Advertisement

ಫೆ.10:  ಹಿಂದೂ ರಾಷ್ಟ್ರ  ಜಾಗೃತಿ ಸಭೆ

12:50 AM Jan 17, 2019 | Harsha Rao |

ಉಡುಪಿ: ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಜಿÇÉೆಯಾದ್ಯಂತ  ಈಗಾಗಲೇ ಪುತ್ತೂರು ಅಂಬಾಗಿಲು, ನೇರಳಕಟ್ಟೆ, ಕೆರಾಡಿ, ಪರ್ಕಳದಲ್ಲಿ  ಧರ್ಮ ಜಾಗೃತಿ ಸಭೆಗಳು ನಡೆದಿದ್ದು, ಉಡುಪಿಯಲ್ಲಿ   ಫೆ.10ರಂದು   ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸುವ ಕುರಿತು  ಜ. 15 ರಂದು ಉಡುಪಿ ರಥಬೀದಿಯ ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಸಭೆ ಜರಗಿತು.

Advertisement

ಸಭೆಯಲ್ಲಿ   ಭಾಗವಹಿಸಿದ  ಸಮಿತಿಯ  ವಿಜಯ ಕುಮಾರ  ಅವರು  ಮಾತನಾಡಿ,  ಹಿಂದೂ ಧರ್ಮದ ಮೇಲಾಗುವ ಆಘಾತಗಳನ್ನು ತಡೆಯುವುದು ಪ್ರಸ್ತುತ ಕಾಲದ ಮಹತ್ವದ ಧರ್ಮ ಕಾರ್ಯವಾಗಿದೆ. ಅದಕ್ಕಾಗಿ  ಎಲ್ಲರೂ  ಸಂಘಟಿತರಾಗಬೇಕಾಗಿದೆ. ಹಿಂದೂ ಸಮಾಜ, ದೇಶದ ಮೇಲೆ ಎರಗಿ ಬಂದ ಎಲ್ಲ ಸಮಸ್ಯೆಗಳಿಗೆ  ಹಿಂದೂ ರಾಷ್ಟ್ರದ ಸ್ಥಾಪನೆಯಿಂದ ಶಾಶ್ವತವಾಗಿ ಪರಿಹಾರ ಸಿಗಲಿದೆ. ಅದಕ್ಕಾಗಿ ಎಲ್ಲರೂ  ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಭಾಗವಹಿಸಬೇಕು ಎಂದರು.

ಸನಾತನ ಸಂಸ್ಥೆಯ ಶೋಭಾ, ಶ್ರೀರಾಮಸೇನೆಯ ಜಿÇÉಾಧ್ಯಕ್ಷ ಜಯರಾಮ ಅಂಬೆಕಲ್ಲು  ಮತ್ತು ಇತರ ಸಂಘಟನೆಗಳ ಹಲವರು ಭಾಗವಹಿಸಿದ್ದರು. ಪೂರ್ವಭಾವಿ ಸಭೆಯಲ್ಲಿ  ಫೆ.10ರಂದು  ಉಡುಪಿಯ ಬೋರ್ಡ… ಹೈಸ್ಕೂಲಿನ  ವಠಾರದಲ್ಲಿ  ದೊಡ್ಡ ಮಟ್ಟದ  ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು  ನಡೆಸಲು  ನಿರ್ಧರಿಸಲಾಯಿತು. ಇದಕ್ಕಾಗಿ ಜಿÇÉೆಯಾದ್ಯಂತ  ದೇವಸ್ಥಾನಗಳು, ಭಜನಾ ಮಂದಿರ, ಧಾರ್ಮಿಕ  ಸಂಘಟನೆಗಳು, ಯುವಕ ಮಂಡಲಗಳು, ಜಾತಿ ಸಂಘಟನೆಗಳನ್ನು  ಭೇಟಿ ಮಾಡಲು  ನಿರ್ಧರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next