Advertisement

ಫ‌ರ್ಜಿ ಕೆಫೆ ಪುನರ್‌ ಪುನಾರಂಭ

12:37 PM Mar 21, 2018 | |

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಯುಬಿ ಸಿಟಿಯ ಫ‌ರ್ಜಿ ಕೆಫೆ ಯಲ್ಲಿ ಕಾರ್ಯಚಟುವಟಿಕೆ  ಪುನರ್‌ ಆರಂಭಿಸಲು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಅನುಮತಿ ನೀಡಿದ್ದಾರೆ. ಮೊಹಮದ್‌ ನಲಪಾಡ್‌ ರಾದ್ಧಾಂತ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪೊಲೀಸರು, ಫ‌ರ್ಜಿ ಕೆಫೆ ಮಾಲೀಕರಿಗೆ ಹಲವು ಷರತ್ತುಗಳನ್ನು ವಿಧಿಸಿ ಕಾರ್ಯಚಟುವಟಿಕೆ ಆರಂಭಿಸಲು ಅನುಮತಿ ನೀಡಿದ್ದಾರೆ. 

Advertisement

ನಿಗದಿತ ಟೇಬಲ್‌ಗ‌ಳಿಗಿಂತ ಹೆಚ್ಚು ಜನರಿಗೆ ಪ್ರವೇಶ ನೀಡಬಾರದು. ಕೆಫೆಯಲ್ಲಿ ಧೂಮಪಾನಕ್ಕೆ ಅವಕಾಶ ಮಾಡಿಕೊಡಬಾರದು. ಏನಾದರೂ ಗಲಾಟೆ ನಡೆದರೆ  ತಕ್ಷಣ ಪೊಲೀಸರ ಗಮನಕ್ಕೆ ತರಬೇಕು. ಸುರಕ್ಷಾತಾ ದೃಷ್ಟಿಯಿಂದ ಹೆಚ್ಚುವರಿ  ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಗ್ರಾಹಕರಿಗೆ ಭದ್ರತೆ ಸೇರಿ ಇನ್ನಿತರೆ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಕೀತು ಮಾಡಿ ಅನುಮತಿ ನೀಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಫ‌ರ್ಜಿ ಕೆಫೆಯಲ್ಲಿ ಫೆ.17ರಂದು ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲೆ ಶಾಸಕ ಎನ್‌.ಎ ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ ಹಾಗೂ ಆತನ ಸಹಚರರು ಮಾರಣಾಂತಿಕ ಹಲ್ಲೆ  ನಡೆಸಿದ್ದರು. ಪ್ರಕರಣ ಚರ್ಚೆಗೆ ಗ್ರಾಸವಾಗಿದ್ದ ಈ ಘಟನೆ ಬಳಿಕ ಪೊಲೀಸರು, ತನಿಖೆ ಭಾಗವಾಗಿ ಫ‌ರ್ಜಿ ಕೆಫೆಯನ್ನು ಒಂದು ತಿಂಗಳು ಬಂದ್‌ ಮಾಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next