ಸುಳ್ಯ : ದೇಶದಲ್ಲಿ ನಡೆಯುವ ಪ್ರತಿಯೊಂದು ಹಬ್ಬ ಹರಿದಿನಗಳು ಧರ್ಮ, ಮತ ಭೇದವಿಲ್ಲದೆ ಸೌಹಾರ್ದತೆಯನ್ನು ಬೆಸೆಯುತ್ತಿವೆ. ಯಾವುದೇ ಧಾರ್ಮಿಕ ಹಬ್ಬಗಳು ಪ್ರೀತಿ ವಿಶ್ವಾಸಗಳನ್ನು ಬೆಳೆಸಿ ಈ ದೇಶದ ಸಮಗ್ರತೆ, ಸಾರ್ವಭೌಮತೆಯನ್ನು ಬೆಳೆಸು ವಂತಾಗಬೇಕು. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಗೌರವ ಕೊಟ್ಟರೆ ಎಲ್ಲ ಕೆಲಸವು ಸುಸೂತ್ರವಾಗಿ ನಡೆಯುತ್ತಿರುತ್ತದೆ ಎಂದು ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷ ಹಾಗೂ ರಾಜ್ಯ ತರಬೇತುದಾರ ಮಹಮ್ಮದ್ ಬಡಗನ್ನೂರು ತಿಳಿಸಿದರು.
ಅವರು ಸುಳ್ಯದ ಗ್ರೀನ್‌ವ್ಯೂ ಶಿಕ್ಷಣ ಸಂಸ್ಥೆಯ ವತಿಯಿಂದ ಶನಿವಾರ ನಡೆದ ಈದ್ ಸೌಹಾರ್ದ ಸಮ್ಮಿಲನದಲ್ಲಿ ಮಾತನಾಡಿದರು.
ಸಮಾರಂಭವನ್ನು ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಿಪ್ರಸಾದ್ ತುದಿಯಡ್ಕ ಅವರು ಉದ್ಘಾಟಿಸಿ, ಎಲ್ಲ ಧರ್ಮದವರು ಸೌಹಾರ್ದ ಯುತವಾಗಿ ನಡೆದುಕೊಂಡಾಗ ದೇಶದ ಅಭಿವೃದ್ಧಿಗೆ ವೇಗ ಬರುತ್ತದೆ ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಐ. ಇಸ್ಮಾಯಿಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕ ಚಂದ್ರಶೇಖರ್ ಪೇರಾಲು, ಅರಣ್ಯಾ ಧಿಕಾರಿ ಪ್ರಶಾಂತ್ ಪೈ, ನ್ಯಾಯವಾದಿ ಕುಂಞಿಪಳ್ಳಿ, ಅಬ್ಟಾಸ್ ಹಾಜಿ ಕಟ್ಟೆಕ್ಕಾರ್, ಎ.ಪಿ.ಎಂ.ಸಿ. ಸದಸ್ಯ ಆದಂ ಹಾಜಿ ಕಮ್ಮಾಡಿ, ನ.ಪಂ. ಸದಸ್ಯೆ ಪ್ರೇಮಾ ಟೀಚರ್, ರೋಟರಿ ಅಧ್ಯಕ್ಷ ಜಿತೇಂದ್ರ ನಿಡ್ಯಮಲೆ, ಪಿ.ಎ. ಮಹಮ್ಮದ್, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಲಗೋರಿ ಅಸೋಸಿಯೇಶನ್ ಜಿಲ್ಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಎಸ್. ಸಂಶುದ್ದೀನ್, ಮುಖ್ಯೋಪಾಧ್ಯಾಯ ಅಮರನಾಥ್, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಪದ್ಮನಾಭ ಅತ್ಯಾಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಂಜೆ ಉಪಸ್ಥಿತರಿದ್ದರು. ಸಂಚಾಲಕ ಬಿ.ಎಸ್. ಶರೀಫ್ ಸ್ವಾಗತಿಸಿ, ಕೆ.ಎಂ. ಮುಸ್ತಫಾ ಕಾರ್ಯ ಕ್ರಮ ನಿರ್ವಹಿಸಿದರು.