ನವದೆಹಲಿ: ಹಬ್ಬಗಳ ಸೀಸನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡುವ ನಿಟ್ಟಿನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 36 ರೂಪಾಯಿ ಇಳಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
19ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25.50 ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ ಪ್ರಕಟಣೆ ಪ್ರಕಾರ, ಇಂದಿನಿಂದಲೇ (ಅಕ್ಟೋಬರ್ 01) ಹೊಸ ದರ ಅನ್ವಯವಾಗಲಿದೆ ಎಂದು ಹೇಳಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1885 ರೂಪಾಯಿಯಿಂದ 1859 ರೂಪಾಯಿಗೆ ಇಳಿಕೆಯಾಗಿದೆ. ಕೋಲ್ಕತಾದಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1995.50 ರೂ.ನಿಂದ 1959 ರೂ.ಗೆ ಇಳಿಕೆಯಾಗಿದೆ.
ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,844ರಿಂದ 1811.50 ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,045 ರೂ.ನಿಂದ 2,009.50 ರೂ.ಗೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಈ ಮೊದಲು ಸೆಪ್ಟೆಂಬರ್ ನಲ್ಲಿ ತೈಲ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿತ್ತು. ಜುಲೈ 6ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 8.5 ರೂಪಾಯಿಯಷ್ಟು ಇಳಿಕೆ ಮಾಡಿತ್ತು.
ಆದರೆ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೇ ತಿಂಗಳಿನಲ್ಲಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,354 ರೂಪಾಯಿಗೆ ಏರಿಕೆಯಾಗಿದ್ದು, ಜೂನ್ ನಲ್ಲಿ 2,219 ರೂ.ಗೆ ಇಳಿಕೆಯಾಗಿತ್ತು.