Advertisement

ಫೆಡರರ್‌ಗೆ ಪ್ರಶಸ್ತಿ

06:10 AM Oct 31, 2017 | |

ಬಾಸಲ್‌: ತವರಿನ ಫೇವರಿಟ್‌ ರೋಜರ್‌ ಫೆಡರರ್‌ ಸ್ವಿಸ್‌ ಒಳಾಂಗಣ ಪ್ರಶಸ್ತಿಯನ್ನು ಎಂಟನೇ ಬಾರಿ ಗೆದ್ದುಕೊಂಡಿದ್ದಾರೆ. ಮೊದಲ ಸೆಟ್‌ ಕಳೆದುಕೊಂಡರೂ ವಿಚಲಿತರಾಗದ 36ರ ಹರೆಯದ ಫೆಡರರ್‌ ಅವರು ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರನ್ನು 6-7 (5-7), 6-4, 6-3 ಸೆಟ್‌ಗಳಿಂದ ಕೆಡಹಿ ಪ್ರಶಸ್ತಿ ಜಯಿಸಿದ್ದಾರೆ.

Advertisement

ಇದು ಫೆಡರರ್‌ ಅವರ ಟೆನಿಸ್‌ ಬಾಳ್ವೆಯ 95ನೇ ಎಟಿಪಿ ಪ್ರಶಸ್ತಿಯಾಗಿದೆ. ಸಾರ್ವಕಾಲಿಕ ಗರಿಷ್ಠ ಪ್ರಶಸ್ತಿ ಪಡೆದವರಲ್ಲಿ ಇದೀಗ ಅವರು ಇವಾನ್‌ ಲೆಂಡ್ಲ್ ಅವರನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. 109 ಪ್ರಶಸ್ತಿ ಗೆದ್ದಿರುವ ಜಿಮ್ಮಿ ಕಾನರ್ ಅಗ್ರಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next