Advertisement
ಈ ಕುರಿತಂತೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ್ದು, ಹೃದಯ, ಶ್ವಾಸಕೋಶ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳೇ ಕೋವಿಡ್ 19 ಸೋಂಕಿತರಿಗೂ ಚಿಕಿತ್ಸೆ ನೀಡುತ್ತಿವೆ. ಹಾಗೆಯೇ ಕೆಲವು ದೇಶಗಳು ಸಂಪೂರ್ಣ ಆಸ್ಪತ್ರೆಯನ್ನೇ ಸೋಂಕಿತರ ವಾರ್ಡ್‌ಗಳನ್ನಾಗಿ ಪರಿವರ್ತಿಸಿವೆ. ಆದರೆ ಇದು ಇತರೆ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಆಸ್ಪತ್ರೆಗೆ ತೆರಳಿದರೆ ಸೋಂಕು ಬಂದು ಬಿಟ್ಟಿàತೆಂಬ ಭಯದಿಂದ ಚಿಕಿತ್ಸೆಯನ್ನು ಮುಂದೂಡುತ್ತಿದ್ದಾರೆ.
ಇತ್ತೀಚೆಗೆ ಅಪೆಂಡಿಕ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣ ಕೆರೊಲಿನಾದ ವ್ಯಕ್ತಿಯೊಬ್ಬರು ಸೋಂಕಿನ ಭಯದಿಂದ ವೈದ್ಯರ ಬಳಿ ತೆರಳಲು ಹಿಂಜರಿದು, ಸ್ವಯಂ ಪ್ರೇರಿತವಾಗಿ ಔಷಧ ತೆಗೆದುಕೊಂಡಿದ್ದರು. ಆದರೆ ಕೆಲ ದಿನ ಬಳಿಕ ಸಮಸ್ಯೆ ಗಂಭೀರವಾಗಿ, ವಿಪರೀತ ನೋವು ಕಾಣಿಸಿಕೊಂಡಿದೆ. ತತ್‌ಕ್ಷಣ ವೈದ್ಯರ ಭೇಟಿಗೆ ಮುಂದಾಗಿದ್ದು, ಚಿಕಿತ್ಸೆ ವೇಳೆ ಕಿಬ್ಬೊಟ್ಟೆಯ ಸ್ನಾಯುವಿನವರೆಗೂ ಸಮಸ್ಯೆಯಾಗಿತ್ತು. ಈ ಘಟನೆಯನ್ನು ಮತ್ತೂಬ್ಬ ವೈದ್ಯರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಸೋಂಕು ತಗುಲುತ್ತದೆ ಎಂಬ ಭಯದಿಂದ ತಾವೇ ಮನೆಯಲ್ಲಿಯೇ ಸ್ವಯಂ ಚಿಕಿತ್ಸೆಗೆ ಮುಂದಾಗುತ್ತಿದ್ದು, ವೈದ್ಯಕೀಯ ಸಲಹೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Related Articles
ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಹೃದ್ರೋಗಿ ವಿಭಾಗ ತನ್ನ ನಿಯತಕಾಲಿಕೆಯಲ್ಲಿ ಈ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಈ ಅಧ್ಯಯನಕ್ಕೆ ದೇಶದ 9 ಪ್ರತಿಷ್ಠಿತ ಹೃದ್ರೋಗಿ ಚಿಕಿತ್ಸಾಲಯಗಳನ್ನು ಒಳಪಡಿಸಿದ್ದು, ಮಾರಾಣಾಂತಿಕ ಸಮಸ್ಯೆಗಳಿಂದ ಬಳಲುತ್ತಿರುವ ಒಟ್ಟು ರೋಗಿಗಳ ದತ್ತಾಂಶದ ಪೈಕಿ ಶೇ.38 ರಷ್ಟು ರೋಗಿಗಳು ಮಾರ್ಚ್ ತಿಂಗಳಿನಲ್ಲಿ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ ಎಂದು ಈ ಅಧ್ಯಯನ ಉಲ್ಲೇಖೀಸಿದೆ.
