ಸಂಯುಕ್ತ ಹೊರನಾಡು ಹೇಳಿದ್ದಾರೆ. ರಂಗೋಲಿ ಮೆಟ್ರೋ ಕಲಾ ಕೇಂದ್ರದ ಛಾಯಾ ಆರ್ಟ್ ಗ್ಯಾಲರಿಯಲ್ಲಿ ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟಲ್ ಟ್ರಸ್ಟ್ ಆಯೋಜಿಸಿದ್ದ ಸುಜಾಯ ಜಗದೀಶ್ ಅವರ “ಎಂಪ್ಯಾಶನ್’ಕೃತಿ ಬಿಡುಗಡೆ ಹಾಗೂ ಬೀದಿ ನಾಯಿಗಳ ರಕ್ಷಣೆ ಕುರಿತ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಮಾತನಾಡಿದ ಅವರು, ಆಸರೆ ಇಲ್ಲದ ಪ್ರಾಣಿಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.
Advertisement
ಶ್ರೀಲಂಕಾದಲ್ಲಿ ಬೀದಿ ನಾಯಿಗಳ ಬಗ್ಗೆ ವಿಶೇಷ ಕಾಳಜಿ ತೋರಲಾಗುತ್ತಿದೆ. ಅದೇ ರೀತಿ ಅನುಕಂಪ ನಾವು ಕೂಡ ತೋರಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಣಿ ಪ್ರಿಯೆ ಸುಜಾಯ ಜಗದೀಶ್ ಅವರ ಕಾರ್ಯ ಶ್ಲಾಘನೀಯ,ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟಲ್ ಟ್ರಸ್ಟ್ ನಿಂದ ಸಂರಕ್ಷಿಸಲ್ಪಟ್ಟ 20ಬೀದಿ ನಾಯಿಗಳನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಲಾಯಿತು ಎಂದು ಪುಸ್ತಕ ರೂಪದಲ್ಲಿ ತೆರೆದಿಟ್ಟಿದ್ದಾರೆ.ಇದಕ್ಕೆ ಕಲಾವಿದೆ ಸಂಧ್ಯಾ ಕೆ.ಶಿರಸಿ ಅವರು ವರ್ಣಚಿತ್ರಗಳ ಮೂಲಕ ಮನ ಮುಟ್ಟುವಂತೆ ಮಾಡಿದ್ದಾರೆ ಎಂದರು.