Advertisement
ದೇಯಿ ಬೈದ್ಯೆತಿ ಮೂರ್ತಿಗೆ ಅವಮಾನ ಪ್ರಕರಣ ನಡೆದ ಬಳಿಕ ಮುಡಿಪಿನಡ್ಕ ಔಷಧವನ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಈ ಔಷಧ ವನದೊಳಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದ ಅರಣ್ಯ ಇಲಾಖೆ ಕುಟೀರದೊಳಗೂ ನಿರ್ಬಂಧ ಹೇರಿರಲಿಲ್ಲ. ಇದನ್ನು ದುರುಪಯೋಗ ಮಾಡಿದ ಸ್ಥಳೀಯ ಯುವಕರ ತಂಡವೊಂದು ಮೂರ್ತಿಯ ಜತೆ ಅಶ್ಲೀಲವಾಗಿ ಫೋಟೋ ತೆಗೆದು ಜಾಲತಾಣಗಳಲ್ಲಿ ಹರಿಯಬಿಟ್ಟಿತ್ತು. ಇದು ದೊಡ್ಡ ಮಟ್ಟಿನ ಚರ್ಚೆ, ಪ್ರತಿಭಟನೆಗಳಿಗೆ ಗ್ರಾಸವಾಗಿದ್ದಲ್ಲದೆ ಶುದ್ಧೀಕರಣವೂ ನಡೆಯಿತು.
ಸಣ್ಣ ಕುಟೀರ, ಹೊರಭಾಗದಲ್ಲಿ ಔಷಧ ಅರೆಯುತ್ತಿರುವ ನಾಟಿ ವೈದ್ಯೆ ದೇಯಿ ಬೈದ್ಯೆತಿ, ಬಾಲಕೋಟಿ-ಚೆನ್ನಯರ ವಿಗ್ರಹ ಇಡಲಾಗಿದೆ. ಸದುದ್ದೇಶದಿಂದ ನಿರ್ಮಿಸಿರುವ ಈ ಔಷಧವನ ಯಾವುದೇ ಕಾರಣಕ್ಕೂ ಕೆಟ್ಟ ವಿಚಾರಗಳಿಗೆ ಆಸ್ಪದವಾಗಬಾರದು ಎಂದು ಅರಣ್ಯ ಸಚಿವ ರಮಾನಾಥ ರೈ ಅವರ ಸೂಚನೆ ಮೇರೆಗೆ ಕಬ್ಬಿಣದ ಜಾಲರಿ ಅಳವಡಿಸಿದ್ದೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದೆ ಕುಟೀರದ ಒಳಗಡೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.