Advertisement

ಸಮಾಜದ ಸ್ವಾಸ್ಥ್ಯವೇ ಮುಖ್ಯ ಧ್ಯೇಯ

03:24 PM Feb 20, 2021 | Team Udayavani |

ಜಗತ್ತಿನಲ್ಲಿ ಎಲ್ಲ ಕೆಲಸಗಳನ್ನು ಪೂರೈಸಲು ಮತ್ತು ನಿರ್ವಹಿಸಲು ಸರಕಾರಗಳಿಗೆ ಕಷ್ಟವಾಗುತ್ತದೆ. ಇಂಥ ಸಂದರ್ಭ ಎನ್‌ಜಿಒಗಳು ಒಂದು ಸರಕಾರ ಮಾಡಲಾಗದ ಕೆಲಸವನ್ನು ಸಾಧಿಸಿ ತೋರಿಸುತ್ತವೆ. ಇವುಗಳು ಸರಕಾರಗಳ ಕೆಲಸವನ್ನು ಸುಲಭಗೊಳಿಸುವುದಲ್ಲದೇ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಸಂಸ್ಥೆಗಳಾಗಿವೆ. ಎನ್‌ಜಿಒ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಉದ್ದೇಶಕ್ಕಾಗಿ ತೊಡಗಿಸಿಕೊಂಡಿರುವ ಮತ್ತು ಸಮರ್ಪಕವಾಗಿ ಕೆಲಸ ಮಾಡಲು ವಿಶ್ವಾದ್ಯಂತ ಜನರನ್ನು ಪ್ರೋತ್ಸಾಹಿಸಲು ಪ್ರತೀ ವರ್ಷ ಫೆಬ್ರವರಿ 27ರಂದು ವಿಶ್ವ ಎನ್‌ಜಿಒ ದಿನವನ್ನು ಆಚರಿಸಲಾಗುತ್ತದೆ.

Advertisement

ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್‌ 21ನೇ ಶತಮಾನವನ್ನು ಎನ್‌ಜಿಒಗಳ ಯುಗ ಎಂದು ಬಣ್ಣಿಸಿ¨ªಾರೆ. ಸಂಕಷ್ಟದಲ್ಲಿರುವವರಿಗೆ ಪರಿಹಾರ ದೊರಕಿಸುವುದು ಇವುಗಳ ಉದ್ದೇಶವಾಗಿದೆ.

ಸರಕಾರೇತರ, ಲಾಭರಹಿತ ಎನ್‌ಜಿಒಗಳು ಕಾನೂನು ಬದ್ಧವಾಗಿ ಸ್ಥಾಪಿತಗೊಂಡ ಸಂಸ್ಥೆಗಳಾಗಿವೆ. ಸರಕಾರದಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಸರಳವಾಗಿ ಹೇಳುವುದಾದರೆ ಸರಕಾರೇತರ, ಲಾಭ ರಹಿತ, ಬದ್ಧತೆ ಇರುವ ಸಮೂಹ. ಸಾರ್ವಜನಿಕರ ಹಿತರಕ್ಷಣೆಯೇ ಈ ಸಮೂಹಗಳ ಉದ್ದೇಶ. ಮಾನವ ಹಕ್ಕುಗಳು, ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದೇ ಇವುಗಳ ಮೂಲ ಉದ್ದೇಶವಾಗಿದೆ. ಸಾಮಾನ್ಯವಾಗಿ ಎನ್‌ಜಿಒಗಳು ಸರಕಾರದಿಂದ ಪೂರ್ಣ ಪ್ರಮಾಣದಲ್ಲಿ ಸಹಕಾರ ಪಡೆದುಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಭಾಗಶಃ ದೇಣಿಗೆಯನ್ನು ಪಡೆಯುತ್ತವೆ. ಸರಕಾರೇತರ ಸಂಸ್ಥೆ ಎಂದೆನಿಸಿಕೊಳ್ಳಲು ಸರಕಾರಿ ಪ್ರತಿನಿಧಿಗಳನ್ನು ತನ್ನ ಸಂಸ್ಥೆಯ ಪ್ರತಿನಿಧಿತ್ವದಿಂದ ಅಥವಾ ಸದಸ್ಯತ್ವದಿಂದ ಹೊರಗಿರಿಸುತ್ತದೆ.

