Advertisement

ಕೆಎಚ್‌ಎಂರಿಂದ ಅಭಿವೃದ್ಧಿಗೆ ಹಿನ್ನಡೆ

01:47 PM Jan 06, 2021 | Team Udayavani |

ಬೇತಮಂಗಲ: ಕೋಲಾರ ಜಿಲ್ಲೆಯಲ್ಲಿ ಸುಮಾರು 28 ವರ್ಷಗಳ ಕಾಲ ಸಂಸದರಾಗಿದ್ದಕೆ.ಎಚ್‌.ಮುನಿಯಪ್ಪ ಅವರಿಂದ ಕ್ಷೇತ್ರಅಭಿವೃದ್ಧಿಯಲ್ಲಿ ಬದಲಾವಣೆಯಾಗದೆಕುಂಠಿತವಾಗಿದೆ. ಕೆಜಿಎಫ್ ಕ್ಷೇತ್ರವು ಸಹಅಭಿವೃದ್ಧಿಯಾಗಲ್ಲ. ಬಿಜೆಪಿಯಿಂದ ಮಾತ್ರಅಭಿವೃದ್ಧಿ ಸಾಧ್ಯ ಎಂದು ಸಂಸದ ಎಸ್‌. ಮುನಿಸ್ವಾಮಿ ಹೇಳಿದರು.

Advertisement

ಗ್ರಾಮದ ಅಶ್ವಿ‌ನಿ ಕಲ್ಯಾಣ ಮಂಟಪದಲ್ಲಿಕೆಜಿಎಫ್ ಗ್ರಾಮಾಂತರ ಬಿಜೆಪಿ ಘಟಕದಿಂದಹಮ್ಮಿಕೊಂಡಿದ್ದ ನೂತನ ಗ್ರಾಪಂ ಸದಸ್ಯರಿಗೆಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿಸನ್ಮಾನಿಸಿ ಮಾತನಾಡಿದರು.

ಗ್ರಾಪಂ ಚುನಾವಣೆಯ ಅನೇಕಗ್ರಾಮಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸದಸ್ಯರಾಗಿದ್ದಾರೆ. ಅದೇ ರೀತಿಪ್ರತಿಸ್ಪರ್ಧಿಯಾಗಿಯೂ ಸೋತಿರುವುದರಿಂದಕೇಂದ್ರ-ರಾಜ್ಯ ಸರ್ಕಾರದ ಸಾಧನೆಗಳ ಹಾಗಕಾರ್ಯಕ್ರಮಗಳನ್ನು ಒಂದಾಗಿ ಶಾಂತಿಯುತವಾಗಿ ನಡೆಸಿಕೊಂಡು ಹೋಗಲುಸೂಚನೆ ನೀಡಿದರು.

28 ವರ್ಷ ಶೂನ್ಯ ಅಭಿವೃದ್ಧಿ: ಕೋಲಾರಜಿಲ್ಲೆಯಲ್ಲಿ ಸುಮಾರು 28 ವರ್ಷಗಳ ಕಾಲಸಂಸದರಾಗಿದ್ದ ಕೆ.ಎಚ್‌.ಮುನಿಯಪ್ಪ ಬದಲಾವಣೆಯಾಗದೆ ಕುಂಠಿತವಾಗಿದೆ. ಕೆಜಿಎಫ್ ಕ್ಷೇತ್ರವು ಸಹ ಅಭಿವೃದ್ಧಿಯಾಗಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ: ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶಕಲ್ಪಿಸುವುದಿಲ್ಲ. ಕೆಲವು ಕಾರಣಗಳಿಂದಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ನಡೆದಿದೆ.ಮುಂದಿನ ದಿನಗಳಲ್ಲಿ ಅದಕ್ಕೆ ಅವಕಾಶಕಲ್ಪಿಸುವುದಿಲ್ಲವೆಂದು ಪರೋಕ್ಷವಾಗಿ ಮಾಜಿಶಾಸಕ ವೈ.ಸಂಪಂಗಿಗೆ ಟಾಗ್‌ ನೀಡಿದರು.ಕೆಜಿಎಫ್ ತಾಲೂಕಿನಲ್ಲಿ ಸುಮಾರು 293ಗ್ರಾಪಂ ಸದಸ್ಯರ ಪೈಕಿ ಬಿಜೆಪಿ ಬೆಂಬಲಿತರೇ190ರಷ್ಟು ಮಂದಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

