Advertisement
ಎಲ್ಲವೂ ಪ್ರೀತಿ ಎಂದಲ್ಲ, ಕೆಲವೊಂದು ಪ್ರೀತಿ ಒಂದಿಷ್ಟು ವಾರಗಳ ಕಾಲ, ತಿಂಗಳ ಕಾಲ ಇದ್ದು ಮತ್ತೆ ಮರೆಯಾದರೆ, ಇನ್ನೂ ಕೆಲವು ಪ್ರೀತಿ, ಜೀವನದ ಪಾಠ ಕಲಿಸಿ ಮರೆಯಾಗುತ್ತದೆ. ಕೆಲವರು ಸಮಯ ಬದಲಾದಂತೆ ಅವರೂ ಬದಲಾಗಿ ಜೀವನದ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತಾರೆ, ಆದರೆ ಕೆಲವೊಂದು ಪ್ರೀತಿ , ಗೆಳೆಯರಾಗಿ, ನಂತರ ಬೆಸ್ಟ್ ಫ್ರೆಂಡ್ ಆಗಿ, ಪ್ರೇಮಿಗಳಾಗಿ, ದಂಪತಿಗಳಾಗಿ ಜೀವನದುದ್ದಕ್ಕೂ ಜೊತೆಯಾಗಿರುತ್ತಾರೆ. ಅದೇ ಬೆಸ್ಟ್ ಕಣ್ರೀ. ನಾವು ಪ್ರೀತಿಸಿದ ಹುಡುಗ ಜೀವನಪೂರ್ತಿ ಇರ್ತಾನೆ ಅಂತ ಅನಿಸಿದಾಗ ಆಗುವ ಖುಷಿ ಬೇರೇನೆ. ಆಗ ನಿಜವಾದ ಪ್ರೀತಿಗೆ ಸಾರ್ಥಕತೆ ಸಿಗುತ್ತದೆ.
Related Articles
Advertisement
ನಾನು ಅವನು ಭೇಟಿ ಆದ್ರೆ ಗಂಟೆಗಟ್ಟಲೆ ನಾನೇ ಮಾತಾಡ್ತಾ ಇರಬೇಕು. ಅವನು ಕೇವಲ ಓಹೋ, ಹೌದಾ, ಸರಿ, ಇಲ್ಲಾ ಚೈ, ಅಷ್ಟೇ ಮತ್ತೇನೂ ಇಲ್ಲಾ. ಆದ್ರೂ ತುಂಬಾ ಇಷ್ಟ ಪಡ್ತಾನೆ. ನನ್ನೆಲ್ಲಾ ತಲೆಹರಟೆಗಳನ್ನು ಸಹಿಸಿಕೊಂಡು ಮುಗ್ಧ ನಗುವಿನ ಜೊತೆಗೆ ನೋಡ್ತಾ ಇರ್ತಾನೆ. ಆತ ನನ್ನ ಜೀವನದಲ್ಲಿ ಹಲವಾರು ಬದಲಾವಣೆಯನ್ನು ತಂದ ವ್ಯಕ್ತಿ. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದ ನನಗೆ, ಇವನು ಬಂದ ಮೇಲೆ ಸಿಟ್ಟು ಮಾಡಿಕೊಳ್ಳಲು ವಿಷಯವೇ ಇರಲಿಲ್ಲ. ಗಲಾಟೆ ಮಾಡೋಣ ಅಂತ ಅನಿಸಿದರೂ ಅವನ ಮುಖ ನೋಡ್ತಾ ಇದ್ದಹಾಗೆ ಸಿಟ್ಟೆಲ್ಲಾ ಕರಗಿ ಬಿಡುತ್ತಿತ್ತು. ಕೆಲವೊದು ವಿಷಯಕ್ಕೆ ಮಾನಸಿಕವಾಗಿ ತುಂಬಾ ಬಳಲುತ್ತಿದ್ದ ನನಗೆ, ಈತ ನನ್ನ ಜೀವನದಲ್ಲಿ ಬಂದ ಮೇಲೆ ನನಗೆ ಧೈರ್ಯು ನೀಡುವ ವ್ಯಕ್ತಿಯಾಗಿ, ಬರವಸೆ ಕೊಡುವ ವ್ಯಕ್ತಿಯಾಗಿ ಜೊತೆಗಾರನಾಗಿ ಇದ್ದಾನೆ. ಅಷ್ಟು ಸಾಕು.
ಬೇರೊಬ್ಬರಿಗೆ ನಮ್ಮ ಪ್ರೀತಿ ತೋರ್ಪಡಿಕೆ ಪ್ರಿತಿಯಾಗಬಾರದು, ಅಥವಾ ಪ್ರೀತಿಯಲ್ಲಿ ಇದ್ದ ಕೂಡಲೇ ಹಾಗಿರಬೇಕು, ಹೀಗಿರಬೇಕು, ಸುತ್ತಾಡಬೇಕು, ಗಿಫ್ಟ್ ಕೊಟ್ರೆ ಮಾತ್ರ ಪ್ರೀತಿ, ಪ್ರೇಮಿಗಳ ದಿನದಂದು ರಾತ್ರಿ 12 ಗಂಟೆಗೆ ವಿಶ್ ಮಾಡಬೇಕು, ಇವ್ವೆಲ್ಲಾವು ಇದ್ರೆ ಮಾತ್ರ ಪ್ರೀತಿ ಅಲ್ಲ. ಇಬ್ಬರ ಜೀವನವನ್ನು ಅರ್ಥ ಮಾಡಿಕೊಂಡು, ಖುಷಿಯನ್ನು ಯಾವ ರೀತಿ ಹಂಚಿಕೊಳ್ಳುತ್ತೇವೋ ಅದೇ ರೀತಿ ನೋವು, ದುಃಖಗಳನ್ನೂ ಹಂಚಿಕೊಂಡು ಜೊತೆಯಾಗಿದ್ದು, ಬದುಕಿನ ಕಷ್ಟ ಸುಖಗಳನ್ನ ಅರ್ಥ ಮಾಡಿಕೊಂಡು ಜೊತೆಯಾಗಿದ್ದರೆ ಅಷ್ಟೇ ಸಾಕು.
ಚೈತ್ರಾ
ದ್ವಿತೀಯ ಎಂ.ಸಿ.ಜೆ ವಿದ್ಯಾರ್ಥಿನಿ
ಎಸ್.ಡಿ.ಎಂ ಕಾಲೇಜು, ಉಜಿರೆ