Advertisement
ಜೋರು ಮಳೆ ಬರುವ ವೇಳೆ ರಸ್ತೆಯಲ್ಲಿ ಪೂರ್ತಿ ನೀರು ಹರಿಯುತ್ತದೆ. ಆದರೆ ಸ್ಥಳೀಯ ಪ್ರತಿ ಮನೆಯವರು ತಮ್ಮ ಕಾಂಪೌಂಡಿನ ಗೇಟಿನ ಮುಂಭಾಗ ಕಟ್ಟೆ ರೀತಿ ಮಾಡಿರುವುದರಿಂದ ನೀರು ಒಳ ನುಗ್ಗಿಲ್ಲ. ಆದರೆ ಇತ್ತೀ ಚೆಗೆ ಸುರಿದಂತೆ ಧಾರಾಕಾರ ಮಳೆ ಬಂದರೆ ನೀರು ಒಳನುಗ್ಗುವ ಸಾಧ್ಯತೆ ಹೆಚ್ಚಿದೆ.
ಚರಂಡಿ ಮಾಡಿ ಹಾಗೇ ಬಿಟ್ಟಿದ್ದಾರೆ. ಮಳೆ ನೀರು ಕಾಂಕ್ರೀಟ್ ರಸ್ತೆಯಲ್ಲಿ ಹರಿದು ಪಾಚಿ ಉಂಟಾಗಿರುವುದರಿಂದ ದ್ವಿಚಕ್ರ ಸವಾರರು ಬೀಳುವ ಅಪಾಯವೂ ಇದೆ. ಹೀಗಾಗಿ ಸಂಬಂಧಪಟ್ಟ ಪಾಲಿಕೆಯು ಈ ಕುರಿತು ಗಮನಹರಿಸಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.