Advertisement

ಫಿಸ್‌ ಕಟ್ಟದ್ದಕ್ಕೆ 4 ತಾಸುಬಿಸಿಲಲ್ಲಿ ನಿಲ್ಲಿಸಿದರು

12:05 PM Dec 16, 2017 | Team Udayavani |

ವಿಜಯಪುರ (ಬೆಂ.ಗ್ರಾಮಾಂತರ): ಪಟ್ಟಣದ ನಂದಿನಿ ಪಬ್ಲಿಕ್‌ ಶಾಲೆಯಲ್ಲಿ ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿನಿಯೊಬ್ಬಳನ್ನು ಬಿಸಿಲಿನಲ್ಲಿ 4 ತಾಸು ನಿಲ್ಲಿಸಿದ ಘಟನೆ ವರದಿ ಯಾಗಿದೆ. ಇದರಿಂದ ಕೋಪಗೊಂಡ ಪೋಷಕರು ಶಾಲೆಯಲ್ಲಿ ಆಡಳಿತ ಮಂಡಳಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

Advertisement

ಶಾಲೆಯಲ್ಲಿ ಫಿಸ್‌ ಕಟ್ಟಲು ತಡವಾಗಿದ್ದರಿಂದ ಮಗಳು ಮೋನಿಕಾಳನ್ನು ಗುರುವಾರ 4 ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದ್ದರು. ಇದರಿಂದಾಗಿ ಆಕೆಗೆ ಜ್ವರ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಶುಕ್ರವಾರ ಊರೊಳಗೆ ಶಾಲಾ ವಾಹನ ಬಂದಾಗ ವಾಹನಕ್ಕೆ ಮಕ್ಕಳನ್ನು ಹತ್ತಿಸಿಕೊಳ್ಳದೆ ಹಾಗೇ ಬಂದಿದ್ದಾರೆ ಎಂದು ರೆಡ್ಡಿಹಳ್ಳಿಯ ವಿದ್ಯಾರ್ಥಿನಿಯ ಪೋಷ ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಮಂಡಳಿ ಅಧ್ಯಕ್ಷ ಚೇತನ್‌ಗೌಡ, 400 ವಿದ್ಯಾರ್ಥಿ ಗಳು ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. 

ಸರ್ಕಾರದಿಂದ ಆರ್‌ಟಿಇ ಯೋಜನೆಯಲ್ಲಿ ಮಕ್ಕಳ ಹಣ ಬಂದಿಲ್ಲ. ಸಂಸ್ಥೆಯಲ್ಲಿ ಶಿಕ್ಷಕರಿಗೆ ಮತ್ತು ಕೆಲಸ ಮಾಡುತ್ತಿರುವವರಿಗೆ ಸಂಬಳ ಹೇಗೆ ಕೊಡಬೇಕು. ಇವೆಲ್ಲವನ್ನು ಪೋಷಕರು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳ ಶುಲ್ಕ ಪಾವತಿಸಿ ಎಂದು ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಬಿಇಒ ಗಾಯತ್ರಿದೇವಿ, ಈ ಬಗ್ಗೆ ವರದಿ ನೀಡುವಂತೆ ಆಡಳಿತ ಮಂಡಳಿಗೆ ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next