Advertisement

Feb. 3ರಂದು ಐಕಳಬಾವ ಕಂಬಳ್ಳೋತ್ಸವ: ಡಾ| ಎಂ.ಎನ್‌.ಆರ್‌.ಗೆ “ಕರಾವಳಿ ರತ್ನ’ ಪ್ರಶಸ್ತಿ

11:15 PM Jan 30, 2024 | Team Udayavani |

ಮಂಗಳೂರು: ಐಕಳಬಾವ ಕಾಂತಾ ಬಾರೆ-ಬೂದಾಬಾರೆ ಜೋಡುಕರೆ ಕಂಬಳ್ಳೋತ್ಸವ ಫೆ. 3ರಂದು ಜರಗಲಿದೆ. 400 ವರ್ಷಗಳ ಇತಿಹಾಸ ಹೊಂದಿರುವ ಐಕಳ ಕಂಬಳವನ್ನು ಜಾನಪದ ಕ್ರೀಡಾಮೇಳದೊಂದಿಗೆ “ಐಕಳ್ಳೋತ್ಸವ’ ರೀತಿಯಲ್ಲಿ ಆಯೋಜಿಸಲಾಗುತ್ತಿದೆ.

Advertisement

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ “ಕರಾವಳಿ ರತ್ನ’ ಪ್ರಶಸ್ತಿ ನೀಡಲಾಗುವುದು ಎಂದು ಕಂಬಳ್ಳೋತ್ಸವ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ.

30 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿರುವ ಡಾ| ರಾಜೇಂದ್ರ ಕುಮಾರ್‌ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಬದಲಾವಣೆಯ ಹರಿಕಾರ. ಅವರ ದೂರದರ್ಶಿತ್ವದ ನಾಯಕತ್ವದಿಂದಲೇ ಎಸ್‌ಸಿಡಿಸಿಸಿ ಬ್ಯಾಂಕ್‌ ಇಂದು ಜನಸ್ನೇಹಿ ಬ್ಯಾಂಕ್‌ ಆಗಿ ರೂಪಿತಗೊಂಡಿದೆ.

ಸುಸಜ್ಜಿತ ವಾಹನದಲ್ಲಿ ಮೊಬೈಲ್‌ ಬ್ಯಾಂಕ್‌ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು ಅವರು. ಕಂಬಳ ಪ್ರೇಮಿಯಾಗಿರುವ ರಾಜೇಂದ್ರ ಕುಮಾರ್‌ ಕಂಬಳಕ್ಕೂ ಕ್ರೀಡೆಯ ಪ್ರೋತ್ಸಾಹಕರೂ ಮಾರ್ಗದರ್ಶಕರೂ ಹೌದು ಎಂದು ದೇವಿಪ್ರಸಾದ್‌ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next