Advertisement
ಹೀಗಾಗಿ ಒಬ್ಬನ ಅಥವಾ ಒಬ್ಬಳ ಜಾತಕದಕಲ್ಲಿ ಕರ್ಮಸ್ಥಾನದ ಅಧಿಪತ್ಯ ಹೊತ್ತ ಗ್ರಹ ಕರ್ಮ ಸ್ಥಾನದಲ್ಲಿ ಸ್ಥಿತಿಗೊಂಡು ಈ ಗ್ರಹಗಳ ಮೇಲೆ ಆವಾಹನೆ ಗೊಂಡ ದೃಷ್ಟಿ (ಇತರ ಗ್ರಹಗಳನ್ನು ಅವಲಂಬಿಸಿ)ಇತ್ಯಾದಿ . ಅವರವರ ಕೆಲಸದಲ್ಲಿ ಸಫಲತೆಯನ್ನು ತರಲು ಕಾರಣವಾಗುತ್ತದೆ. ಇವುಗಳಲ್ಲಿ ಅಸಮತೋಲನ ತುಂಬಿದಲ್ಲಿ ಉತ್ತಮ ಗಳಿಕೆ ಉತ್ತಮ ಸಂಬಳ ಇರದೆ ಕೆಲಸದಲ್ಲಿ ನೆಮ್ಮದಿ ನಾಶವಾಗುತ್ತದೆ. ಕರ್ಮಸ್ಥಾನದ ಗಟ್ಟಿತನ ಸಂಪತ್ತಿಗೆ ಕಾರಣವಾಗುತ್ತದೆ.
Related Articles
Advertisement
ಬಿಲ್ ಗೇಟ್ಸ್ ವಹಿವಾಟುಗಳನ್ನೆಲ್ಲ ಲಕ್ಷಿ$¾à ಕಟಾಕ್ಷದಲ್ಲಿ ಗೆಲ್ಲಲು ಕಾರಣವಾಗುವ ನೀಚಭಂಗ ರಾಜಯೋಗ ರಾಹು ಸಿದ್ಧಿ ಕರ್ಮ ಸ್ಥಾನದಲ್ಲಿ ಸುರಕ್ಷಿತ ಗಟ್ಟಿತನ ಜಾತಕದ ಪ್ರಧಾನ ಅಂಶಗಳಾಗಿದೆ. ಒಟ್ಟಿನಲ್ಲಿ ಸಂಪತ್ತನ್ನು ವಿಶೇಷವಾಗಿ ಶೇಖರಿಸುವ ತಾಕತ್ತು ಬಿಲ್ ಗೇಟ್ಸ್ ಜಾತಕದ ಸಕಾರಾತ್ಮಕ ಅಂಶ. ಚಂದ್ರ ವರ್ಚಸ್ಸನ್ನು ವಿಸ್ತರಿಸುವ ವ್ಯಕ್ತಿತ್ವವನ್ನು ಅನುಗ್ರಹಿಸಿದ್ದಾನೆ. ಜೀವನದಲ್ಲಿ ಗೆಲ್ಲಲು ಇನ್ನೇನು ಬೇಕು ಇದು ಅದೃಷ್ಟದ ಆಟ ವೈಖರಿ ಅಷ್ಟೆ.
