Advertisement

ಹನಿ ನೀರಾವರಿ ಜತೆ ಬೆರೆತ ರಸಗೊಬ್ಬರ

12:46 PM Nov 19, 2018 | Team Udayavani |

ಬೆಂಗಳೂರು: ನೀರಿನ ಜತೆಗೆ ಗೊಬ್ಬರವನ್ನು ಸೇರಿಸಿ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳಿಗೆ ನೀರು ಮತ್ತು ಗೊಬ್ಬರವನ್ನು ಏಕಕಾಲದಲ್ಲಿ ಹಾಯಿಸಬಹುದಾದ ತಂತ್ರಜ್ಞಾನದ ಅನಾವರಣ ಕೃಷಿ ಮೇಳದಲ್ಲಾಗಿದೆ.

Advertisement

ಜೈನ್‌ ಇಂಟಿಗ್ರೇಟೆಡ್‌ ಅಟೋಮೇಷನ್‌ ಸಿಸ್ಟಮ್‌ ಆಧುನಿಕ ತಂತ್ರಜ್ಞಾನದ ಈ ಯಂತ್ರವು ಬೆಳೆಯ ಗುಣಲಕ್ಷಣಕ್ಕೆ ಸರಿಹೊಂದುವಂತೆ ನೀರು ಮತ್ತು ಗೊಬ್ಬರವನ್ನು ಸಮ್ಮಿಶ್ರಗೊಳಿಸಿ ಹನಿ ನೀರಾವರಿ ಪದ್ಧತಿಯಲ್ಲೇ ಬೆಳಗಳಿಗೆ ನೀರುಣಿಸುತ್ತದೆ. ಇದು ರೈತರಿಗೆ ಹೆಚ್ಚು ಉಪಯೋಗಕಾರಿಯಾಗಿದ್ದು, ಸಮಯದ ಉಳಿತಾಯ ಮಾಡಲಿದೆ. ಬೆಳೆಗಳಿಗೆ ಗೊಬ್ಬರವನ್ನು ಪ್ರತ್ಯೇಕವಾಗಿ ಸಿಂಪಡಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ತೆರೆದ ಬಾವಿ ಅಥವಾ ಕೊಳವೆ ಬಾಯಿಂದ ಪಂಪ್‌ಸೆಟ್‌ ಮೂಲಕ ನೀರು ಬೆಳೆಗಳಿಗೆ ಹಾಯಿಸುವವರಿಗೆ ಈ ಯಂತ್ರ ಅತಿ ಹೆಚ್ಚು ಅನುಕೂಲವಾಗಲಿದೆ. ಜೈನ್‌ ಇಂಟಿಗ್ರೇಟೆಡ್‌  ಅಟೋಮೇಷನ್‌ ಸಿಸ್ಟಮ್‌ ಅಳವಡಿಸಿದರೆ, ಪಂಪ್‌ಸೆಟ್‌ನಿಂದ ನೀರು ಸ್ಟ್ರೀನ್‌ ಫಿಲ್ಟರ್‌ ಮೂಲಕ ನೇರವಾಗಿ ಹೊಲಕ್ಕೆ ಹೋಗುವುದಿಲ್ಲ. ಬದಲಾಗಿ, ನೀರಿನ ಜತೆಗೆ ರಸಗೊಬ್ಬರವೂ ಬೆಳೆಗೆ ಏಕಕಾಲದಲ್ಲಿ ಸೇರಲಿದೆ.

ಜೈನ್‌ ಇಂಟಿಗ್ರೇಟೆಡ್‌ ಅಟೋಮೇಷನ್‌ ಸಿಸ್ಟಮ್‌ನಲ್ಲಿ ನೀರು ಮತ್ತು ರಸಗೊಬ್ಬರ ಮಿಕ್ಸರ್‌, ರಸಗೊಬ್ಬರ ಟ್ಯಾಂಕ್‌, ಏರ್‌ ಫಿಲ್ಟರ್‌, ಅಡಜೆಸ್ಟೇಬಲ್‌ ಫ್ಲೋ ಮಿಕ್ಸರ್‌ ಇತ್ಯಾದಿ ಇರುತ್ತದೆ. ರಸಗೊಬ್ಬರ ಟ್ಯಾಂಕ್‌ನಿಂದ ರಸಗೊಬ್ಬರ ನೇರವಾಗಿ ನೀರು ಮತ್ತು ರಸಗೊಬ್ಬರ ಮಿಕ್ಸರ್‌ ಯಂತ್ರಕ್ಕೆ ತಲುಪಲಿದೆ. ಈ ಸಂದರ್ಭದಲ್ಲಿ ರಸಗೊಬ್ಬರದ ಹರಿವಿಕೆಯ ವೇಗ ಹೆಚ್ಚು ಅಥವಾ ಕಡಿಮೆ ಮಾಡಲು ಅವಕಾಶ ಇದೆ.

