ಒತ್ತಾಯಿಸಿದರು. ಹಂಗಳಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಕಳೆದ 9 ತಿಂಗಳಿಂದ ಸಂಬಳ ಬಿಡುಗಡೆಯಾಗಿಲ್ಲ ಎಂದು ಸಿಬ್ಬಂದಿಯೊಬ್ಬರು ದೂರಿದರು.  ಕುಂದಕೆರೆ ಗ್ರಾಮದ 30ಕ್ಕೂ ಅಧಿಕ ಮಂದಿ ಸಾಗುವಳಿ ನೀಡಲು ಮನವಿ ಮಾಡಿದರು.

ನಿರ್ಲಕ್ಷ್ಯ ಸಹಿಸಲ್ಲ: ಈ ವೇಳೆ ಮಾತನಾಡಿದಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಹೊತ್ತುತರುತ್ತಿರುವ ಸಮಸ್ಯೆಗಳನ್ನು ತಾಲೂಕು ಮಟ್ಟದಅಧಿಕಾರಿಗಳು ಮುಲಾಜಿಲ್ಲದೆ ಬಗೆಹರಿಸಬೇಕು. ಜೊತೆಗೆ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದರೆ ಸಹಿಸುವುದಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಸಭೆಯ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್‌, ಉಪ ತಹಶೀಲ್ದಾರ್‌ ಮಹೇಶ್‌, ತಾಪಂ ಇಒ ಶ್ರೀಕಂಠರಾಜೇ ಅರಸ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸಿಡಿಪಿಒ ಚಲುವರಾಜು,ಕುಡಿಯುವ ನೀರು ಮತ್ತು ಸರಬರಾಜು ಇಳೆಯಪಲ್ಲವಿ, ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ರಾಜ್‌, ಅಕ್ಷರ ದಾಸೋಹದ ಮಂಜಣ್ಣ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next