ಗೆದ್ದರೂ ಆರ್ಥಿಕವಾಗಿ ಸೋತ ಕ್ರಿಕೆಟಿಗ ಮತ್ತು ಶನಿಗ್ರಹ
ಈ ಕ್ರಿಕೆಟಿಗ ಯಾರು ಎಂಬ ಪ್ರಸ್ಥಾಪ ಬೇಡ. ಹೆಸರು ಹೇಳುವುದು ಸೂಕ್ತವಾಗದು. ಕ್ರಿಕೆಟ್ ಆಟದ ಆಯ್ಕೆ ಸರಿಯಾಗಿಯೇ ಇತ್ತು.ಆದರೆ ಈ ಜಗತ್ವಿಖ್ಯಾತ ಕ್ರಿಕೆಟಿಗ ಬರಿಗೈಯ ಕಾಸಿರದ ದೊರೆ ಈಗ. ಈತ ಬೌಲ್ ಮಾಡಲು ಹೊರಟರೆ ಪ್ರಪಂಚದ ಎಂಥದೇ ಪ್ರಚಂಡ ದಾಂಡಿಗನಾದರೂ ಒಮ್ಮೆ ಗುಂಡಿಗೆ ಹಿಡಿದು ನೋಡಿಕೊಳ್ಳಬೇಕು. ಸುಳಿಯಾಗಿ ಪುಟಿದು ಬರುವ ಚೆಂಡು ಪ್ರಕಾಂಡ ಬ್ಯಾಟ್ಸ್ ಮನ್‌ನ ರಕ್ಷಣಾ ವ್ಯೂಹವನ್ನು ಭೇದಿಸಿ ಸ್ಟಂಪ್‌ಗ್ಳನ್ನು ಬೇರು ಸಹಿತ ಕಿತ್ತು ಬೀಳಿಸುತ್ತಿತ್ತು. ನಿರ್ದಿಷ್ಟ ಲಯ ತಿರುವು ಎಸೆತದ ಉದ್ದ ದಕ್ಕಿದಾಗ ಈ ಬೌಲರನ ಎಸೆತಗಳೆದುರು ನೂರು ರನ್‌ಗಳನ್ನು ಎದುರಾಳಿ ತಂಡ ಮಾಡುವುದು ದುಸ್ತರವಾಗುತ್ತಿತ್ತು. ಈ ಕ್ರಿಕೆಟಿಗನ ಜಾತಕದ ಕರ್ಮಸ್ಥಾನದ ದೊರೆ ಬುಧ. ಕರ್ಮಸ್ಥಾನ ಸ್ಥಿತ ಗುರು ಬಲು ಬಲಾಡ್ಯರು. ಕ್ರಿಕೆಟ್ ಅಂಗಳಕ್ಕೆ ಯುಕ್ತವಾಗೇ ಎಳೆದು ತಂದವು ಈ ಗ್ರಹಗಳು. ಆದರೆ ಧನಸ್ಥಾನದ ಸವಕಳಿ ಧನಾಧಿಪತಿಯ ರುಗ್ಣಸ್ಥಿತಿ ಧನಸ್ಥಾನಕ್ಕೆ ಶನಿ ಮಹಾತ್ಮನ ಕ್ರೂರ ದೃಷ್ಟಿ ಲಾಭದಲ್ಲಿದ್ದರೂ ಕುಜನ ದೃಷ್ಟಿಯಿಂದ ನರಳಿ ಲಾಭಕ್ಕೆ ಭಂಗ ತಂದ ಶನಿ, ಈ ಕ್ರಿಕೆಟಿಗನ ವಿಚಾರದಲ್ಲಿ ಲಕ್ಷಿ$¾ಕಟಾಕ್ಷವನ್ನು ಒದಗಿಸಲಿಲ್ಲ. ಕ್ಷೀಣಚಂದ್ರನ ದುಃಸ್ಥಾನ ಪೀಡಿತ ಸ್ಥಿತಿ ಇವರ ಮನೋವೇದಿಕೆಯನ್ನು ನಿರಂತರವಾಗಿ ಅಸ್ಥಿರತೆಯಲ್ಲಿ ಹೊಯ್ದಾಡಿಸಿತು. ಅಂತರಂಗದಲ್ಲಿ ಅಶಾಂತಿಯನ್ನು ತುಂಬಿದೆ. ಕ್ರಿಕೆಟಿಗನಾಗಿ ಅದೃಷ್ಟ ಆದರೂ ಬರಿಗೈ ದೊರೆ ಆದದ್ದು ಇವರು ಪಡೆದು ಬಂದ ಅದೃಷ್ಟ, ಒಟ್ಟಿನಲ್ಲಿ ಗ್ರಹಗಳ ಆಟ ವಿಚಿತ್ರವಾಗಿದೆ.
