Advertisement

ಪಂತ್‌ರಿಂದ ಕಾನ್ ಸ್ಟೇಬಲ್‌ಗೆ ಸನ್ಮಾನ

03:47 PM Jul 22, 2021 | Team Udayavani |

ಬೆಂಗಳೂರು: ಬಕ್ರೀದ್‌ ಹಬ್ಬ ಹಿನ್ನೆಲೆಯಲ್ಲಿಸಿಟಿ ರೌಂಡ್ಸ್‌ ವೇಳೆ ಅನಿರೀಕ್ಷಿತ ಸಂದರ್ಭಲ್ಲಿನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ಕಾಡುಗೊಂಡನಹಳ್ಳಿ ಠಾಣೆ ಕಾನ್‌ಸ್ಟೇಬಲ್‌ವೊಬ್ಬರಿಗೆ ಶಾಲು ಹೊದಿಸಿ, ಹಾರ ಹಾಕಿಸನ್ಮಾನಿಸಿದ್ದಾರೆ.ಕೆ.ಜಿ.ಹಳ್ಳಿ ಠಾಣೆಯ ಎಸ್‌ಬಿ ವಿಭಾಗಗುಪ್ತಚರ ವಿಭಾಗದ ಕಾನ್‌ಸ್ಟೆàಬಲ್‌ ಶಿವುಅವರಿಗೆ ಸನ್ಮಾನಿಸಿದ್ದಾರೆ.

Advertisement

ನಗರ ಪೊಲೀಸ್‌ಆಯುಕ್ತರ ಈ ಕಾರ್ಯಕ್ಕೆ ಪೊಲೀಸ್‌ ಇಲಾಖೆಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು,ಕಿರಿಯ ಅಧಿಕಾರಿ-ಸಿಬ್ಬಂದಿ ಧನ್ಯವಾದತಿಳಿಸಿದ್ದಾರೆ.ಬಕ್ರೀದ್‌ಹಬ್ಬದಹಿನ್ನೆಲೆಯಲ್ಲಿಪೊಲೀಸ್‌ಆಯುಕ್ತ ಕಮಲ್‌ ಪಂತ್‌, ಮಂಗಳವಾರರಾತ್ರಿ ಕೋರಮಂಗಲ, ಬಾಣಸವಾಡಿ,ಚಾಮರಾಜಪೇಟೆ, ಜಯನಗರ,ಹೆಣ್ಣೂರು, ಪಾದರಾಯನಪುರ, ಜೆ.ಜೆ.ನಗರ, ಗೋವಿಂದನಗರ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಶಿವಾಜಿನಗರ ಸೇರಿ ಸುಮಾರು 25ಕ್ಕೂಅಧಿಕ ಠಾಣೆಗಳಿಗೆ ಭೇಟಿ ನೀಡಿ ಬಂದೋಬಸ್ತ್ ಬಗ್ಗೆ ಪರಿಶೀಲಿಸಿದ್ದಾರೆ. ರಾತ್ರಿ 10ಗಂಟೆ ಸುಮಾರಿಗೆ ಕೆ.ಜಿ.ಹಳ್ಳಿ ಠಾಣೆಗೆ ತೆರಳಿದಾಗ ಸ್ಥಳೀಯ ಮುಸ್ಲಿಂ ಮುಖಂಡರುಶಾಲು, ಹಾರಗಳೊಂದಿಗೆ ನಗರ ಪೊಲೀಸ್‌ಆಯುಕ್ತರ ಸನ್ಮಾನಿಸಲು ಆಗಮಿಸಿದರು.

ಆಗ ಪೊಲೀಸ್‌ ಆಯುಕ್ತ ಕಮಲ್‌ಪಂತ್‌, “ಸನ್ಮಾನ ಮಾಡಬೇಕಿರುವುದು ನನಗಲ್ಲ. ಹಗಲು ರಾತ್ರಿ ಎನ್ನದೆ ಸಾರ್ವಜನಿಕರಜತೆ ಬೆರೆತು ಸೇವೆ ಸಲ್ಲಿಸುತ್ತಿರುವ ಕಾನ್‌ಸ್ಟೆàಬಲ್‌ಗ‌ಳಿಗೆ ಸನ್ಮಾನ ಸಲ್ಲಬೇಕು’ ಎಂದುಸನ್ಮಾನ ನಿರಾಕರಿಸಿದರು. ಅದರಿಂದಮುಖಂಡರು ನಿರಾಸೆಗೊಂಡರು.ಕೂಡಲೇ ಪೊಲೀಸ್‌ ಆಯುಕ್ತರು, ನೀವುನಿರಾಸೆಗೊಳ್ಳುವ ಅಗತ್ಯವಿಲ್ಲ. ನನಗೆ ಮಾಡಬೇಕಿರುವ ಸನ್ಮಾನದ ವಸ್ತುಗಳನ್ನು ಕೊಡಿಎಂದು ಪಡೆದುಕೊಂಡರು.

ಬಳಿಕ ಪೂರ್ವವಿಭಾಗ ಡಿಸಿಪಿ ಶರಣಪ್ಪ, ಎಸಿಪಿ ನಿಂಗಣ್ಣ ಸಕ್ರಿಹಾಗೂ ಠಾಣಾಧಿಕಾರಿಗೆ ಠಾಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಹೆಸರು ಸೂಚಿಸುವಂತೆ ಹೇಳಿದರು.ಆಗ ಮೂವರು ಗುಪ್ತಚರ ವಿಭಾಗ ಶಿವುಅವರ ಹೆಸರು ಸೂಚಿಸಿದರು. ಆದರೆ, ಶಿವುಅವರು ಠಾಣೆಯಲ್ಲಿ ಇರಲಿಲ್ಲ. ರಾತ್ರಿ ಪಾಳಿಕರ್ತವ್ಯದಲ್ಲಿದ್ದ ಶಿವು ಅವರನ್ನು ಠಾಣೆಗೆಕರೆಸಿ, ಸಮುದಾಯದ ಮುಖಂಡರಸಮ್ಮುಖದಲ್ಲಿಯೇ ಶಾಲು ಹೊದಿಸಿ, ಪೇಟ,ಹಾರ ಹಾಕಿ ಸನ್ಮಾನಿಸಿದರು.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವು, ನಗರ ಪೊಲೀಸ್‌ ಆಯುಕ್ತರಿಂದಅನಿರೀಕ್ಷಿತವಾಗಿ ಸನ್ಮಾನ ಸಿಕ್ಕಿರುವುದುಖುಷಿಕೊಟ್ಟಿದೆ. ಜತೆಗೆ ಇನ್ನಷ್ಟು ಜವಾಬ್ದಾರಿಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next