Advertisement
ಸ್ಮಾರ್ಟ್ ಸಿಟಿ ಯೋಜನೆ ಸಹಿತ ವಿವಿಧ ಯೋಜನೆಗಳಡಿ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳನ್ನು ವಿಸ್ತರಿಸುವುದು, ಚರಂಡಿ, ಫುಟ್‌ಪಾತ್ ನಿರ್ಮಾಣ ಮೊದಲಾದ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಕೆಲವೆಡೆ ಆಟೋ ನಿಲ್ದಾಣಗಳಿರುವ ಜಾಗ ದಲ್ಲಿ ಇಲ್ಲವೇ ನಿಲ್ದಾಣ ಜಾಗದ ಸನಿಹದಲ್ಲೇ ಕಾಮಗಾರಿಗಳು ನಡೆಯುತ್ತಿವೆ. ಜಾಗದ ಕೊರತೆ ಇರುವು ದರಿಂದ ಆಟೋ ನಿಲ್ದಾಣ ಗಳನ್ನು ಉಳಿಸಬೇಕೇ ಬೇಡವೆ ಎಂಬ ಸಂದಿಗ್ಧ ಪಾಲಿಕೆಗೆ ಎದುರಾಗಿದೆ. ಇದೇ ವೇಳೆ ಆಟೋ ನಿಲ್ದಾಣಗಳನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು, ಸ್ಥಳಾವಕಾಶ ಮಾಡಿಕೊಡಬೇಕು ಎಂಬ ಬಲವಾದ ಬೇಡಿಕೆ ರಿಕ್ಷಾ ಚಾಲಕರ ಕಡೆಯಿಂದ ಕೇಳಿ ಬರಲಾರಂಭಿಸಿದೆ.
ಕಾಮಗಾರಿ ನಡೆಸುವ ವೇಳೆ ಪಾಲಿಕೆ ಎಂಜಿನಿಯರ್‌ಗಳು ಆಟೋ ನಿಲ್ದಾಣಗಳಿಗೆ ಸ್ಥಳವಿಲ್ಲದಂತೆ ಮಾಡುತ್ತಿದ್ದಾರೆ. ವಾಣಿಜ್ಯ ಸಂಕೀರ್ಣಗಳಿರುವ ಸ್ಥಳದಲ್ಲಿ ಆ ಕಟ್ಟಡ ಗಳಿಗೆ ಬೇಕಾದಂತೆ ಫುಟ್‌ಪಾತ್ ವಿನ್ಯಾಸ ಮಾಡುತ್ತಿದ್ದಾರೆ. ಆದರೆ ಆಟೋ ನಿಲ್ದಾಣಗಳಿರುವಲ್ಲಿ ಆ ರೀತಿ ಮಾಡುತ್ತಿಲ್ಲ ಎಂದು ರಿಕ್ಷಾ ಚಾಲಕರು ದೂರಿದ್ದಾರೆ. ಈಗಾಗಲೇ ಪಿವಿಎಸ್ ಕಟ್ಟೆಪಾರ್ಕ್, ಬಲ್ಲಾಳ್‌ಬಾಗ್ ಪಾರ್ಕ್, ಹಂಪನಕಟ್ಟೆ, ತಾಜ್‌ಮಹಲ್ ಪಾರ್ಕ್ ಮೊದಲಾದೆಡೆ ಭಾರೀ ಸಮಸ್ಯೆ ಎದುರಾಗಿದೆ ಎಂದು ಆಟೋ ಚಾಲಕರ ಅಹವಾಲು. ಸರ್ವೇಗೆ ನಿರ್ಧಾರ
ಇನ್ನೊಂದೆಡೆ ಸಂಚಾರಿ ಪೊಲೀಸರು ನಗರದ ಆಟೋರಿಕ್ಷಾಗಳ ಸಾಮರ್ಥ್ಯದ ಬಗ್ಗೆ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ರಿಕ್ಷಾಗಳ ಪ್ರಾಥಮಿಕ ಸರ್ವೇ ಆರಂಭಿಸಿದ್ದಾರೆ. ಇದು ಆಟೋ ಚಾಲಕರ ಆತಂಕ ಹೆಚ್ಚಿಸಿದೆ. ನಗರದ ಆಟೋ ನಿಲ್ದಾಣಗಳ ಪೈಕಿ ಹೆಚ್ಚಿನವುಗಳಿಗೆ ಮೇಲ್ಛಾವಣಿಯನ್ನೂ ಮಾಡಿಕೊಟ್ಟಿಲ್ಲ. ಇದೀಗ ಅಧಿಕೃತ ನಿಲ್ದಾಣಗಳನ್ನು ಕೂಡ ಎತ್ತಂಗಡಿ ಮಾಡಲು ಮುಂದಾಗಿದ್ದಾರೆ. 