ನಾವು ಮಾಡುವ ಕೆಲಸ ವಹಿವಾಟು ಕಸುಬು ಉದ್ಯೋಗಗಳೆಲ್ಲ ಗ್ರಹಗಳ ಮೇಲಿನ ಭಲೇ ಅದೃಷ್ಟವನ್ನು ತರುವಂಥದ್ದಾಗುತ್ತದೆ. ಬಿಲ್ ಗೇಟ್ಸ್ ಯಾವುದನ್ನೋ ಶುರು ಹಚ್ಚಿ ಗೆದ್ದುಬಿಟ್ಟರು ಎಂದಾಕ್ಷಣ ಮತ್ತೂಬ್ಬ ಶೆಲ್ ಗೇಟ್ಸ್ ಇದೇ ಕೆಲಸದಲ್ಲಿ ಗೆಲುವು ಸಾಧಿಸಿದರು ಎಂದು ಅನ್ನಲಾಗದು. ಇದೀಗ ನಮ್ಮ ರಾಜ್ಯದಲ್ಲಿ ಚುನಾವಣೆಯ ಕಾಲ. ಎಲ್ಲರನ್ನೂ ವಿಜಯಲಕ್ಷಿ$¾ ಮಾಲೆ ತೊಡಿಸಿ ವಿಜೃಂಭಿಸಲಾರಳು. ರಾಜಕೀಯ ಗೆಲ್ಲುವ ಹುರಿಯಾಳುಗಳ ಕರ್ಮಸ್ಥಾನದ ಬಲದಿಂದ ಪ್ರಚಂಡ ಸಿದ್ಧಿಯನ್ನು ಒಬ್ಬನಿಗೆ ತರಬಲ್ಲದು. ಗೆಲ್ಲುವ ಸೋಲುವ ಚಿತ್ರಗಳನ್ನು ಗಮನಿಸಿದರೆ ಕಾಲದ ಚಕ್ರ ಯಾರನ್ನೋ ಮೇಲಕ್ಕೆ ಎತ್ತುತ್ತದೆ ಇನ್ನಾರನ್ನೋ ಮೇಲೆತ್ತಿ ಅಧಃಪತನಕ್ಕೆ ತಳ್ಳುತ್ತದೆ.
ಒಬ್ಬ ವ್ಯಕ್ತಿ ತನ್ನ ಮಿತಿಯನ್ನು ಅರಿತು ಹೆಜ್ಜೆ ಹಾಕಿದರೆ ಚೆನ್ನ. ಒಬ್ಬ ಸಮರ್ಥ ಪೊಲೀಸ್ ಅಧಿಕಾರಿಯಾಗಿ ಮಿಂಚಬಲ್ಲ. ಮಗದೊಬ್ಬ ವರನಟನಾಗಬಲ್ಲ. ಸಮರ್ಥ ನಿರ್ದೇಶಕ ಕೈಚೆಲ್ಲಿ ಕೇರ್ ಆಫ್ ಫುಟ್ ಪಾತ್ ಆಗಬಲ್ಲ. ನಿರಂತರವಾದ ಬಲಾಡ್ಯತೆಯೊಂದಿಗೆ ಜಗತ್ತನ್ನೇ ಅಲ್ಲಾಡಿಸಬಲ್ಲ ಚಕ್ರವರ್ತಿಯಾಗಬಲ್ಲ. ಗೆಳೆಯನಿಂದಲೇ ವಂಚನೆಗೆ ಸಿಕ್ಕಿ ಸಾಯುವ ಸೀಸರ್ ಆಗಬಲ್ಲ.