Advertisement

ಫೆಡರೇಶನ್‌ ಆ್ಯತ್ಲೆಟಿಕ್‌ ಯಶಸ್ಸು ವಿಶ್ವ ಕೂಟಕ್ಕೆ ಅವಿನಾಶ್‌ ಸಾಬ್ಲೆ

12:30 AM Mar 19, 2019 | |

ಹೊಸದಿಲ್ಲಿ: “ಫೆಡರೇಶನ್‌ ಆ್ಯತ್ಲೆಟಿಕ್‌ ಕಪ್‌’ ಕೂಟದ ಕೊನೆಯ ದಿನ ಸ್ಟಿಪಲ್‌ಚೇಸರ್‌ ಅವಿನಾಶ್‌ ಸಾಬ್ಲೆ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಆದರೆ ಭರವಸೆ ಆ್ಯತ್ಲಿಟ್‌ ಹಿಮಾ ದಾಸ್‌ 400 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದರೂ ಏಶ್ಯನ್‌ ಚಾಂಪಿಯನ್‌ಶಿಪ್‌ ಅರ್ಹತಾ ಗುರಿ ತಲುಪುವಲ್ಲಿ ವಿಫ‌ಲರಾದರು.

Advertisement

ಜಿನ್ಸನ್‌ ಜಾನ್ಸನ್‌ ಮತ್ತು ರಾಜೀವ್‌ ಆರೋಕಿಯ ಕ್ರಮವಾಗಿ ಪುರುಷರ 1,500 ಮತ್ತು 400 ಮೀ. ಓಟದಲ್ಲಿ ಗೆಲುವು ಸಾಧಿಸಿದ್ದಾರೆ. ಹೆಪಾrತ್ಲೀಟ್‌ ಸ್ವಪ್ನಾ ಬರ್ಮನ್‌ 5,900 ಅಂಕಗಳೊಂದಿಗೆ 7 ವಿಭಾಗದ ಸ್ಪರ್ಧೆಯನ್ನು ಮೊದಲ ಸ್ಥಾನದಲ್ಲಿ ಮುಗಿಸಿದ್ದಾರೆ. ಈ ಮೂವರೂ ಕ್ರೀಡಾಪಟುಗಳು ಏಶ್ಯನ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.

ಹಿಮಾಗೆ ಪರೀಕ್ಷೆ ಅಡ್ಡಿ
ಪಿಯುಸಿ ಪರೀಕ್ಷೆ ಕಾರಣ ಒಂದು ತಿಂಗಳು ತರಬೇತಿ ನಿಲ್ಲಿಸಿದ್ದ 19 ವರ್ಷ ಹಿಮಾ ದಾಸ್‌ 400 ಮೀ. ಓಟವನ್ನು 52.88 ಸೆಕೆಂಡ್‌ಗಳಲ್ಲಿ ಮುಗಿಸಿದ್ದಾರೆ. ಇದು ಅವರ ರಾಷ್ಟ್ರೀಯ ದಾಖಲೆ 50.79 ಸೆಕೆಂಡ್‌ಗಿಂತಲೂ ಕಳಪೆ.  ಹಾಗೆಯೇ ಏಶ್ಯನ್‌ ಚಾಂಪಿಯನ್‌ಶಿಪ್‌ಗೆ ಭಾರತೀಯ ಆ್ಯತ್ಲೆಟಿಕ್‌ ಫೆಡರೇಶನ್‌ನ ಅರ್ಹತಾ ಮಾನದಂಡ 52.75 ಸೆಕೆಂಡ್‌ಗಿಂತ ಸ್ವಲ್ಪ ಕಡಿಮೆಯಾಗಿದೆ.

ಆದರೆ ಹಿಂದಿನ ಪ್ರದರ್ಶನ ಹಾಗೂ ಒಟ್ಟು ಸಾಮರ್ಥ್ಯವನ್ನು ಪರಿಗಣಿಸಿ ದೋಹಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಶ್ಯನ್‌ ಚಾಂಪಿಯನ್‌ಶಿಪ್‌ಗೆ ಹಿಮಾ ದಾಸ್‌ ಅವಕಾಶ ಪಡೆಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next