Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಫಲಾನುಭವಿಗಳಿಗೆ ಚೆಕ್‌

02:30 PM Jun 07, 2019 | Team Udayavani |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ 20 ಮಂದಿ ಫಲಾನುಭವಿಗಳಿಗೆ (ಮದುವೆಗೆ 1, ವೈದ್ಯಕೀಯ ಚಿಕಿತ್ಸೆಗೆ 5, ವಸತಿ ಯೋಜನೆಗೆ 13 ಹಾಗೂ ಇತರ ಯೋಜನೆಗೆ 1) ಸಹಾಯಧನ ಮಂಜೂರು ಮಾಡಿದ ಚೆಕ್‌ಗಳನ್ನು ಜೂ. 3ರಂದು ಮಂಗಳೂರಿನಲ್ಲಿರುವ ಒಕ್ಕೂಟದ ಆಡಳಿತ ಕಚೇರಿಯಲ್ಲಿ ಶಶಿಧರ್‌ ಶೆಟ್ಟಿ ಬಂಟ್ಸ್‌ ಓಮನ್‌, ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಸತೀಶ್‌ ಅಡಪ್ಪ ಸಂಕಬೈಲ್‌ ಅವರು ವಿತರಿಸಿದರು.

Advertisement

ಶಶಿಧರ್‌ ಶೆಟ್ಟಿ ( ಬಂಟ್ಸ್‌ ಓಮನ್‌) ಅವರನ್ನು ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಹಾಗೂ ಪದಾಧಿಕಾರಿಗಳು ಸಮ್ಮಾನಿಸಿ ಗೌರವಿಸಿದರು. ಶಶಿಧರ್‌ ಶೆಟ್ಟಿ ಅವರು ಮಾತನಾಡುತ್ತ, ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸಾಮಾಜಿಕ ಕಾರ್ಯಕ್ರಮ ಆರ್ಥಿಕವಾಗಿ ಹಿಂದುಳಿದ ಸಮಾಜಬಾಂಧವರಿಗೆ ನೆರವು ನೀಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ತಮ್ಮ ಸಹಕಾರ ಮತ್ತು ಬೆಂಬಲ ಸದಾ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್‌, ಸಿಬಂದಿ ವರ್ಗದವರು, ಫಲಾನುಭವಿಗಳು, ಫಲಾನುಭವಿಗಳ ಪೋಷಕರು, ಸಂಬಂಧಿಕರು ಮೊದಲಾದವರು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸತೀಶ್‌ ಅಡಪ್ಪ ಸಂಕಬೈಲ್‌ ಅವರ ವಂದನಾರ್ಪಣೆಯೊಂದಿಗೆ ಸಭೆಯು ಮುಕ್ತಾಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next