Advertisement

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾವಿವೇಕಾನಂದ ರೆಡ್ಡಿ, ರಾಜ್ಯ ಎಸ್ಸಿ ಮೋರ್ಚಾಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾಧ್ಯಕ್ಷಡಾ.ವೇಣುಗೋಪಾಲ್‌, ಕೆಡಿಎ ಮಾಜಿ ಅಧ್ಯಕ್ಷಮುನಿರತ್ನಂ ನಾಯ್ಡು ಸೇರಿದಂತೆ ಗಣ್ಯರು ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ನಾರಾಯಣ ಕುಟ್ಟಿ, ಎಸ್ಸಿ ಮೋರ್ಚಾ ಜಿಲ್ಲಾಉಪಾಧ್ಯಕ್ಷ ಜಿ.ಚಲಪತಿ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಓಂ ಸುರೇಶ್‌, ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್‌ ನಾಯ್ಡು, ನಗರ ಘಟಕಅಧ್ಯಕ್ಷ ಕಮಲ್‌, ಪ್ರಧಾನ ಕಾರ್ಯದರ್ಶಿಗಳಾದ ಹೇಮಾರೆಡ್ಡಿ, ಅನಂದ್‌ಗೌಡ, ಮುಖಂಡರಾದನವೀನ್‌ ರಾಮ್‌, ರಾಮಚಂದ್ರಪ್ಪ, ಮಣಿ,ಶಿವಪ್ಪ ನಾಯ್ಡು, ಯುವ ಮೋರ್ಚಾ ಅಧ್ಯಕ್ಷಅರುಣ್‌, ಎಸ್ಸಿ ಮೋರ್ಚಾ ಅಧ್ಯಕ್ಷಕೃಷ್ಣಮೂರ್ತಿ, ಉಪಾಧ್ಯಕ್ಷ ಹರೀಶ್‌,ಮಂಜುನಾಥ್‌, ಲಕ್ಷ್ಮೀನಾರಾಯಣ್‌, ಸುಧಾಕರ್‌, ಅಪ್ಪಿ, ಅನಿಲ್‌, ಅನಂದ್‌,ಲೋಕೇಶ್‌ ಸೇರಿದಂತೆ ಅನೇಕ ನೂತನ ಗ್ರಾಪಂಸದಸ್ಯರು ಮತ್ತು ಕಾರ್ಯಕರ್ತರು ಹಾಜರಿದ್ದರು.

ಕೆಜಿಎಫ್ ಕ್ಷೇತ್ರದಲ್ಲಿನ ಬಿಜಿಎಂಎಲ್‌ ಜಾಗವನ್ನು ಸಂಸದರಾದ ಮೇಲೆ ರಾಜ್ಯಸರ್ಕಾರಕ್ಕೆ ಹಸ್ತಾಂತರ ಮಾಡಿಕೈಗಾರಿಕೆಗಳ ಸ್ಥಾಪನೆಗೆ ಒತ್ತುನೀಡಲಾಗಿದೆ. ರಾಜ್ಯ-ಕೇಂದ್ರ ಮಂತ್ರಿ ಮಂಡಲದಿಂದಲೂ ಅನುಮೋದನೆ ದೊರಕಿದ್ದು, ಶೀಘ್ರ ಕೈಗಾರಿಕೆಗಳು ಕೆಜಿಎಫ್ ಕ್ಷೇತ್ರದಲ್ಲಿ ಸ್ಥಾಪನೆಯಾಗಿ ಸಾವಿರಾರೂ ಯುವ ಕರಿಗೆ ಉದ್ಯೋಗ ದೊರೆಯಲಿದೆ. ಎಸ್‌.ಮುನಿಸ್ವಾಮಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next