Advertisement

ಹಿನ್ನೀರಿಂದ ಮುಳುಗಡೆ ಭೀತಿ

12:39 AM Aug 26, 2019 | mahesh |

ಇಂದೋರ್‌: ಗುಜರಾತ್‌ನಲ್ಲಿರುವ ಸರ್ದಾರ್‌ ಸರೋವರ ಅಣೆಕಟ್ಟು ಭರ್ತಿಯಾಗಿದ್ದು, ಅದರ ಹಿನ್ನೀರಿನ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣ ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ನಿಸಾರ್‌ಪುರ್‌ ಎಂಬ ಹಳ್ಳಿಯೊಂದು ಪೂರ್ತಿ ಮುಳುಗಡೆಯಾಗಲಾರಂಭಿಸಿದೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಅಪಾರ ಮಳೆ ಇದಕ್ಕೆ ಕಾರಣ.

Advertisement

ಭಾನುವಾರ, ಅಣೆಕಟ್ಟಿನಲ್ಲಿ 370.7 ಅಡಿಗಳಷ್ಟು ಹಿನ್ನೀರು ಹೆಚ್ಚಳವಾಗಿದ್ದು, ಇದು ಅಪಾಯ ಮಟ್ಟಕ್ಕಿಂತ 21 ಅಡಿಯಷ್ಟು ಎತ್ತರಕ್ಕೇರಿದೆ. ಇದರಿಂದಾಗಿ, ಹಿನ್ನೀರಿನಿಂದ ಸುಮಾರು 180 ಕಿ.ಮೀ ದೂರವಿದ್ದರೂ ನಿಸಾರ್‌ಪುರ್‌ ಹಳ್ಳಿಯ ಹೊರವಲಯದಲ್ಲಿರುವ ಮರಗಳು, ಹೊಲಗದ್ದೆಗಳು ಮುಳುಗಿ ಹೋಗಿವೆ. ಒಂದೆಡೆ ಹಿನ್ನೀರಿನಿಂದ ಈ ತಾಪತ್ರಯ ಶುರುವಾಗಿದ್ದರೆ, ಮತ್ತೂಂದೆಡೆ, ನಿಸಾರ್‌ಪುರ ಹಳ್ಳಿಯ ಬಳಿಯಲ್ಲೇ ಸಾಗುವ ನರ್ಮದಾ ನದಿಯ ಉಪನದಿಯಾದ ‘ಉರಿ ಬಘಿನಿ’ ಎಂಬ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿ ಅದೂ ಸಹ ಹಳ್ಳಿಗೆ ಕಂಟಕವನ್ನು ತಂದೊಡ್ಡಿದೆ. ಇದರಿಂದ, ಹಳ್ಳಿಯ ಮತ್ತೂಂದು ಬದಿಯ ಕೆಲವು ಜನವಸತಿ ಪ್ರಾಂತ್ಯಗಳು ಮುಳುಗಡೆಯಾಗುತ್ತಿವೆ ಎಂದು ಹೇಳಲಾಗಿದೆ. ಸುಮಾರು ಎರಡು ಶತಮಾನಗಳಷ್ಟು ಇತಿಹಾಸವಿರುವ ಈ ಹಳ್ಳಿಯಲ್ಲಿ 10,000 ಜನಸಂಖ್ಯೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next