ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವ ವಾಹನಗಳು ತಾವು ಸಾಗಿದ ದೂರಕ್ಕೆ ಮಾತ್ರ ಶುಲ್ಕ ಪಾವತಿಸುವಂಥ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸಾರಿಗೆ ಇಲಾಖೆಯ ಕಾರ್ಯದರ್ಶಿ ಯುದ್ಧ್ವೀರ್ ಸಿಂಗ್ ಮಲಿಕ್ ಅವರು ಶುಕ್ರವಾರ ಈ ವಿಚಾರ ತಿಳಿಸಿದ್ದಾರೆ. ಇದರಿಂದ, ವಾಹನ ಸವಾರರಿಗೆ ಶುಲ್ಕದ ಹೊರೆ ಖಂಡಿತವಾಗಿಯೂ ಇಳಿಕೆಯಾಗುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
ಟೋಲ್ ವ್ಯವಸ್ಥೆಯಲ್ಲೇ ವಿನೂತನ ಹೆಜ್ಜೆಯೆಂದು ಹೇಳಲಾಗುವ “ಇಂಟಲಿಜೆನ್ಸ್ ಟ್ರಾನ್ಸ್‌ಪೊàರ್ಟ್ ಮ್ಯಾನೇಜ್‌ಮೆಂಟ್’ ಎಂಬ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದು, ಮುಂದಿನ ವರ್ಷ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮಲಿಕ್ ತಿಳಿಸಿದರು.
ಈ ಬಗ್ಗೆ ವಿವರಿಸಿದ ಅವರು, “”ಈಗ ಸದ್ಯಕ್ಕೆ ಚಾಲ್ತಿಯಲ್ಲಿರುವ ಟೋಲ್ ಪದ್ಧತಿಯನ್ನು ಮುಂದಿನ ವರ್ಷದಿಂದ ಕೈಬಿಡಲು ನಿರ್ಧರಿಸ ಲಾಗಿದ್ದು, ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಅದರಂತೆ, ಹೆದ್ದಾರಿಗಳಲ್ಲಿ ಸಾಗುವ ಪ್ರತಿ ಯೊಂದು ವಾಹನ, ತಾನು ಚಲಿಸಿದ ದೂರ ಕ್ಕಷ್ಟೇ ಶುಲ್ಕ ಕಟ್ಟುವ ಅನುಕೂಲ ಕಲ್ಪಿಸಲಾ ಗುತ್ತದೆ. ಇದು, ವಾಹನ ಸವಾರರಿಗೆ ಅನ ಗ ತ್ಯ ವಾಗಿ ತಮ್ಮ ಬಳಕೆಗೂ ಮೀರಿ ಹೆಚ್ಚು ಟೋಲ್ ಕಟ್ಟುವಂಥ ಹೊರೆಯನ್ನು ತಪ್ಪಿಸುತ್ತದೆ” ಎಂದು ತಿಳಿಸಿದರು.
“”ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವ ವಾಹನವು ಚಲಿಸಿದ ದೂರ ಹಾಗೂ ಅದಕ್ಕೆ ಅನುಗುಣವಾದ ಶುಲ್ಕವನ್ನು ನಿಗದಿಗೊಳಿ ಸಲೆಂದೇ “ಡಿಸ್ಟನ್ಸ್ ಬೇಸ್ಡ್ ಎಲೆಕ್ಟ್ರಾನಿಕ್ ಟೋಲಿಂಗ್’ ಎಂಬ ವಿನೂತನ ತಂತ್ರಜ್ಞಾನ ವನ್ನು ಅಳವಡಿಸಲಾಗುವುದು. ಈಗಾಗಲೇ, ಈ ತಂತ್ರಜ್ಞಾನ ಅಮೆರಿಕ, ಆಸ್ಟ್ರೇಲಿಯಾದಂಥ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿವೆ” ಎಂದು ಮಲಿಕ್ ತಿಳಿಸಿದ್ದಾರೆ.