Advertisement
ಲಾಕ್ ಡೌನ್ ತೆರವಿನ ಬಳಿಕ ಒಂದೊಂದಾಗಿ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರುತ್ತಿವೆ. ಸೇವಾ ವಲ ಯವೂ ಸಹಿತ ಬಹುತೇಕ ವಲಯಗಳಲ್ಲಿ ಸಕಾರಾತ್ಮಕ ಪ್ರಗತಿ ಆಗುತ್ತಿವೆ. ಹೀಗಿರುವಾಗ ಮತ್ತೆ ಲಾಕ್ ಡೌನ್‌ನ ಮೊರೆ ಹೋದರೆ ಈ ಎಲ್ಲ ಪ್ರಗತಿಯೂ ಪತನಗೊಳ್ಳುವುದು ಖಚಿತ ಎಂದು ನೊಮುರಾ ಇಂಡಿಯಾದ ವರದಿ ಹೇಳಿದೆ. ಅಲ್ಲದೆ, ನಿರ್ಬಂಧಗಳು 2 ತಿಂಗಳು ಮುಂದುವರಿದರೂ ದೇಶದ ಜಿಡಿಪಿ ಪ್ರಗತಿ ದರದಲ್ಲಿ ಶೇ.0.17ರಷ್ಟು ಕೊಚ್ಚಿ ಹೋಗಲಿದೆ ಎಂದು ಬಾಕ್ಲೇಸ್ ಇಂಡಿಯಾ ವರದಿಯೂ ಕಳವಳ ವ್ಯಕ್ತಪಡಿಸಿದೆ.
Related Articles
Advertisement
ವಾಣಿಜ್ಯ ನಗರಿಯಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣ ನಿರ್ಬಂಧಿತ ಲಾಕ್ ಡೌನ್ ಹೇರುವ ಸುಳಿವನ್ನು ಮುಂಬಯಿ ಮೇಯರ್ ಕಿಶೋರಿ ಪಡ್ನೇಕರ್ ನೀಡಿದ್ದಾರೆ. ಈ ಕುರಿತ ಅಧಿಕೃತ ಘೋಷಣೆ ಶುಕ್ರವಾರ ಹೊರಬೀಳುವ ಸಾಧ್ಯತೆಯಿದೆ. ಅಂಗಡಿಗಳು ದಿನ ಬಿಟ್ಟು ದಿನ ತೆರೆಯಲು ಅನುಮತಿ ನೀಡಲಾಗುತ್ತದೆ, ಸ್ಥಳೀಯ ರೈಲುಗಳನ್ನು ಅಗತ್ಯ ಸೇವೆಗಳಿಗೆ ಮಾತ್ರ ಬಳಸಲಾಗುತ್ತದೆ, ಧಾರ್ಮಿಕ ಕೇಂದ್ರಗಳು, ಮಾಲ್, ಥಿಯೇಟರ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಹೇಳಲಾಗಿದೆ.