Advertisement

ಗುಡಿಸಲಿನಲ್ಲಿ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಹೆಣ್ಣು ಚಿರತೆ : ವಿಡಿಯೋ ವೈರಲ್

10:25 AM Aug 19, 2020 | sudhir |

ನಾಸಿಕ್ : ಹೆಣ್ಣು ಚಿರತೆಯೊಂದು ಗುಡಿಸಲಿನಲ್ಲಿ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement

ನಾಸಿಕ್ ನ ಈಗಟಪುರಿ ಪ್ರದೇಶದಲ್ಲಿರುವ ಗುಡಿಸಲಿನಲ್ಲಿ ಹೆಣ್ಣು ಚಿರತೆ ಮಂಗಳವಾರ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿ ಸುದ್ದಿ ಸಂಸ್ಥೆ ಎಎನ್ಐ ಇದರ ವಿಡಿಯೋ ತುಣುಕನ್ನು ಟ್ವಿಟ್ಟರ್ ನಲ್ಲಿ ಹಂಚಿದ್ದು ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ವಿಡಿಯೋ ದಲ್ಲಿ ನಾಲ್ಕು ಮುದ್ದಾದ ಮರಿಗಳು ಸ್ವಚ್ಛಂದವಾಗಿ ಆಟವಾಡುತ್ತಿರುವುದು ಕಂಡುಬರುತ್ತದೆ ಜೊತೆಗೆ ಗುಡಿಸಲಿನ ಒಂದು ಬದಿಯಲ್ಲಿ ತಾಯಿ ಚಿರತೆ ಇರುವುದು ಗೋಚರಿಸುತ್ತದೆ.

ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಯಾದ ಗಣೇಶ್ ರಾವ್ ಜೋಲಿ ನಾಲ್ಕು ಮರಿಗಳು ಸುರಕ್ಷಿತ ಹಾಗೂ ಆರೋಗ್ಯವಾಗಿವೆ ಅವುಗಳ ಚಲನವಲನಗಳ ಕುರಿತು ವಿಡಿಯೋ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ ಎಂದಿದ್ದಾರೆ.

ಇನ್ನು ಚಿರತೆ ಮರಿಗಳನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಲು ನಾವು ಕಾಯುತ್ತಿದ್ದೇವೆ. ಮರಿಗಳು ಇರುವ ಕಾರಣದಿಂದಾಗಿ, ನಾವು ಈಗ ಚಿರತೆಯನ್ನು ಹಿಡಿಯಲು ಸಾಧ್ಯವಿಲ್ಲ ಪರಿಸ್ಥಿತಿ ನೋಡಿಕೊಂಡು ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.

Advertisement

ಈಗಟಪುರಿ ಪ್ರದೇಶದಲ್ಲಿ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬಗ್ಗೆ ನಮಗೆ ಮಾಹಿತಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next