Advertisement

ಕೋವಿಡ್ ವಾರಿಯರ್ಸ್ ಗೆ ಸನ್ಮಾನ

07:05 AM Jun 23, 2020 | Suhan S |

ಹಾವೇರಿ: ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಯಂತಿ ನಿಮಿತ್ತ ಕೋವಿಡ್ ವಾರಿಯರ್ಸ್ ಗೆ ಸನ್ಮಾನ, ಗಡಿಯಲ್ಲಿ ಚೀನಿಯರೊಂದಿಗೆ ಹೋರಾಡಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹೊಸಮಠದಲ್ಲಿ ನಡೆಯಿತು.

Advertisement

ಮುರುಘೇಂದ್ರ ಶಿವಯೋಗಿಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮೌನಾಚರಣೆ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಮುರುಘೇಂದ್ರ ಶಿವಯೋಗಿಗಳು ವಚನ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತುಕೊಂಡು ಅದಕ್ಕೆ ಅಪ್ಪನ ಸ್ಥಾನ ಕೊಟ್ಟರು. ಜಾತಿಭೇದಗಳ ಬೇರು ಕಿತ್ತೂಗೆದು ಶಾಂತಿಯ ಸೂತ್ರ ಸಮಾಜದಲ್ಲಿ ಬಿತ್ತಿದರು. ಪವಾಡಕ್ಕಿಂತ ಪರಿವರ್ತನೆ ಮುಖ್ಯ ಎಂದು ಸಾರಿದರು.  ಆಡಂಬರದ ಬದುಕಿಗಿಂತ ನಿರಾಡಂಬರದ ಬದುಕು ನಡೆಸಿದರು ಎಂದರು.

ಜಿಲ್ಲಾಸ್ಪತ್ರೆ ವೈದ್ಯ ಡಾ.ವಿಶ್ವನಾಥ ಸಾಲಿಮಠ, ಶೂಶ್ರೂಷಕಿ ತಫುಲ್ಲ ಪಠಾಣ, ಅಂಬ್ಯುಲೆನ್ಸ್‌ ಚಾಲಕ ಶಂಕರ್‌, ಪೊಲೀಸ್‌ ವಿ.ಎಸ್‌. ಪಾಟೀಲ್‌ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ನಾಗೇಂದ್ರ ಕಟಕೋಳ, ಪರಮೇಶಪ್ಪ ಮೇಗಳಮನಿ, ಡಾ| ಬಸವರಾಜ ವಿರಾಪೂರ, ಮುರಿಗೆಪ್ಪ ಕಡೆಕೊಪ್ಪ, ಜಯದೇವ ಕೆರೊಡಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next