Advertisement
ಜೊಕೋವಿಕ್ ಪ್ರಾಬಲ್ಯ ಫೆಡರರ್ ಹಾಗೂ ಜೊಕೊವಿಕ್ ಇದುವರೆಗೆ ಒಟ್ಟು 47 ಸಲ ಪ್ರಮುಖ ಕೂಟಗಳಲ್ಲಿ ಮುಖಾಮುಖೀಯಾಗಿ ದ್ದಾರೆ. ಇದರಲ್ಲಿ ಜೊಕೊವಿಚ್ 25 ಪಂದ್ಯದಲ್ಲಿ ಗೆಲುವು ಗಳಿಸಿದ್ದರೆ ಫೆಡರರ್ 22 ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ. ಕಳೆದ 20 ಮುಖಾ ಮುಖೀಯಲ್ಲಿ ಜೊಕೋವಿಕ್ 14ರಲ್ಲಿ ಜಯಭೇರಿ ಬಾರಿಸಿದ್ದಾರೆ. ಜೊಕೊ ಒಟ್ಟಾರೆ 4 ಸಲ ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಆಗಿದ್ದಾರೆ¬. ಒಟ್ಟಾಯಾಗಿ ಇದುವರೆಗೆ 15 ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.
8 ಸಲ ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಆಗಿರುವ ಫೆಡರರ್ ತಮ್ಮೆಲ್ಲ ಅನುಭವವನ್ನು ಪಣಕ್ಕಿಟ್ಟು ಪಂದ್ಯ ಗೆಲ್ಲಲು ನಿರ್ಧರಿಸಿದ್ದಾರೆ. ಒಟ್ಟಾರೆ 21ನೇ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್‌ಗೆ ಪ್ರಶಸ್ತಿ ಮೇಲೆ ಫೆಡರರ್ ಕಣ್ಣಿಟ್ಟಿದ್ದಾರೆ. ಗೆದ್ದರೆ ಪ್ರಶಸ್ತಿ ಗೆದ್ದ ಅತೀ ಹಿರಿಯ ಗ್ರ್ಯಾನ್ ಸ್ಲಾಮ್ ವಿಜೇತರೆಂಬ ಖ್ಯಾತಿ ಪಡೆಯಲಿದ್ದಾರೆ.