Advertisement
ಹೌದು, ಫೆಡರಲ್ ಬ್ಯಾಂಕ್‌ನ ಗ್ರಾಹಕರು ಇನ್ನು ಕಾರ್ಡ್, ಕ್ಯಾಶ್, ಮೊಬೈಲ್ ಇಲ್ಲದೇ ಬರೀ ನಗುವಿನೊಂದಿಗೆ ‘ಸ್ಮೈಲ್ ಪೇ’ ಮೂಲಕ ವಹಿವಾಟು ನಡೆಸಬ ಹುದು. ಫೆಡರಲ್ ಬ್ಯಾಂಕ್ ತನ್ನ ಗ್ರಾಹಕ ರಿಗೆಂದೇ ಈ ವಿಶಿಷ್ಟ ಪಾವತಿ ವಿಧಾನ ರೂಪಿಸಿದೆ. ವಹಿವಾಟು ನಡೆಸುವ ವ್ಯಾಪಾರಿಗಳು ಮತ್ತು ಗ್ರಾಹಕರು ಈ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಈ ಲಾಭ ಪಡೆಯಬಹುದು. ಫೆಡರಲ್ ಬ್ಯಾಂಕ್‌ನ ಎಫ್ಇಡಿ ಮರ್ಚೆಂಟ್ ಆ್ಯಪ್‌ನಲ್ಲಿ ಸ್ಮೈಲ್ ಪೇ ಲಭ್ಯವಿದೆ. ಆಧಾರ್ ಮುಖ ಗುರುತಿಸುವಿಕೆ ತಂತ್ರಜ್ಞಾನದಿಂದ ಇದರ ಬಳಕೆ ಸಾಧ್ಯ ಎಂದು ಬ್ಯಾಂಕ್ ತಿಳಿಸಿದೆ.
ವ್ಯಾಪಾರಿಗಳು ಎಫ್ಇಡಿ ಮರ್ಚೆಂಟ್ ಆ್ಯಪ್‌ನ ಸ್ಮೈಲ್ ಪೇ ಪಾವತಿ ಬಳಸಿ ಗ್ರಾಹಕರ ಮುಖ ಸ್ಕ್ಯಾನ್ ಮಾಡಬೇಕು
ಆಧಾರ್ ಮುಖ ಗುರುತಿಸುವಿಕೆ ಮೂಲಕ ಗ್ರಾಹಕರ ಗುರುತು ಸಿಗಲಿದೆ. ಬಳಿಕ ಗ್ರಾಹಕರ ಖಾತೆಯಿಂದ ವ್ಯಾಪಾರಿಗೆ ಹಣ ವರ್ಗಾವಣೆಯಾಗಲಿದೆ.