Advertisement

ಹೆಣ್ಣು ಪಿಶಾಚಿಗೆ ಹೆದರಿ ಹಳ್ಳಿ ತೊರೆದ ಗಂಡಸರು!

07:05 AM Oct 17, 2017 | Team Udayavani |

ಹೈದರಾಬಾದ್‌: ದೆವ್ವ, ಭೂತಗಳಿಗೆ ಹೆದರಿ ದೇವರು, ಮಾಟ, ಮಂತ್ರಗಳ ಮೊರೆ ಹೋಗುವುದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಂದು ಹಳ್ಳಿಯಲ್ಲಿ ದೆವ್ವವಿದೆ ಎಂಬುದನ್ನು ನಂಬಿರುವ ಅಲ್ಲಿನ ಗಂಡಸರೆಲ್ಲಾ ಹಳ್ಳಿಬಿಟ್ಟು ಪರಾರಿಯಾಗಿದ್ದಾರೆ!

Advertisement

ಅಚ್ಚರಿಯಾದರೂ ಇದು ಸತ್ಯ. ಹೀಗಾಗಿರುವುದು ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಸಿಗುಡದಲ್ಲಿ. ಈ ಹಳ್ಳಿಯಲ್ಲಿ ಹೆಣ್ಣು ಪಿಶಾಚಿಯೊಂದು ನೆಲೆಯೂರಿದೆ ಎಂಬ ವದಂತಿ ಹರಡಿದ್ದು, ಈ ಪಿಶಾಚಿಯು ಪುರುಷ ದ್ವೇಷಿಯಾಗಿದ್ದು ಪುರುಷರನ್ನು ಒಬ್ಬೊಬ್ಬರಾಗಿ ಕೊಲ್ಲುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ, ಇತ್ತೀಚೆಗೆ, ಆ ಹಳ್ಳಿಯ ಇಬ್ಬರು ಸಹೋದರರು ಹಾಗೂ ಮತ್ತೂಬ್ಬ ವ್ಯಕ್ತಿ ಪ್ರತ್ಯೇಕ ಘಟನೆಗಳಲ್ಲಿ ನಿಗೂಢವಾಗಿ ಹತರಾಗಿರುವುದು ಈ ಪಿಶಾಚಿ ವದಂತಿಗಳಿಗೆ ಜೀವ ತುಂಬಿದೆ.

ಇದರಿಂದ ಭೀತಿಗೊಂಡು ದಿಕ್ಕೆಟ್ಟಿರುವ ಆ ಹಳ್ಳಿಯ ಗಂಡಸರು ದಿಕ್ಕಾಪಾಲಾಗಿ ಆ ಹಳ್ಳಿಯಿಂದ ಕಾಲ್ಕಿತ್ತಿದ್ದಾರೆ. ಆ ಪಿಶಾಚಿಯ ನಿರ್ಮೂಲನೆಯಾಗುವವರೆಗೂ ಹಳ್ಳಿಗೆ ಬರದಿರಲು ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ, ಈಗ ಆ ಹಳ್ಳಿಯಲ್ಲಿ ಹೆಂಗಸರೇ ಜೀವಿಸುತ್ತಿದ್ದಾರೆಂದು ಹೇಳಲಾಗಿದೆ. ಪಿಶಾಚಿಗಳು ಹೆಂಗಸರಿಗೆ ಏನೂ ಮಾಡುತ್ತಿಲ್ಲ ಎನ್ನುತ್ತಾರೆ ಅಲ್ಲಿನ ಮಹಿಳೆಯರು.

Advertisement

Udayavani is now on Telegram. Click here to join our channel and stay updated with the latest news.

Next