Advertisement
ಸಮಾಜಮಂದಿರದ ಸ್ವರ್ಣಮಂದಿರ ದಲ್ಲಿ ಶನಿವಾರ ಜರಗಿದ “ಡಾ| ನಾ. ಮೊಗಸಾಲೆ-80′ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿದ ಅವರು, ಡಿಜಿಟಲ್ ಮಾಧ್ಯಮದ ಪ್ರಭಾವದಲ್ಲಿ ಮುದ್ರಣ ಮಾಧ್ಯಮಕ್ಕೆ ಹಿನ್ನಡೆ ಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆಯಾದರೂ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಿದೆ, ಓದುಗರೂ ಹೆಚ್ಚಾಗಿದ್ದಾರೆ. ಆದರೆ ಇರುವ ಅವಕಾಶದಲ್ಲಿ ಪತ್ರಿಕೆಗಳ ಮೂಲಕ ಉತ್ತಮ ಸಾಹಿತ್ಯವೂ ಹೊರಬರುವುದು ಅಪೇಕ್ಷಣೀಯ ಎಂದರು.
ಮೊಗಸಾಲೆಯವರ ಏಳು ಕೃತಿಗ ಳನ್ನು ಬಿಡುಗಡೆಗೊಳಿಸಿದ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ, ಮೊಗಸಾಲೆಯವರು ಕಾವ್ಯ, ಕಥೆ, ಕಾದಂಬರಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದವರು. ಕಾಂತಾವರ ಕನ್ನಡ ಸಂಘ, ನಾಡಿನಲ್ಲೇ ಪ್ರತಿಷ್ಠಿತವಾದ ವರ್ಧಮಾನ ಪ್ರಶಸ್ತಿ ಪೀಠ, ಅಲ್ಲಮ ಪ್ರಭು ಪೀಠ ಇವನ್ನೆಲ್ಲ ಕಟ್ಟಿ ಬೆಳೆಸಿದ ಪರಿ ಅನನ್ಯ. “ನಾಡಿಗೆ ನಮಸ್ಕಾರ’ದಂಥ ಯೋಜನೆಯ ಮೂಲಕ ನಾಡಿಗೆ ವಿಶಿಷ್ಟ ಕೊಡುಗೆ ಇತ್ತಿರುವ 250ಕ್ಕೂ ಅಧಿಕ ಸಾಧಕರನ್ನು ಪರಿಚಯಿಸಿದ, ಸಾಹಸ ಕಾರ್ಯವನ್ನು ಯಾವುದೇ ವಿ.ವಿ., ಅಕಾಡೆಮಿ, ಸಂಸ್ಥೆ ಮಾಡಿದ್ದಿಲ್ಲ ಎಂದರು.
Related Articles
Advertisement
ಹಡಿಲುಬಿದ್ದ ಭೂಮಿಡಾ| ಮೊಗಸಾಲೆ ಮಾತನಾಡಿ, ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಹಜ ಸಂಬಂಧಗಳು ಛಿದ್ರವಾಗುತ್ತಿವೆ, ಮಣ್ಣಿನ ಪ್ರೀತಿ ಕಳಕೊಂಡ ಮನುಷ್ಯರೇ ಕಾಣಿಸುತ್ತಿದ್ದಾರೆ. ಎಲ್ಲೆಲ್ಲೂ ಹಡಿಲು ಬಿದ್ದ ಭೂಮಿ ನೋವು ತರುತ್ತಿದೆ ಎಂದರು.