Advertisement
ಆರೋಗ್ಯ ಕಾಪಾಡುವಲ್ಲಿ ಸೊಪ್ಪು ಪ್ರಮುಖ ಪಾತ್ರವಹಿಸುತ್ತದೆ. ಪುದಿನ, ಪಾಲಕ್, ಅರಿವೆ, ಬಸಳೆ ಮೆಂತ್ಯೆ ಎಲ್ಲವು ಆರೋಗ್ಯಕರ. ಇವುಗಳಲ್ಲಿ ಹೆಚ್ಚು ಪೋಷಕಾಂಶಗಳು ತುಂಬಿರುವುದರಿಂದ ಮನುಷ್ಯನನ್ನು ಆಯೋಗ್ಯಕರವಾಗಿರುವಂತೆ ಮಾಡುತ್ತವೆ. ಮೆಂತ್ಯೆ ಸೊಪ್ಪು ಕಹಿ ರುಚಿಯನ್ನು ಹೊಂದಿದ್ದರೂ ಪೋಷಕಾಂಶಗಳಿಂದ ಶ್ರೀಮಂತವಾಗಿದೆ. ದಿನನಿತ್ಯದ ಆಹಾರದಲ್ಲಿ ಮೆಂತ್ಯೆ ಸೊಪ್ಪು ಸೇವನೆ ದೇಹದ ಆರೋಗ್ಯವನ್ನು ಉತ್ತಮವಾಗಿರಿಸುವಲ್ಲಿ ಸಹಕಾರಿ
1. ರಕ್ತದ ಕೊಲೆಸ್ಟ್ರಾಲ್ ಕಡಿಮೆ
ಮೆಂತ್ಯೆ ಸೊಪ್ಪು ಸೇವನೆಯಿಂದ ರಕ್ತದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. 2. ಹೃದಯ ಸಂಬಂಧಿ ಕಾಯಿಲೆಗೆ ಉತ್ತಮ
ಮೆಂತ್ಯೆ ಸೊಪ್ಪು ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಸಂಭವ ಕಡಿಮೆಯಿಯುತ್ತದೆ.
Related Articles
ಡಯೆಟ್ ಮಾಡುವವರಿಗೆ ಮೆಂತ್ಯೆ ಸೇವನೆ ಹೆಚ್ಚು ಉಪಕಾರಿ. ಇದರಿಂದ ಅನಗತ್ಯ ಕೊಬ್ಬನ್ನು ಕಡಿಮೆಯಾಗುತ್ತದೆ.
Advertisement
4. ಮಹಿಳೆಯರಿಗೆ ಉಪಕಾರಿಮೆಂತ್ಯೆ ಸೊಪ್ಪು ಸೇವನೆಯಿಂದ ಗರ್ಭಿಣಿ ಮಹಿಳೆಯರಿಗೆ ಸುಲಭ ಹೆರಿಗೆಗೆ ಸಹಕಾರಿ. ಆದರೆ ಅತಿಯಾದ ಸೇವನೆ ಅಪಾಯಕಾರಿಯೂ ಹೌದು. ಹೇಗೆ ಸೇವಿಸಬಹುದು?
ಮೆಂತ್ಯೆಯನ್ನು ಪಲ್ಯ, ತಂಬುಳಿ ಅಥವಾ ಮೆಂತ್ಯೆ ರೈಸ್ ಬಾತ್ ಹೀಗೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸುವ ಮೂಲಕ ಸೇವಿಸಬಹುದು. ಇದರೊಂದಿಗೆ ಮೆಂತ್ಯೆ ಕಾಳು, ಮೆಂತ್ಯೆ ಹುಡಿ ಕೂಡ ಆರೋಗ್ಯ ವೃದ್ದಿಗೆ ಸಹಕಾರಿಯಾಗಿದೆ. ಇವುಗಳನ್ನು ಅಡುಗೆಯಲ್ಲಿ ಬಳಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು.
ವಾಟರ್‌ಮೈಂಡರ್
ದೇಹದ ಆರೋಗ್ಯ ಸುಸ್ಥಿರದಲ್ಲಿರಬೇಕಾದರೆ ದೇಹಕ್ಕೆ ಅಗತ್ಯವಿರುವ ನೀರು ಸೇರಬೇಕು. ಆದರೆ ಇಂದು ಅನೇಕರು ದೇಹಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟು ನೀರನ್ನು ಕುಡಿಯುವುದಿಲ್ಲ. ದೇಹದ ಅಂಗಾಂಗಗಳ ಕಾರ್ಯ ಸುಗಮವಾಗಿ ಸಾಗಲು ಪ್ರತಿದಿನ 2-3 ಲೀ ನೀರು ಕುಡಿಯುವ ಅಗತ್ಯವಿದೆ. ಆದರೆ ಇದನ್ನು ಅನುಸರಿಸಲು ಕಷ್ಟ. ಪ್ರತಿದಿನ ನೀರು ಕುಡಿಯಲು ನೆನಪಿಸುವ ಆ್ಯಪ್ ವಾಟರ್‌ಮೈಂಡರ್. ದೇಹದ ತೂಕ ಅಥವಾ ವೈಯಕ್ತಿಕ ಗುರಿಯ ಆಧಾರದ ಮೇಲೆ ಎಷ್ಟು ನೀರಿನ ಆವಶ್ಯಕತೆ ಇದೆ ಎಂಬುದನ್ನು ತಿಳಿಸುತ್ತದೆ. ದಿನಪೂರ್ತಿ ಸಂದೇಶಗಳನ್ನು ಕಳಿಸುವ ಮೂಲಕ ನೀರು ಕುಡಿಯುವಂತೆ ಇದು ಎಚ್ಚರಿಸುತ್ತದೆ. - ರಂಜಿನಿ ಮಿತ್ತಡ್ಕ