Advertisement

ದೀಪದ ನೆರಳು

07:13 PM Oct 25, 2019 | Suhan S |

ದೀಪದ ನೆರಳು

Advertisement

ಮನೆಯ ಅಂಗಳದಿ ದೀಪಗಳ ಸಾಲು..

ಆದರೂ ಮನದ ಅಂಗಳದಿ ಕತ್ತಲೆಯ ಬಾಳು..

ಸೌಮ್ಯವಾಗಿ ಬೆಳಗುತಿರುವ ಬೆಳಕು ನೋಡಿ,

ತಾಯಿತನದ ಹಂಬಲದಿ, ಎಲ್ಲವೂ ಇದ್ದು, ಇಲ್ಲದ ಹಾಗೆ

Advertisement

ಮೌನವಾಗಿ ಮಸಣದಲ್ಲಿ ಬೆಳುಗುವ ದೀಪವಾದ ಹೆಣ್ಣು .

 

ಮನೆಯ ಅಂಗಳದಿ ದೀಪಗಳ ಸಾಲು..

ಆದರೂ ಮನದ ಅಂಗಳದಿ ಕತ್ತಲೆಯ ಬಾಳು..

ತಾಯಿಯೇ ದೇವರು, ಸೂರ್ಯ ಚಂದ್ರ ಇರುವವರೆಗೂ

ಸತ್ಯವಾದ ಮಾತು, ಆದರೆ ಅತ್ತೆ ಆದಾಗ ಕ್ರೌರ್ಯ

ಮೆರೆದಾಡುವ ಪರಿಯ ನೋಡು..

ಮಕ್ಕಳಾಗದ ಸೊಸೆಗೆ ಅಸ್ತಿತ್ವ ಉಳಿಸಿಕೊಳ್ಳುವದೇ

ಒಂದು ಸಾಹಸದ ಪಾಡು…

ಮನೆಯ ಅಂಗಳದಿ ದೀಪಗಳ ಸಾಲು..

ಆದರೂ ಮನದ ಅಂಗಳದಿ ಕತ್ತಲೆಯ ಬಾಳು..

ಬಿಡಲೊಲ್ಲೆನು ಹಿಡಿದ ಪಟ್ಟು, ಕಾಣದ ಕೈಯೊಂದು ಹರಿಸಲಿಹದು.

ತಡೆ ನೋಡುವಿಯಂತೆ ನನ್ನ ಗತ್ತು..

 

ಪ್ರಕೃತಿಯ ಸುಂದರ ಸೃಷ್ಟಿ ಈ ಹೆಣ್ಣು.. ಅವಳ ಛಲಕ್ಕೆ,

ಅವಳ ಬಲಕ್ಕೆ ಅವಳೇ ಸಾಟಿ…

ಕಾರ್ಮೋಡ ಸರಿದು, ಕಾದ ಭುವಿಗೆ ಮಳೆ ಹನಿಯಾಗಿ

ತಂಪು ನೀಡುವಳು..

ಮನೆಯ ಅಂಗಳದಿ ಬೆಳಗಿದ ದೀಪ, ಮನದಂಗಳದಲ್ಲೂ ಬೆಳಗಲಿ…

ಏ ಹೆಣ್ಣೆ,  ಬಾನಂಗಳದಾಚೆ, ರೆಕ್ಕೆ ಬಿಚ್ಚಿ ಹಾರಡುವಂತಾಗಲಿ…

ಬೆಳಿಕಿನೆಡೆಗೆ  ನಿನ್ನ  ಭಾವದ ಪಯಣ ಅನಂತತೆಯ ಕಡೆ ಸಾಗಲಿ…

 

-ರೂಪಾ ಯುವರಾಜ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next