Advertisement

“ದೈವಾರಾಧನೆ ಭಯ –ಭಕ್ತಿ –ನಂಬಿಕೆಗಳ ಆರಾಧನೆ’

02:18 PM Mar 21, 2017 | Team Udayavani |

ಬೆಳ್ತಂಗಡಿ: ದೈವಾರಾಧನೆ ಎಂದರೆ ಭಯ – ಭಕ್ತಿ – ನಂಬಿಕೆಗಳ ಆರಾಧನೆ. ತುಳು ಜನಾಂಗ ಸಂಯುಕ್ತ ವಾಗಿ ನಂಬಿಕೆ, ಆಚರಣೆಗಳ ಮೂಲಕ ದೈವ ಸಾûಾತ್ಕಾರ ಪಡೆಯುವ ಮಂದಿ. ಸಮಾಜವನ್ನು ರೂಪಿಸುವ, ತಿದ್ದುವ, ಮುನ್ನೆಡೆಸುವ ಶಕ್ತಿ ಸ್ವರೂಪಿಗಳು ಎಂದು ಆರಾಧಿಸುವ ದೈವಾರಾಧನೆ ಮನುಕುಲದ ಉನ್ನತ ಆರಾಧನೆಯಲ್ಲಿ ಒಂದು ಎಂದು ಜೆಸಿಐ ಕರ್ನಾಟಕದ ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್‌ ಹೇಳಿದರು.

Advertisement

ಅವರು ಪೆರಿಂಜೆಯ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭ ರವಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಮಾತನಾಡಿದರು.

ವಿಕೃತಿ ಬೇಡ: ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಭಾರತೀಯ ಜನತಾಪಕ್ಷದ ರಾಜ್ಯ ಕಾರ್ಯದರ್ಶಿ ತಿಂಗಳೆ
ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ, ತುಳು ಸಂಸ್ಕೃತಿಯ ತಿರುಳು ಎಂದೆನಿ ಸುವ ದೈವಾರಾಧನೆ ಪರಿಪೂರ್ಣ ರೂಪದಲ್ಲಿ ಉಳಿಯ ಬೇಕಿರುವುದು ಇಂದಿನ ಮತ್ತು ಮುಂದಿನ ಅಗತ್ಯ. ದೈವಾರಾಧನಾ ಕ್ರಮಗಳಲ್ಲಿರುವ ವಿಕೃತಿಗಳನ್ನು ದೂರ ಮಾಡಿ ಪರಂಪರಾನುಗತ ಕ್ರಮಗಳನ್ನು ಊರ್ಜಿತಗೊಳಿಸುವುದು ಮುಖ್ಯ. ತುಳು ನಾಡಿನ ದೈವಾರಾಧನೆ ಯಾವುದೇ ಜಾತಿ, ಧರ್ಮಗಳಿಗೆ ಒಳಪಟ್ಟದುದಲ್ಲ. ದೈವಗಳು ತುಳು ಸಮಾ ಜದ ಎಲ್ಲರ ಆರಾಧ್ಯ ಶಕ್ತಿಗಳು. ಇಂದು ದೈವರಾಧನಾ ಕ್ಷೇತ್ರಗಳು ಪರಂಪರೆಯನ್ನು ಉಳಿಸಿ ನಡೆಸಬೇಕಾದ ಆವಶ್ಯಕತೆಯಿದೆ ಎಂದರು.

ಮಂಗಳೂರು ಜೈನ್‌ ಟ್ರಾವೆಲ್ಸ್‌ನ
ರತ್ನಾಕರ ಜೈನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹಾಗೂ ತುಳು ಸಂಘ ಬರೋಡದ ಅಧ್ಯಕ್ಷ ಶಶಿಧರ ಶೆಟ್ಟಿ ಭಾಗವಹಿಸಿದ್ದರು. ಪೆರಿಂಜೆರಾಜ್ಯಗುತ್ತು ಡಾ| ಶ್ರೀಧರ ಕಂಬಳಿ, ಕ್ಷೇತ್ರದ ಪ್ರಧಾನ ಅರ್ಚಕ ರಾಮದಾಸ ಆಸ್ರಣ್ಣ ವೇದಿಕೆಯಲ್ಲಿದ್ದರು.

ಸಮ್ಮಾನ: ಈ ಸಂದರ್ಭ ಕ್ಷೇತ್ರದ ವತಿಯಿಂದ ಅತಿಥಿಗಳನ್ನು ಹಾಗೂ ಸುದೀರ್ಘ‌ ಕಾಲ ಸೇವೆ ನೀಡಿದ ಮೂಡಬಿದಿರೆಯ ಆರ್‌.ಕೆ. ಭಟ್‌, ರಮೇಶ್‌ ಹೆಗ್ಡೆ, ಸಂದೀಪ್‌ ಬನ್ನಡ್ಕ, ಸುಧಾಕರ ಶೆಟ್ಟಿ ಮಾರೂರು, ಪೆರಿಂಜೆಯ ಬಾಲಪ್ರತಿಭೆ ಚೇತನ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ಕ್ಷೇತ್ರದ ಆನುವಂಶೀಯ ಆಡಳಿತ ದಾರ ಎ. ಜೀವಂಧರ ಕುಮಾರ್‌ ಸ್ವಾಗತಿಸಿ, ಕ್ಷೇತ್ರದ ವಿಕಾಸ್‌ ಜೈನ್‌ ವಂದಿಸಿದರು. ಮಹಾವೀರ ಜೈನ್‌ ಮೂಡು ಕೋಡಿ ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಪ್ಪದ ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರಿಂದ ಭಕ್ತಿ-ಭಾವ-ಸಂಗಮ ಕಾರ್ಯಕ್ರಮ ನಡೆಯಿತು. ದೈವಸ್ಥಾನದಲ್ಲಿ ಹೂವಿನ ಪೂಜೆ, ತುಲಾಭಾರ ಸೇವೆ ಮತ್ತು ಶ್ರೀ ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next