ಕಾರ್ಯ ವಿಧಾನ :
ಸರಕಾರೇತರ ಸಂಸ್ಥೆಗಳಲ್ಲಿ ಮುಖ್ಯವಾಗಿ ಎರಡು ವಿಧ. ಕಾರ್ಯಾತ್ಮಕ ಎನ್‌ಜಿಒಗಳು, ಸಲಹಾತ್ಮಕ ಎನ್‌ಜಿಒಗಳೆಂದು ಸ್ಥೂಲವಾಗಿ ಅವುಗಳನ್ನು ವಿಂಗಡಿಸಲಾಗಿದೆ. ಇವೆರಡರ ಪ್ರಮುಖ ಉದ್ದೇಶಗಳು ಅಭಿವೃದ್ಧಿ ಆಧಾರಿತ ಯೋಜನೆಗಳನ್ನು ವಿನ್ಯಾಸಗೊಳಿಸಿ ಅವುಗಳ ಅನುಷ್ಠಾನಗೊಳಿಸುವುದು. ಕಾರ್ಯಾತ್ಮಕ ಎನ್‌ಜಿಒಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸಮುದಾಯ ಆಧಾರಿತ ಸಂಘಟನೆಗಳೆಂದು ವರ್ಗೀಕರಿಸಬಹುದು. ಇನ್ನೊಂದೆಡೆ ಸಲಹಾತ್ಮಕ ಎನ್‌ಜಿಒಗಳನ್ನು ಅಂತಾರಾಷ್ಟ್ರೀಯ ಸಂಘಟನೆಗಳೆಂದು ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರ ಜತೆಗೆ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಫ‌ಂಡಿಂಗ್‌ ಸಂಸ್ಥೆಗಳಿಂದ ಗುರುತಿಸಿಕೊಂಡು, ಅವುಗಳಿಂದ ಸಹಾಯಧನವನ್ನು ಪಡೆದುಕೊಂಡು, ತಳಮಟ್ಟದಲ್ಲಿ ಉದ್ದೇಶಿತ ಜನಸಮುದಾಯಗಳ ಮಧ್ಯೆ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಹಾಗೂ ಹಂತ ಹಂತವಾಗಿ ಹಮ್ಮಿಕೊಳ್ಳುತ್ತವೆ.

ಇತಿಹಾಸ ಪಾಶ್ಚಾತ್ಯರು ಭಾರತವನ್ನು ಆಕ್ರಮಿಸಿಕೊಂಡ ಅನಂತರ ಇಲ್ಲಿಗೆ ಕ್ರೈಸ್ತ ಮಿಷನರಿಗಳು ಬಂದವು. ಸೇವಾ ಚಟುವಟಿಕೆಗಳ ಮೂಲಕ ಜನರನ್ನು ಒಲಿಸಿಕೊಳ್ಳುವುದು ಅವುಗಳ ಉದ್ದೇಶವಾಗಿತ್ತು. ವೈದ್ಯಕೀಯ, ಶಿಕ್ಷಣ, ವೃದ್ಧಾಶ್ರಮ, ಅನಾಥಾಶ್ರಮ ಮುಂತಾದ ಸೇವಾ ಚಟುವಟಿಕೆಗಳಲ್ಲಿ ಅವು ತೊಡಗಿಸಿಕೊಂಡಿದ್ದವು. ಕ್ರೈಸ್ತ ಮಿಷನರಿಗಳು 1830ರಲ್ಲಿಯೇ “ಫ್ರೆಂಡ್ಸ್‌ ಇನ್‌ ನೀಡ್‌ ಸೊಸೈಟಿ’ ಎಂಬ ಸಂಸ್ಥೆಯನ್ನು ಆರಂಭಿಸಿ ನಿರ್ಗತಿಕ ವೃದ್ಧರಿಗೆ ನೆರವಾಗುತ್ತಿದ್ದರು. ವಿಶೇಷ ಎಂದರೆ ಆರಂಭದಲ್ಲಿ 1945ರಲ್ಲಿ ಯುನೈಟೆಡ್‌ ನೇಶನ್ಸ್‌ ಅನ್ನು ಅಂತಾರಾಷ್ಟ್ರೀಯ ಸರಕಾರೇತರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ರಚಿಸಲಾಗಿತ್ತು.