Advertisement
ಮಿಯಾಮಿ-ಜಾಕ್ಸನ್ ಮೆಮೋರಿಯಲ್ ಕಾಂಪ್ರಹೆನ್ಸಿವ್ ಪಾರ್ಶ್ವವಾಯು ಕಾಯಿಲೆ ಸಂಬಂಧಿಸಿದ ಕೇಂದ್ರವಾಗಿದ್ದು, ಚಿಕಿತ್ಸೆಗೆ ಬರುವ ಒಟ್ಟಾರೆ ರೋಗಿಗಳ ಪ್ರಮಾಣದಲ್ಲಿ ಶೇ.30ರಷ್ಟು ಕಡಿಮೆಯಾಗಿದೆ ಅಲ್ಲಿನ ವೈದ್ಯರು ತಿಳಿಸಿದ್ದರು.
ಜತೆಗೆ ಚಾರ್ಲ್ಸ್ಟನ್‌ನಲ್ಲಿನ ಅಪೆಂಡಿಕ್ಸ್‌ಗೆ ಸಂಬಂಧಿಸಿದ ಆಸ್ಪತ್ರೆಯಲ್ಲಿ ಶೇ.60ರಷ್ಟು ರೋಗಿಗಳು ಮಾತ್ರ ಶುಶ್ರೂಷೆಗೆ ಒಳಪಟ್ಟಿದ್ದು, ಸುಮಾರು ಶೇ.70ರಷ್ಟು ರೋಗಿಗಳು ನಿಗದಿತ ಸಮಯಕ್ಕಿಂತ ತಡವಾಗಿ ಚಿಕಿತ್ಸೆಗೆ ಬಂದಿದ್ದಾರೆ ಎನ್ನಲಾಗಿದೆ.ಈ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕನ ಮಾಡಿರುವ ತಜ್ಞರು, ಸಂಶೋಧಕರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸೋಂಕು ತಗುಲುವಿಕೆ ಭಯ ಬಿಡಬೇಕು. ಲಭ್ಯವಿರುವ ಆರೋಗ್ಯ ಸಹಾಯವಾಣಿ ಮೂಲಕ ನೆರವು ಪಡೆದು ವೈದ್ಯರ ಬಳಿ ಚಿಕಿತ್ಸೆ ತೆರಳಬೇಕೆಂದು ಸೂಚಿಸಿದ್ದು, ನಿರ್ಲಕ್ಷé ಮಾಡಿ ಅಪಾಯವನ್ನು ತಂದುಕೊಳ್ಳಬೇಡಿ ಎಂದು ವೈದ್ಯ ಸಮುದಾಯ ಎಚ್ಚರಿಸಿದೆ. ಸಾವಿನ ದವಡೆಗೆ
ಇನ್ನು ಈ ಸಮಸ್ಯೆ ಕೇವಲ ನ್ಯೂಯಾರ್ಕ್ ನದಲ್ಲ. ಸ್ಪೇನ್, ಬ್ರಿಟನ್, ಚೀನದಲ್ಲೂ ಹೆಚ್ಚಾಗಿದೆ. ಕೋವಿಡ್-19 ನತ್ತ ಎಲ್ಲರ ಗಮನ ಕೇಂದ್ರಿಕೃತವಾಗಿದ್ದು, ಆಸ್ಪತ್ರೆಗಳ ಆರೈಕೆಯ ಅಗತ್ಯವಿರುವ ಹೃದ್ರೋಗಿ, ಪಾರ್ಶ್ವವಾಯು ಮತ್ತಿತ್ತರ ರೋಗಿಗಳು ನಿಗದಿತ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಪರಿಣಾಮ ಮುಂಬರುವ ದಿನಗಳಲ್ಲಿ ಕೋವಿಡ್-19 ಸೋಂಕಿಗೆ ತುತ್ತಾಗಿ ಬಲಿಯಾಗುತ್ತಿರುವ ಸಂಖ್ಯೆಗಿಂತ ಹೆಚ್ಚು ಮಂದಿ ಇತರೆ ಆರೋಗ್ಯ ಸಮಸ್ಯೆಗಳಿಂದ ಅಸುನೀಗುವಂಥ ಸ್ಥಿತಿ ಇದೆ ಎಂದೂ ಸಂಶೋಧನೆಯ ವರದಿಯೊಂದು ತಿಳಿಸಿದೆ.