Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಗಲ್ಫ್ ರಾಷ್ಟ್ರಗಳ ವಿಶೇಷ ಸಭೆ

04:32 PM May 16, 2018 | |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಗಲ್ಫ್ ರಾಷ್ಟ್ರಗಳ ವಿಶೇಷ ಸಭೆಯು ಮೇ 12ರಂದು ಪದ್ಮಶ್ರೀ ಡಾ| ಬಿ. ಆರ್‌. ಶೆಟ್ಟಿ ಅವರ ಅಬುಧಾಬಿಯ ಅತಿಥಿಗೃಹದಲ್ಲಿ ಡಾ| ಬಿ. ಆರ್‌. ಶೆಟ್ಟಿ ಅವರ ಗೌರವ ಉಪಸ್ಥಿತಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಒಮಾನ್‌, ಬಹರೇನ್‌, ಕತಾರ್‌, ಕುವೈಟ್‌, ಸೌದಿ ಅರೇಬಿಯಾ, ದುಬಾೖ, ಶಾರ್ಜಾದಿಂದ ಆಗಮಿಸಿದ ಗಲ್ಫ್ನ ಬಂಟರ ಸಂಘಗಳ ಪ್ರತಿನಿಧಿಗಳನ್ನು ಸ್ವಾಗತಿಸಿ ಮಾತನಾಡಿದ ಪದ್ಮಶ್ರೀ ಡಾ| ಬಿ. ಆರ್‌. ಶೆಟ್ಟಿ ಅವರು, ಐಕಳ ಹರೀಶ್‌ ಶೆಟ್ಟಿ ಅವರು  ಕ್ರಿಯಾಶೀಲ ವ್ಯಕ್ತಿತ್ವದ ಶ್ರೇಷ್ಠ ಸಂಘಟರಾಗಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಪ್ರಶಂಸನೀಯವಾಗಿವೆ. ಇದೀಗ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಾರಥ್ಯವನ್ನು ಸ್ವೀಕರಿಸಿರುವುದು ಗಲ್ಫ್ರಾಷ್ಟ್ರಗಳ ಬಂಟ ಸಮಾಜದ ಬಂಧುಗಳಾದ ನಮಗೆಲ್ಲ ಅತೀವ ಸಂತಸವಾಗಿದೆ. ಭರವಸೆಯ ಆಶಾಕಿರಣ ನಮ್ಮಲ್ಲಿ ಮೂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಂಟ ಸಮಾಜದ ಅಭಿವೃದ್ಧಿಯ ಜತೆ ತೀರಾ ಬಡತನದ ರೇಖೆಯಲ್ಲಿರುವ ಸಮಾಜದ ಬಂಧುಗಳನ್ನು ಕೈ ಹಿಡಿದು ಮೇಲಕ್ಕೆತ್ತುವ ಕಾರ್ಯ ಐಕಳ ಹರೀಶ್‌ ಶೆಟ್ಟಿ ಅವರಿಂದ ನಡೆಯಲಿ. ಅವರ ಸಮಾಮುಖೀ ಕಾರ್ಯಗಳಿಗೆ ನಮ್ಮೆಲ್ಲರ ಸಹಕಾರವಿದೆ ಎಂದರು.

ಒಕ್ಕೂಟವನ್ನು ಬಲಪಡಿಸೋಣ: ಐಕಳ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಮಾತ ನಾಡಿ, ಗಲ್ಫ್ ರಾಷ್ಟ್ರಗಳ ಬಂಟರ ಸಂಘಗಳ ಪ್ರತಿನಿಧಿಗಳು ಇಷ್ಟೊಂದು ಸಂಖ್ಯೆಯಲ್ಲಿ ಭಾಗವಹಿಸಿರುವುದನ್ನು ಕಂಡಾಗ ಸಂತಸ ವಾಗುತ್ತಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಆನಂತರ ಮುಂಬಯಿಯಲ್ಲಿ ಪ್ರಥಮ ವಿಶ್ವ ಬಂಟರ ಸಂಘಗಳ ಎಲ್ಲಾ ಪ್ರತಿನಿಧಿಗಳನ್ನು ಒಟ್ಟು ಸೇರಿಸಿ ಗ್ರಾಮೀಣ ಬಂಟ ಸಮಾಜದ ಅಭಿವೃದ್ಧಿಯ ಬಗ್ಗೆ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕವಾಗಿ ಹಿಂದುಳಿದ ಬಂಟ ಸಮಾಜದ ಬಂಧುಗಳಿಗೆ ಶಿಕ್ಷಣ, ವಿವಾಹ, ಆರೋಗ್ಯ, ಕ್ರೀಡೆಗೆ ಹೆಚ್ಚಿನ ಒತ್ತನ್ನು ನೀಡಲು ವಿಶೇಷ ಯೋಜನೆಯೊಂದನ್ನು ರೂಪಿಸಿ, ಸಮಾಜದ ಬಂಧುಗಳ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಮುಂಬಯಿ ಬಂಟರು, ದಾನಿಗಳು ವಿಶೇಷ ಸಹಕಾರವನ್ನು ನೀಡಿದ್ದಾರೆ. ತಾವೆಲ್ಲರೂ ಜಾಗತಿಕ ಬಂಟರ ಒಕ್ಕೂಟದ ಜತೆ ಕೈಜೋಡಿಸಿ ಸಂಘಟನೆಯನ್ನು ಬಲಪಡಿಸಬೇಕು. ಡಾ| ಬಿ. ಆರ್‌. ಶೆಟ್ಟಿ ಅವರ ಆತಿಥ್ಯಕ್ಕೆ ನಾವೆಂದೂ ಚಿರಋಣಿಯಾಗಿದ್ದೇವೆ. ಇಂದು ನಮಗೆ ಬಹಳಷ್ಟು ಭರವಸೆಯ ಆಶೀರ್ವಾದ ಸಿಕ್ಕಿದೆ. ನಾವೆಲ್ಲರೂ ಒಂದಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟವನ್ನು ಬಲಪಡಿಸೋಣ ಎಂದರು.

