Advertisement
ನಿರಂತರವಾಗಿ ಮಳೆಯಾಗುತ್ತಿರುವ ಕಾರಣಹೂಗಳನ್ನು ಹೆಚ್ಚು ಕಾಲ ಶೇಖರಣೆ ಮಾಡಿದಲ್ಲಿ ಹಾಳಾಗುವ ಸಾಧ್ಯತೆಯಿಂದ ವ್ಯಾಪಾರಿಗಳು ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡಿ ನಷ್ಟ ನಿವಾರಿಸಿಕೊಳ್ಳಬೇಕಿದೆ.
Related Articles
Advertisement
ದಸರಾ: ಬೆಲೆ ಏರಿಕೆ ಬಿಸಿ :
ದೊಡ್ಡಬಳ್ಳಾಪುರ: ಈ ಬಾರಿ ಹಬ್ಬ ಉತ್ಸವಗಳಿಗೆ ಕೋವಿಡ್ ಕಂಕಟವಿದ್ದರೂ, ಹೂ, ಹಣ್ಣು, ಬಾಳೆಕಂದು, ಬೂದು ಕುಂಬಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ದುಬಾರಿಯಾಗಿವೆ.
ತಾಲೂಕಿನಲ್ಲಿ ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ಸ್ವಾಗತ ನಡೆದಿದ್ದು,ನಗರದ ಮಾರುಕಟ್ಟೆ ಪ್ರದೇಶದಲ್ಲಿಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಆದರೆ,ಹೂ, ಬೂದು ಕುಂಬಳದ ಬೆಲೆ ಗಗನಕ್ಕೇರಿವೆ. ಬೂದು ಕುಂಬಳಕಾಯಿಕೆಜಿಗೆ 30ರಿಂದ 40ರೂ ಇದೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ 700ರಿಂದ 800 ರೂ. ವರೆಗಿದ್ದರೆ, ಕನಕಾಂಬರ 1,400ರೂ. ಶಾಮಂತಿಗೆ, ಬಟನ್ಸ್ , ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿಗೆ 200 ದಾಟಿವೆ. ಬಾಳೆ ಹಣ್ಣು ಕೆಜಿಗೆ 30 ರಿಂದ 80ರೂ, ಸೇರಿದಂತೆ ಇತರಹಣ್ಣುಗಳ ಬೆಲೆಗಳೂ ಕೆಜಿಗೆ ಶೇ.20 ರಿಂದ 30 ರಷ್ಟು ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಆಯುಧ ಪೂಜೆಗಾಗಿ ಮಗ್ಗಗಳು ಯಂತ್ರಗಳು, ವಾಹನಗಳುಮೊದಲಾದವುಗಳನ್ನು ಶುದ್ದ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಬೀಳುತ್ತಿದ್ದು, ಹೂವುಗಳ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ. ಕೊರೊನಾದಿಂದ ನೇಕಾರಿಕೆ ಉದ್ಯಮ ಕುಸಿದಿದ್ದು, ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಬೇಕಿದೆ.
ಈ ನಡುವೆ ಈ ವರ್ಷ ಕೋವಿಡ್ ಕಂಟಕ ಎದುರಾಗಿದೆ. ಎಲ್ಲದಕ್ಕೂ ಬೆಲೆದುಬಾರಿಯಾಗಿವೆ. ಬೆಲೆ ಏರಿಕೆನೋಡಿದರೆ, ಹಬ್ಬ ಮಾಡಲು ಉತ್ಸಾಹ ಇಲ್ಲದಿದ್ದರೂ, ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು