Advertisement

ನಿಫಾ ಭೀತಿ: ಸೌದಿಯಿಂದ ಕೇರಳದ ಹಣ್ಣು , ತರಕಾರಿ ಆಮದು ನಿಷೇಧ

03:25 PM Jun 05, 2018 | Team Udayavani |

ರಿಯಾಧ್‌ : ಮಾರಣಾಂತಿಕ ನಿಫಾ ವೈರಸ್‌ ಹರಡುವ ಭೀತಿಯಲ್ಲಿ ಸೌದಿ ಅರೇಬಿಯ, ಕೇರಳದ ಶೀತಲೀಕೃತ ಅಥವಾ ಸಂಸ್ಕರಿತ ಹಣ್ಣುಹಂಪಲು ಮತ್ತು ತರಕಾರಿ ಆಮದನ್ನು ನಿಷೇಧಿಸಿದೆ. 

Advertisement

ನಿಫಾ ವೈರಸ್‌ನಿಂದ ಮಂಗನ ಕಾಯಿಲೆ ಹರಡುವ ಭೀತಿ ಕೂಡ ಇದೆ. ಎರಡೂ ಕಾಯಿಲೆಗಳ ಗುಣಲಕ್ಷಣಗಳು ಬಹುತೇಕ ಒಂದೇ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಏರುತ್ತಲೇ ಹೋಗುವ ಜ್ವರ, ಕೆಮ್ಮು, ತಲೆ ನೋವು, ಉಸಿರಾಟದಲ್ಲಿನ ವ್ಯತ್ಯಯ ಇತ್ಯಾದಿ ತೊಂದರೆಗಳು ವೈರಸ್‌ಗೆ ಈಡಾದವರಲ್ಲಿ ಕಂಡು ಬರುತ್ತದೆ ಎಂದು ಗಲ್ಫ್ ನ್ಯೂಸ್‌ ವರದಿ ಮಾಡಿದೆ. 

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕಳೆದ ಮೇ 29ರಂದೇ ಕೇರಳದಿಂದ ಹಣ್ಣು ಹಂಪಲು ತರಕಾರಿಗಳ ಆಮದನ್ನು ನಿಷೇಧಿಸಿದೆ. ಇದಕ್ಕೆ ಮೊದಲೇ ಕೊಟ್ಟಿದ್ದ 100 ಟನ್ನುಗಳ ಹಣ್ಣು ಹಂಪಲು ತರಕಾರಿ ಉತ್ಪನ್ನಗಳ ಆಮದು ಆರ್ಡರನ್ನು  ರದ್ದು ಪಡಿಸಿರುವುದಾಗಿ ಯುಎಇ ಅಧಿಕಾರಿಗಳು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next