ಯುಎಇ ಬಂಟರ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರು ಸಮಾಜಮುಖೀ ಯಾವ ಕಾರ್ಯಕ್ಕೂ ಕೈ ಹಾಕಿದರೆ ಅದನ್ನು ಸಾಧಿಸಿಯೇ ಬಿಡುವ ಛಲವಾದಿ. ಮುಂಬಯಿ ಬಂಟರ ಸಂಘದಲ್ಲಿ ಅವರು ಮಾಡಿದ ಕಾರ್ಯ ಕಾರ್ಯ ಸಾಧನೆ ಅದ್ಭುತವಾಗಿದೆ. ಜಾಗತಿಕ ಬಂಕಟರ ಸಂಘಗಳ ಒಕ್ಕೂಟದ ತಮ್ಮ ಕಾರ್ಯದಲ್ಲಿ ಯುಎಇ ಯ ಎಲ್ಲಾ ಬಂಟರು ನಿಮ್ಮ ಜೊತೆಯಲ್ಲಿದ್ದಾರೆ ಎಂದರು.

ಒಮನ್‌ ಬಂಟರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಬಹರೇನ್‌ ಬಂಟರ ಸಂಘದ ಅಧ್ಯಕ್ಷ ನಾಗೇಶ್‌ ಶೆಟ್ಟಿ, ಕುವೇಟ್‌ ಬಂಟ್ಸ್‌ನ ಅಧ್ಯಕ್ಷ ಡಾ| ಶೇಖರ್‌ ಶೆಟ್ಟಿ, ಸೌದಿ ಅರೇಬಿಯದ ನಿಕಟಪೂರ್ವ ಅಧ್ಯಕ್ಷ ಮಹೇಶ್‌ ಹೆಗ್ಡೆ, ಯುಎಇ ಎಕ್ಸ್‌ಚೇಂಜ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧೀರ್‌ ಶೆಟ್ಟಿ, ಸಾಹಿತಿ ಡಾ| ಸುನೀತಾ ಶೆಟ್ಟಿ ಅವರು ಸಂದಭೋìಚಿತವಾಗಿ ಮಾತನಾಡಿದರು.

Advertisement

ಸಭೆಯಲ್ಲಿ ಅರಬ್‌ ಉಡುಪಿ ಹೊಟೇಲ್‌ ಸಮೂಹ ಸಂಸ್ಥೆಯ ನಿರ್ದೇಶಕ ಶೇಖರ್‌ ಶೆಟ್ಟಿ ಕಳತ್ತೂರು, ನಿಹಾಲ್‌ ರೆಸ್ಟೋರೆಂಟ್‌ನ ಸುಂದರ್‌ ಶೆಟ್ಟಿ, ಪ್ರೇಮ್‌ನಾಥ್‌ ಶೆಟ್ಟಿ, ಗಣೇಶ್‌ ರೈ, ಗುಣಶೀಲ್‌ ಶೆಟ್ಟಿ, ಜ್ಯೋತಿಕಾ ಶೆಟ್ಟಿ, ಭಾಗ್ಯಾ ಶೆಟ್ಟಿ, ಉಷಾ ಶೆಟ್ಟಿ, ನವೀನ್‌ ಶೆಟ್ಟಿ ಎಡೆ¾àರ್‌ ಸಹಿತ ಯುಎಇ ಬಂಟ್ಸ್‌ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘಟಕ ಕರ್ನೂರು ಮೋಹನ್‌ ರೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next