2014ರಲ್ಲಿ 1,250 ಆಟೋಗಳಿಗೆ ಪರವಾನಿಗೆ ನೀಡುವಾಗಲೇ ನಾವು ಆಕ್ಷೇಪಿಸಿದ್ದೆವು. ಈಗ ನಗರದಲ್ಲಿ ನಿಲ್ದಾ ಣದ ಸಮಸ್ಯೆ ಹೆಚ್ಚಾಗಿದೆ. ಈಗ ಇರುವ ಎಲ್ಲ ನಿಲ್ದಾಣಗಳನ್ನು ನೋಂದಣಿ ಮಾಡಿಸಿ ಹಾಗೆಯೇ ಉಳಿಸಬೇಕು. ಆಟೋ ನಿಲ್ದಾಣಗಳ ಅಸ್ತಿತ್ವಕ್ಕೂ ಸಮಸ್ಯೆ ಯಾಗದಂತೆ, ಸಾರ್ವಜನಿಕರಿಗೆ, ಇತರ ವಾಹನಗಳ ಸಂಚಾರಕ್ಕೂ ತೊಂದರೆ ಯಾಗದ ರೀತಿಯಲ್ಲಿ ಕಾಮಗಾರಿ ನಡೆಸ ಬೇಕು ಎನ್ನುತ್ತಾರೆ ಚಾಲಕರು.
Related Articles
ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 7,500ಕ್ಕೂ ಅಧಿಕ ಆಟೋ ರಿಕ್ಷಾಗಳಿವೆ. 304 ಆಟೋರಿಕ್ಷಾ ನಿಲ್ದಾಣಗಳಿವೆ. ಇದರಲ್ಲಿ 65 ನಿಲ್ದಾಣ ಗಳು ನೋಂದಣಿಯಾಗಿವೆ ಎಂದು ಆಟೋ ರಿಕ್ಷಾ ಚಾಲಕರ ಸಂಘದ ಮುಂದಾಳುಗಳು ತಿಳಿಸಿದ್ದಾರೆ.
Advertisement
ಸಂಚಾರಕ್ಕೆ ಅಡ್ಡಿಕೆಲವು ಕಡೆ ಸ್ಥಳಾವಕಾಶವಿಲ್ಲ. ಇನ್ನು ಕೆಲವು ನಿಲ್ದಾಣಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಆಟೋಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಾರ್ವ ಜನಿಕರು, ಇತರ ವಾಹನಗಳ ಓಡಾಟಕ್ಕೆ ಭಾರೀ ಅಡ್ಡಿಯಾಗಿದೆ. ಹಾಗಾಗಿ ರಿಕ್ಷಾ ನಿಲ್ದಾಣಗಳ ಸಾಮ ರ್ಥ್ಯದ ಬಗ್ಗೆ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮತ್ತೂಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
-ನಟರಾಜ್, ಎಸಿಪಿ ಸಂಚಾರ ಪೊಲೀಸ್ ವಿಭಾಗ ಆಟೋ ನಿಲ್ದಾಣ ಉಳಿಸಿ
ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಹಲವು ರಿಕ್ಷಾ ನಿಲ್ದಾಣಗಳಿಗೆ ಸಮಸ್ಯೆಯಾಗಿವೆ. ಈ ಬಗ್ಗೆ ಶಾಸಕರು, ಪೊಲೀಸ್ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಸಮಸ್ಯೆ ಪರಿಹರಿಸುವ ಭರವಸೆ ದೊರೆತಿದೆ. ಪರಿಹರಿಸದಿದ್ದರೆ ಪ್ರಬಲ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.
-ಲೋಕೇಶ್ ಶೆಟ್ಟಿ, ಅಧ್ಯಕ್ಷರು, ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಹೋರಾಟ ಸಮಿತಿ