Advertisement

ಸರ್ವ ಕ್ಷೇತ್ರ ಕಾರ್ಯ :
ಸರಕಾರೇತರ ಸಂಸ್ಥೆಗಳು ಪ್ರವೇಶಿಸದ ಕ್ಷೇತ್ರವಿಲ್ಲ ಎನ್ನಬಹುದು. ಶಿಕ್ಷಣ, ಮಕ್ಕಳು, ಸಮಾಜ, ಮಹಿಳೆಯರು, ವೃದ್ಧರು, ಗುಡಿಸಲು ನಿವಾಸಿಗಳು, ದಲಿತರು, ಮಕ್ಕಳು, ಅಂಗವಿಕಲರು, ಬೀದಿ ಮಕ್ಕಳು, ನಗರ ಪ್ರದೇಶಗಳ ಬಡವರು, ಕೃಷಿ ಕೂಲಿಕಾರರು, ಎಚ್‌ಐವಿ, ಕುಷ್ಠ ರೋಗಕ್ಕೆ ತುತ್ತಾದವರು, ಅನಾಥ ಮಕ್ಕಳು, ಸೆಕ್ಸ್‌ ವರ್ಕರ್ಸ್‌, ಮಾದಕ ವಸ್ತುಗಳಿಗೆ ಮಾರು ಹೋದವರು.. ಹೀಗೆ ಎಷ್ಟೋ ರೀತಿಯ ಜನರ ಸಬಲೀಕರಣಕ್ಕಾಗಿ ಜಗತ್ತಿನಲ್ಲಿ ಸಹಸ್ರಾರು ಸರಕಾರೇತರ ಸಂಸ್ಥೆಗಳು ಕೆಲಸ ಮಾಡುತ್ತಿವೆ.

ಆಯ್ಕೆ ಹೇಗೆ? ಕಾನೂನಿನ ಚೌಕಟ್ಟಿಗೆ ಒಳಪಡುವುದೇ? :
ಸರಕಾರೇತರ ಸಂಸ್ಥೆಗಳು ಅಥವಾ ಎನ್‌ಜಿಒಗಳು ಟ್ರಸ್ಟ್‌ ಸೊಸೈಟಿ, ಸಂಘ ಎಂದು ಕಾನೂನಿನ ಅನ್ವಯವೇ ನೋಂದಣಿಯಾಗಿರುತ್ತವೆ. ಇಂತಹ ಟ್ರಸ್ಟ್‌ಗಳಲ್ಲಿ ಟ್ರಸ್ಟಿಗಳು ಹಾಗೂ ಮ್ಯಾನೇಜಿಂಗ್‌ ಟ್ರಸ್ಟಿ ಇರುತ್ತಾರೆ. ಸಲಹಾ ಮಂಡಳಿಯನ್ನು ರಚಿಸಿಕೊಳ್ಳಲಾಗಿರುತ್ತದೆ. ಸೊಸೈಟಿ ಅಥವಾ ಸಂಘ ಎಂದು ನೋಂದಾಯಿಸಲಾಗಿದ್ದರೆ ಸಾಮಾನ್ಯವಾಗಿ ಅಲ್ಲಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚು ಇದ್ದರೆ ಚುನಾವಣೆ ನಡೆಯುತ್ತವೆ.

ಜಗತ್ತಿನ ಟಾಪ್‌ 5 ಎನ್‌ಜಿಒಗಳು  :

– ಟ್ರಾನ್ಸ್‌ಪರೆಂಟ್‌ ಹ್ಯಾಂಡ್ಸ್‌
– ದ ವಿಕಿಮೀಡಿಯಾ ಫೌಂಡೇಶನ್‌
– ಬ್ರಾಕ್‌
– ಡ್ಯಾನಿಶ್‌ ರೆಫ್ಯೂಜಿ ಕೌನಿಲ್‌
– ಪಾಟರ್ನ್ಸ್ ಇನ್‌ ಹೆಲ್ತ್‌-

 

Advertisement

Udayavani is now on Telegram. Click here to join our channel and stay updated with the latest news.

Next