Advertisement
ಭಾರತೀಯರ ವಾರ್ನಿಂಗ್ಒಂದು ವೇಳೆ ಫೇಸ್‌ಬುಕ್ ಅಥವಾ ಥರ್ಡ್ ಪಾರ್ಟಿ ಜತೆಗೆ ದತ್ತಾಂಶ ಹಂಚಿಕೊಂಡರೆ ವಾಟ್ಸ್ ಆ್ಯಪ್ ಬಳಕೆ ನಿಲ್ಲಿಸುತ್ತೇವೆ ಎಂದು ಶೇ.75 ಭಾರತೀಯ ಬಳಕೆದಾರರು ಸ್ಪಷ್ಪಪಡಿಸಿದ್ದಾರೆ. ನಂಬಿಕೆಗೆ ದ್ರೋಹ ಬಗೆದರೆ ವಾಟ್ಸ್ ಆ್ಯಪ್‌ನಲ್ಲಿ ಹಣ ವರ್ಗಾವಣೆ ನಿಲ್ಲಿಸುತ್ತೇವೆ ಎಂದು ಶೇ.93 ಮಂದಿ ಎಚ್ಚರಿಸಿದ್ದಾರೆ.
ನೂತನ ಪಾಲಿಸಿ ಸ್ವೀಕರಿಸಲು ವಾಟ್ಸ್ ಆ್ಯಪ್ ಫೆ.8ರಿಂದ ಮೇ 15ರವರೆಗೆ ಗಡುವು ನೀಡಿದೆ. ಈ ಪಾಲಿಸಿ ಒಪ್ಪಿಕೊಂಡರೆ ತನ್ನ ಬಳಕೆದಾರರ ಡೇಟಾವನ್ನು ವಾಟ್ಸ್ ಆ್ಯಪ್, ಪೋಷಕ ಸಂಸ್ಥೆ ಫೇಸ್‌ಬುಕ್‌ಗೆ ನೀಡಲಿದೆ ಎನ್ನುವುದು ಸದ್ಯಕ್ಕಿರುವ ಆರೋಪ. ಆದರೆ, ತಾನು ಯಾವುದೇ ದತ್ತಾಂಶ ವರ್ಗಾಯಿಸುವುದಿಲ್ಲ ಎಂದು ವಾಟ್ಸ್ ಆ್ಯಪ್ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದೆ. ವಾಟ್ಸ್ ಆ್ಯಪ್ ಮಾಯ!
*ಶೇ.5 ಬಳಕೆದಾರರು ವಾಟ್ಸ್ ಆ್ಯಪ್ ಡಿಲೀಟ್ ಮಾಡಿದ್ದಾರೆ.
*ಶೇ.21 ಮಂದಿ ಸಿಗ್ನಲ್, ಟೆಲಿಗ್ರಾಮ್‌ಗಳ ಬಳಕೆ ಆರಂಭಿಸಿದ್ದಾರೆ.
*ಶೇ.34 ಮಂದಿ ಪರ್ಯಾಯ ಆ್ಯಪ್ ಡೌನ್ ಲೋಡ್ ಮಾಡಿದ್ದರೂ, ಇನ್ನೂ ಬಳಕೆ ಆರಂಭಿಸಿಲ್ಲ.
*ಶೇ.15 ಮಂದಿ ಈಗಲೂ ನಾವು ವಾಟ್ಸ್ ಆ್ಯಪ್ ಬಳಸು ತ್ತಿದ್ದೇವೆ ಅಂತಲೇ ಹೇಳಿದ್ದಾರೆ.
*ಶೇ.6 ಮಂದಿ ವಾಟ್ಸ್ ಆ್ಯಪ್ ಬಳಕೆ ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ.
*ಏನೇ ಆದ್ರೂ ನಾವು ವಾಟ್ಸ್ ಆ್ಯಪ್ ಮುಂದುವರಿಸು ತ್ತೇವೆ ಎಂದು ಶೇ.18 ಮಂದಿ ಹೇಳಿದ್ದಾರೆ.