ಅಲ್ಲಿಂದ ನೇರವಾಗಿ ಮಿಕ್ಸರ್‌ ಮೂಲಕ ನೀರನ್ನು ಸೇರುತ್ತದೆ. ಈ ಯಂತ್ರ ನೀರು ಮತ್ತು ರಸಗೊಬ್ಬರವನ್ನು ಸಮ್ಮಿಶ್ರಗೊಳಿಸಿ, ಫಿಲ್ಟರ್‌ ಮಾಡಿ ನೇರವಾಗಿ ಹೊಲಕ್ಕೆ ಕಳುಹಿಸುತ್ತದೆ ಎಂದು ಜೈನ್‌ ಇಂಟಗ್ರೇಟೆಡ್‌ ಅಟೋಮೇಷನ್‌ ಸಿಸ್ಟಮ್‌ ಸಂಸ್ಥೆಯ ರವಿ ವಿವರಿಸಿದರು.

Advertisement

ಈ ಯಂತ್ರವು ರೈತರ ಶ್ರಮದ ಉಳಿತಾಯದ ಜತೆಗೆ ನೀರಿನ ಮಿತ ವ್ಯಯ ಮಾಡಲಿದೆ. ಅತ್ಯಂತ ಸುಲಭ ಹಾಗೂ ಸರಳವಾಗಿ ಈ ಯಂತ್ರವನ್ನು ರೈತರು ನಿರ್ವಹಣೆ ಮಾಡಬಹುದಾಗಿದೆ. ನೀರು ಮತ್ತು ರಸಗೊಬ್ಬರದ ಬಳಕೆಯ ಪ್ರಮಾಣವನ್ನು ಬೆಳೆ ಹಾಗೂ ಜಮೀನಿನ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿಸಿಕೊಳ್ಳಲು ಅವಕಾಶ ಇದೆ.

ರಾತ್ರಿ ವೇಳೆಯಲ್ಲೂ ಈ ಯಂತ್ರವನ್ನು ಯಾವುದೇ ಆತಂಕ ಇಲ್ಲದೆ ನಡೆಸಹುದಾಗಿದೆ. ಇದು ಇಂಧನ, ನೀರು ಹಾಗೂ ದುಬಾರಿ ವೆಚ್ಚಕ್ಕೂ ಕಡಿವಾಣ ಹಾಲಿದೆ. ಒಂದು ಎಕರೆ ಪ್ರದೇಶದ ಕೃಷಿ ಭೂಮಿಗೆ ಈ ಯಂತ್ರದ ಮೂಲಕ ನೀರು ಹಾಗೂ ರಸಗೊಬ್ಬರ ಹಾಯಿಸಲು 70 ಸಾವಿರ ಮೌಲ್ಯದ ಯಂತ್ರ ಬಳಕೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಸ್ವಯಂ ಚಾಲಿತ ವ್ಯವಸ್ಥೆ: ಹನಿ ನೀರಾವರಿ ಪದ್ಧತಿ ಇದಾಗಿರುವುದರಿಂದ ಇದರಲ್ಲಿ ಸ್ವಯಂ ಚಾಲಿತ ವ್ಯವಸ್ಥೆ ಅಳವಡಿಸಲಾಗಿದೆ. ರೈತರು ತಮಗೆ ಬೇಕಾದ ಸಮಯವನ್ನು ನಿಗದಿ ಪಡಿಸಿದರೆ, ಆ ಸಮಯದಲ್ಲಿ ನೀರು ಹಾಗೂ ಗೊಬ್ಬರ ಬೆಳೆಗೆ ಹಾಯಿಸಬಹುದಾಗಿದೆ.

ಯಂತ್ರ ಚಾಲಿತವಾಗಿದ್ದಾಗ ವಿದ್ಯುತ್‌ ನಿಂತು ಹೋದರೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ವಿದ್ಯುತ್‌ ಬಂದ ನಂತರ ಯಂತ್ರ ತಾನಾಗಿಯೇ ಕಾರ್ಯನಿರ್ವಹಿಸುತ್ತದೆ ಮತ್ತು ಪೂರ್ವ ನಿಗದಿಯ ಸಮಯದಷ್ಟೇ ಯಂತ್ರ ರನ್‌ ಆಗಲಿದೆ ಎಂದು ವಿವರಿಸಿದರು.

ಪಾತ್ಯಕ್ಷಿಕೆ: ಕೃಷಿ ಮೇಳದಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆ ಇಡಲಾಗಿದ್ದು, ತೆರೆದ ಬಾವಿಯ ಮೂಲಕ ನೀರು ಹಾಗೂ ರಸಗೊಬ್ಬರ ಹನಿ ನೀರಾವರಿ ಪದ್ಧತಿಯಲ್ಲಿ ಹೇಗೆ ಬೆಳೆ ಸೇರುತ್ತದೆ ಎಂಬುದನ್ನು ಸುಲಭವಾಗಿ ರೈತರಿಗೆ ವಿವರಿಸಲಾಯಿತು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next