Advertisement
ಪ್ರೀ-ಕ್ವಾರ್ಟರ್ ಫೈನಲ್ ಹಣಾಹಣಿ ಯಲ್ಲಿ ರೋಜರ್ ಫೆಡರರ್ ಜರ್ಮನಿಯ ಫಿಲಿಪ್ ಕೋಹ್ಲಶ್ರೀಬರ್ ವಿರುದ್ಧ 6-4, 6-2, 7-5 ಅಂತರದಿಂದ ನೇರ ಸೆಟ್‌ಗಳಲ್ಲಿ ಗೆದ್ದರು. ಇದರೊಂದಿಗೆ ನ್ಯೂಯಾರ್ಕ್ ನಲ್ಲಿ ಮೊದಲ ಬಾರಿಗೆ ಎಂಟರ ಸುತ್ತು ಪ್ರವೇಶಿಸುವ ಜರ್ಮನ್ ಟೆನಿಸಿಗನ ಕನಸು ಛಿದ್ರಗೊಂಡಿತು.
2009ರ ಯುಎಸ್ ಓಪನ್‌ನಲ್ಲಿ ಫೆಡರರ್-ಡೆಲ್ ಪೊಟ್ರೊ ಮುಖಾಮುಖೀ ಯಾಗಿದ್ದರು. ಅಂದು ಫೆಡರರ್ ವಿರುದ್ಧ 3-6, 7-6 (7-3), 4-6, 7-6 (7-4), 6-2 ಅಂತರದ ಮ್ಯಾರಥಾನ್ ಹೋರಾಟದಲ್ಲಿ ಗೆದ್ದ 20ರ ಹರೆಯದ ಡೆಲ್ ಪೊಟ್ರೊ ಚಾಂಪಿಯನ್ ಆಗಿ ಮೂಡಿ ಬಂದಿದ್ದರು.
Related Articles
ನಡಾಲ್‌ಗೆ ರಶ್ಯದ 19ರ ಹರೆಯದ ಆ್ಯಂಡ್ರೆ ರುಬ್ಲೇವ್ ಸವಾಲಿಕ್ಕಲಿದ್ದಾರೆ. ನಡಾಲ್ ಉಕ್ರೇನಿನ ಆಲೆಕ್ಸಾಂಡರ್ ಡೊಲ್ಗೊ ಪೊಲೋವ್ ಅವರನ್ನು 6-2, 6-4, 6-1ರಿಂದ ಸುಲಭದಲ್ಲಿ ಹಿಮ್ಮೆಟ್ಟಿಸಿ ದರು. ಇನ್ನೊಂದು ಪಂದ್ಯದಲ್ಲಿ ರುಬ್ಲೇವ್ ಬೆಲ್ಜಿಯಂನ 9ನೇ ಶ್ರೇಯಾಂಕದ ಡೇವಿಡ್ ಗೊಫಿನ್ ವಿರುದ್ಧ 7-5, 7-6 (7-5), 6-3 ಅಂತರದ ಜಯ ಒಲಿಸಿಕೊಂಡರು.
Advertisement
ಶ್ರೇಯಾಂಕ ರಹಿತ ರುಬ್ಲೇವ್ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ ವಿಶ್ವದ ಕಿರಿಯ ಆಟಗಾರರಲ್ಲೊಬ್ಬರು. 2001ರಲ್ಲಿ ಆ್ಯಂಡಿ ರಾಡಿಕ್ ಕೂಡ 19ರ ಹರೆಯದಲ್ಲೇ ಈ ಹಂತಕ್ಕೆ ಬಂದಿದ್ದರು.