Advertisement
ಸಮಾಜಗಳು, ಸಮುದಾಯಗಳು ಬದುಕಿ ಉಳಿಯುವ ಹೋರಾಟಕ್ಕಿಂತ ಒಂದು ಹೆಜ್ಜೆ ಮೇಲಕ್ಕೆ ತಲುಪಿ, ಒಂದು ನಿರ್ದಿಷ್ಟ ಮಟ್ಟದ ಸ್ಥಿರ ಸಂಸ್ಕೃತಿ, ನಾಗರಿಕತೆಯಾಗಿ ವಿಕಸನಗೊಂಡ ಬಳಿಕ ಅಲ್ಲಿ ಸ್ತ್ರೀತ್ವ ಅರಳಬೇಕು. ಇವತ್ತು ನಾವು ಅಂತಹ ಸ್ಥಿತಿಯನ್ನು ತಲುಪಿದ್ದೇವೆ. ದುರದೃಷ್ಟ ಎಂದರೆ ಆರ್ಥಿಕತೆಯು ಇಂದು ನಿರ್ಣಾಯಕ ಶಕ್ತಿಯಾಗಿ ಬಿಟ್ಟಿದೆ.
Related Articles
Advertisement
ವಿತ್ತವೇ ಚಾಲನ ಶಕ್ತಿಯಾಗಿರುವಾಗ ಮಹಿಳೆಯೂ ಸ್ತ್ರೀತ್ವವನ್ನು ತೊರೆಯಬೇಕಾದ ಸಂದರ್ಭ ಎದುರಾಗುವ ಅಪಾಯವಿದೆ. ಬದುಕುಳಿಯುವುದು ಈಗ ಬೇರೆ ಬೇರೆ ರೂಪ, ಆಯಾಮಗಳಲ್ಲಿ ಮುನ್ನೆಲೆಯಲ್ಲಿದೆ. ಇವತ್ತು ಈ “ಬದುಕುಳಿಯುವುದು’ ಎಂದರೆ ಮರ್ಸಿಡಿಸ್ ಕಾರು, ಕೆಜಿಗಟ್ಟಲೆ ಚಿನ್ನಾಭರಣ… ಇಂತಹ ರೂಪಗಳಲ್ಲಿದೆ. ಇದು ಮುಂದುವರಿದರೆ ಸ್ತ್ರೀತ್ವಕ್ಕೆ ಸಮಾಜದಲ್ಲಿ ನೆಲೆಯಿಲ್ಲದಾಗುತ್ತದೆ.
ಸ್ತ್ರೀತ್ವ ಮುಖ್ಯ ಗುಣಸ್ವಭಾವ, ನಮ್ಮಲ್ಲಿ ಬೆಳೆದುಬರಬೇಕು ಎಂಬುದನ್ನು ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಮೂಡಿಸಬೇಕಿದೆ. ಮಕ್ಕಳು ವಿಜ್ಞಾನ, ತಂತ್ರ ಜ್ಞಾನ, ಗಣಿತಗಳಂತೆ ಸಂಗೀತ, ಕಲೆ, ತಣ್ತೀಜ್ಞಾನ, ಸಾಹಿತ್ಯಗಳಲ್ಲೂ ಅಭಿರುಚಿ ಬೆಳೆಸಿಕೊಳ್ಳಬೇಕು. ಇದಾಗದಿದ್ದರೆ ದೈಹಿಕವಾಗಿ ನಾರಿಯರಾಗಿರಬಹುದು, ಆದರೆ ಸ್ತ್ರೀತ್ವ ಇರಲಾರದು.
ಪುರುಷತ್ವ ಬೇರು ಇದ್ದಂತೆ, ಸ್ತ್ರೀತ್ವ ಹೂವು- ಹಣ್ಣುಗಳಂತೆ. ಬೇರಿನ ಅಸ್ತಿತ್ವದ ಉದ್ದೇಶ ಮರದಲ್ಲಿ ಹೂವು-ಹಣ್ಣುಗಳನ್ನು ಅರಳಿಸು ವುದು. ಅದಾಗದಿದ್ದರೆ ಬೇರು ಇದ್ದೂ ವ್ಯರ್ಥ. ಸ್ತ್ರೀತ್ವ ಅರಳದ ಸಮಾಜದ ಸ್ಥಿತಿ ಹೀಗೆ.
ನಾವು ಗಂಡಾಗಿರಬಹುದು, ಹೆಣ್ಣಾಗಿರ ಬಹುದು; ಸ್ತ್ರೀತ್ವವು ಕೊನರದೆ ಇದ್ದರೆ ಬದುಕಿನ ಅನೇಕ ನವಿರು ಸೂಕ್ಷ್ಮಗಳು ನಮ್ಮ ಅನುಭವಕ್ಕೆ ಸಿಗಲಾರವು. ಬದುಕಿಡೀ ಬದುಕುಳಿಯುವ ಹೋರಾಟವಾದೀತು. ಪುರುಷತ್ವವು ಗೆಲ್ಲುವುದರ ಬಗ್ಗೆ ಚಿಂತಿಸುತ್ತದೆ. ಆದರೆ ಸ್ತ್ರೀತ್ವವು ಅರಳುವುದು, ವಿಶ್ರಮಿಸು ವುದು, ಲವಲವಿಕೆಯಿಂದಿರುವುದು ಮತ್ತು ಜೀವಿಸುವುದು. ಈ ಪರಿವರ್ತನೆ ಈಗಿಂದೀಗಲೇ ಆಗಬೇಕು.