Advertisement

ಕುಸಿಯುವ ಭೀತಿಯಲ್ಲಿ ನೂರು ವರ್ಷ ಹಳೆ ಕಟ್ಟಡ

10:50 AM Jul 04, 2018 | |

ಮಹಾನಗರ : ನಗರದ ಭವಂತಿ ಸ್ಟ್ರೀಟ್‌ ಅಡ್ಡರಸ್ತೆಯಲ್ಲಿ ಸುಮಾರು ನೂರು ವರ್ಷ ಹಳೆಯದಾದ ಕಟ್ಟಡವೊಂದು
ಅಪಾಯಕಾರಿ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಆತಂಕದಲ್ಲಿದೆ. ಕಳೆದ ಏಳೆಂಟು ವರ್ಷಗಳಿಂದ ಕಟ್ಟಡವು ಇದೇ ಸ್ಥಿತಿಯಲ್ಲಿದೆ.

Advertisement

ಈ ಹಿಂದೆ ನಗರದಲ್ಲಿ ಬಂದ ಮಳೆಗೆ ಹಳೆ ಕಟ್ಟಡವೊಂದು ಉರುಳಿದ ಪರಿಣಾಮ ಜಿಲ್ಲಾಡಳಿತವು ಅಪಾಯಕಾರಿ ಹಳೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಆದರೆ ಸುಮಾರು 100 ವರ್ಷಗಳ ಹಳೆಯದಾದ ಈ ಕಟ್ಟಡವು ರಸ್ತೆ ಬದಿಯಲ್ಲೇ ಇದ್ದರೂ, ತೆರವುಗೊಳಿಸದೆ ಹಾಗೇ ಉಳಿಸಲಾಗಿದೆ.

ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಒಳಭಾಗದಲ್ಲಿ ಕಲ್ಲು, ಮಣ್ಣು ಕುಸಿದು ಬಿದ್ದಿದೆ. ಗೋಡೆ ಕುಸಿದ ಪರಿಣಾಮ ಮಧ್ಯಭಾಗದಲ್ಲಿ ಗುಹೆಯಾ ಕಾರದ ರಂಧ್ರ ನಿರ್ಮಾಣವಾಗಿದೆ. ಒಳಭಾಗದಲ್ಲಿ ಮತ್ತು ಕಿಟಕಿಯಲ್ಲಿ ಹುಲ್ಲು ತುಂಬಿಕೊಂಡಿದ್ದು, ವಿಷಜಂತುಗಳ ಭಯವೂ ಸ್ಥಳೀಯರಲ್ಲಿ ನಿರ್ಮಾಣವಾಗಿದೆ. ಕಟ್ಟಡದ ಒಂದು ಭಾಗದ ಹಂಚು ಬಿದ್ದಿರುವುದರಿಂದ ಆ ಭಾಗಕ್ಕೆ ಪ್ಲಾಸ್ಟಿಕ್‌ ಹೊದಿಕೆಗಳನ್ನು ಹಾಕಿ ಮುಚ್ಚಲಾಗಿದೆ. ಆದರೆ ಮಳೆಗೆ ಈ ಹೊದಿಕೆಗಳು ಕೂಡ ಹರಿದು ಬಿದ್ದಿದೆ.

ಮೂರು ವರ್ಷಗಳ ಹಿಂದೆ ಕಟ್ಟಡದ ಬಳಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಗೋಡೆ ಕುಸಿದು ಬಿದ್ದಿತ್ತು ಎನ್ನುತ್ತಾರೆ ಸ್ಥಳೀಯರು. ಇಲ್ಲಿ ರಸ್ತೆ ಕಿರಿದಾಗಿದ್ದು, ವಾಹನಗಳು ಸ್ವಲ್ಪ ತಾಗಿದರೂ, ಗೋಡೆ ಬೀಳಬಹುದು. 

ಪಾಲಿಕೆಗೆ ತಿಳಿಸಲಾಗಿದೆ.
ಈ ಕಟ್ಟಡವು 7-8 ವರ್ಷಗಳಿಂದ ಪಾಳು ಬಿದ್ದಿದೆ. ಆದರೆ ಕಟ್ಟಡದ ಮಾಲಕರಲ್ಲೋರ್ವರಾದ ಸುರೇಂದ್ರ ಹೆಗ್ಡೆ ಅವರ ಪ್ರಕಾರ, ಸದ್ಯ ಈ ಕಟ್ಟಡದ ಸಂಬಂಧ ನ್ಯಾಯಾಲಯದಲ್ಲಿ ಕೇಸ್‌ ಇದೆ. ಹಾಗಾಗಿ ನಾವೇನು ಮಾಡು ವಂತಿಲ್ಲ. ಪಾಲಿಕೆಗೆ ತಿಳಿಸಲಾಗಿದೆ ಎನ್ನುತ್ತಾರೆ.

Advertisement

ನಿತ್ಯ ಜನಸಂಚಾರ ರಸ್ತೆ 
‌ಕಟ್ಟಡದ ಬದಿಯಲ್ಲೇ ಹಾದು ಹೋಗುವ ರಸ್ತೆಯಲ್ಲಿ ನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನಗಳೂ ನಿತ್ಯ ಓಡಾಡುತ್ತಿರುತ್ತವೆ. ಕಟ್ಟಡದ ಗೋಡೆ ಜರಿದು ನಿಂತಿರುವುದ ರಿಂದ ಮಳೆ ಬಂದಲ್ಲಿ ಕುಸಿಯುವ ಅಪಾಯವಿದ್ದು, ಸಾರ್ವಜನಿಕರು ಆತಂಕಿತರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next