Advertisement

ಜೀವದ ಹಂಗು ತೊರೆದು ಸೇನೆ ಸೇರಿ

04:53 PM Aug 07, 2022 | Team Udayavani |

ಹಂಸಭಾವಿ: ಯುವಕರು ಸೇನೆ ಸೇರಬೇಕಾದರೆ ಜೀವದ ಹಂಗು ತೊರೆದು, ದೇಶ ಸೇವೆ ಮಾಡುವ ಗುರಿ ಇಟ್ಟುಕೊಂಡು ಸೇರಬೇಕೆಂದು ನಿವೃತ್ತ ಸೈನಿಕ ಮೋನೇಶಪ್ಪ ಮೈಸೂರ ಹೇಳಿದರು.

Advertisement

ಸಮೀಪದ ಬೆಟಕೇರೂರ ಗ್ರಾಮದಲ್ಲಿ ಗ್ರಾಮದ ಮೋನೇಶಪ್ಪ ಮೈಸೂರ, ಬಸವರಾಜ ಮೈಸೂರ ಮತ್ತು ಭರಮಪ್ಪ ಇಂಗಳಗೊಂದಿ ನಿವೃತ್ತ ಸೈನಿಕರಿಗೆ ಗ್ರಾಮಸ್ಥರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೈನ್ಯದಲ್ಲಿದ್ದಾಗ ಎದುರಿಸಿದ ಕಹಿ ಅನುಭವಗಳನ್ನು ಹಂಚಿಕೊಂಡರು.

ಹಿರೇಕೆರೂರಿನಲ್ಲಿ ಸೈನಿಕರ ಭವನ ನಿರ್ಮಿಸಿ ಕೊಡಿ. ತಾಲೂಕಿನ ಯುವ ಜನತೆಗೆ ಸೈನ್ಯಕ್ಕೆ ಸೇರಲು ತರಬೇತಿ ನೀಡುವ ಕೆಲಸವನ್ನು ನಾನು ಮತ್ತು ತಾಲೂಕಿನ ನಿವೃತ್ತ ಸೈನಿಕರು ಸೇರಿ ಮಾಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರಿಗೆ ಮನವಿ ಮಾಡಿದರು.

ನಿವೃತ್ತ ಸೈನಿಕರನ್ನು ಸನ್ಮಾನಿಸಿ ಮಾತನಾಡಿದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ನಮ್ಮ ನಾಡಿಗಾಗಿ, ದೇಶಕ್ಕಾಗಿ ಸೇವೆ ಮಾಡಿದವರನ್ನು ಸ್ಮರಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಬೆಟಕೇರೂರ ಗ್ರಾಮದ ತ್ರಿಮೂರ್ತಿ ಸೈನಿಕರಾದ ಮೋನೇಶಪ್ಪ ಮೈಸೂರ, ಬಸವರಾಜ ಮೈಸೂರ ಮತ್ತು ಭರಮಪ್ಪ ಇಂಗಳಗೊಂದಿ ಅವರನ್ನು ಗ್ರಾಮಸ್ಥರು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.

ಅವರ ಬೇಡಿಕೆಯನ್ನು ಈಡೇರಿಸಲು ಕಟ್ಟಡಕ್ಕೆ ಜಾಗ ಬೇಕಾಗುತ್ತದೆ. ನಿಮ್ಮ ಸಂಘದ ವತಿಯಿಂದ ಹಿರೇಕೆರೂರ ಪಟ್ಟಣ ಪಂಚಾಯಿತಿಗೆ ಅರ್ಜಿ ಕೊಟ್ಟರೆ ಅವರ ಸಂಘಕ್ಕೆ ಜಾಗೆ ಮಂಜೂರ ಮಾಡಿಸುವ ಕೆಲಸ ಮಾಡುತ್ತೇನೆ ಮತ್ತು ಸೈನಿಕರ ಭವನ ಕಟ್ಟಿಸಲು ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

Advertisement

ನಿವೃತ್ತ ಸೈನಿಕರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ, ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು ಸೈನ್ಯಕ್ಕೆ ಸೇರಿ, ದೇಶದ 130 ಕೋಟಿ ಜನತೆಯನ್ನು ರಕ್ಷಣೆ ಮಾಡಿ ಗ್ರಾಮಕ್ಕೆ ಮರಳಿದ ಈ ನಿವೃತ್ತರ ಸೇವೆ ಅವಿಸ್ಮರಣೀಯ ಎಂದು ಹೇಳಿದರು.

ತಾಲೂಕು ಆಡಳಿತದ ಪರವಾಗಿ ಉಪತಹಶೀಲ್ದಾರ್‌ ರಾಜಶೇಖರ ಎಲಿ, ಕೌರವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರತಾಪ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮದ ವಿವಿಧ ಸಂಘಸಂಸ್ಥೆಗಳ ಪದಾಧಿ ಕಾರಿಗಳು ನಿವೃತ್ತ ಸೈನಿಕರನ್ನು ಸನ್ಮಾನಿಸಿದರು.

ಅಲ್ಲದೇ, ತಾಲೂಕಿನ ಹಾಗೂ ಬೇರೆ ತಾಲೂಕಿನ ಸುಮಾರು 10 ಜನ ಸೈನಿಕರನ್ನು ಸಂಘಟಕರು ಸನ್ಮಾನಿಸಿದರು. ಗ್ರಾಮದ ಹಿರಿಯರಾದ ಶಿವಮೂರ್ತೆಪ್ಪ ಮತ್ತೀಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾ ಧಿಕಾರಿಗಳು ಉಪಸ್ಥಿತರಿದ್ದರು. ಶಾಂತನಗೌಡ ಹೊಂಡದ ಹಾಗೂ ಶಿವಯೋಗಿ ದ್ಯಾವಣ್ಣನವರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next