ಉಳ್ಳಾಲ : ಉಳ್ಳಾಲ ಸಮುದ್ರ ಕಿನಾರೆಯಲ್ಲಿ ನಡೆಯಲಿರುವ ಬೀಚ್ ಉತ್ಸವವನ್ನು ಉಳ್ಳಾಲ ಉತ್ಸವವಾಗಿ ಆಚರಿಸುವ ಉದ್ದೇಶವಿದ್ದು, ಸರ್ವಧರ್ಮೀಯರ ಸಹಕಾರದಿಂದ ಉತ್ಸವ ಯಶಸ್ವಿಗೊಳಿಸಬೇಕೆಂದು ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವಜ್ರ ಮಹೋತ್ಸವ ಸಮಿತಿಯ ಮನೋಜ್ ಸಾಲ್ಯಾನ್ ಹೇಳಿದರು.
ಅವರು ಮೊಗವೀರ ಹಿರಿಯ ಪ್ರಾಥಮಿಕ ಹಳೇ ವಿದ್ಯಾರ್ಥಿ ಸಂಘ, ಬ್ರದರ್ ನ್ಪೋರ್ಟ್ಸ್ ಕ್ಲಬ್ ಮತ್ತು ಬ್ರದರ್ಸ್ ಯುವಕ ಮಂಡಲ ಇದರ ವಜ್ರಮಹೋತ್ಸವದ ಪ್ರಯುಕ್ತ ಉಳ್ಳಾಲ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಫೆ.10 ಮತ್ತು 11 ರಂದು ಉಳ್ಳಾಲ ಸಮುದ್ರ ಕಿನಾರೆಯಲ್ಲಿ ಜರಗಲಿರುವ ಉಳ್ಳಾಲ ಬೀಚ್ ಉತ್ಸವದ ಅಂಗವಾಗಿ ಮೊಗವೀರ ಶಾಲಾ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ, ಮಾತನಾಡಿದರು.
ಇದರ ಅಂಗವಾಗಿ ಫೆ.28ರಂದು ಸ್ವಚ್ಛ ಭಾರತ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಸ್ಥಳೀಯ ಸಂಘಟನೆಗಳು ಭಾಗವಹಿಸುವ ಭರವಸೆ ನೀಡಿದರು. ಹಿಂದಿನ ಬೀಚ್ ಉತ್ಸವದ ಯಶಸ್ಸನು ಗಮನದಲ್ಲಿಟ್ಟುಕೊಂಡು, ಉತ್ಸವದಲ್ಲಿ ಲಕ್ಷಾಂತರ ಮಂದಿ ಜಮಾಯಿಸುವ ಹಿನ್ನೆಲೆಯಲ್ಲಿ ವಾಹನಗಳಿಗೆ ಆರು ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಅದರಲ್ಲಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ನೀಡಿ ಅದರಂತೆ ಪಾರ್ಕಿಂಗ್ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುರಾಜ್ ಅಮೀನ್, ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಹಾಸ ಶ್ರೀಯಾನ್, ಉಳ್ಳಾಲ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಭಾರತಿ ಸದಾನಂದ ಬಂಗೇರ, ಉಳ್ಳಾಲ ನಗರಸಭೆ ಸದಸ್ಯೆ ಮೀನಾಕ್ಷಿ ದಾಮೋದರ ಉಳ್ಳಾಲ್, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ವಜ್ರ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ದೇವದಾಸ್ ಪುತ್ರನ್, ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷ ಚೂಡಪ್ಪ, ಉಳ್ಳಾಲ ಗೋಳಿಯಡಿ ಅಯ್ಯಪ್ಪ ಮಂದಿರ ಅಧ್ಯಕ್ಷ ಲತೇಶ್, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಅಧ್ಯಕ್ಷ ಕಿರಣ್ ಪುತ್ರನ್, ಮಾರುತಿ ಕ್ರಿಕೆಟರ್ ಮತ್ತು ಯುವಕ ಮಂಡಲದ ಉಪಾಧ್ಯಕ್ಷ ಅಶ್ವಿನ್ ಕೋಟ್ಯಾನ್, ಭಾರತ್ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರೀತಂ, ಸೋಲಾರ್ ಕ್ಲಬ್ ಅಧ್ಯಕ್ಷ ಹನೀಫ್, ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಯಶವಂತ ಪಿ.ಅಮೀನ್, ಅಬ್ಬಕ್ಕ ಯುವಕ ಮಂಡಲದ ಮುಖೇಶ್ ಕೋಟ್ಯಾನ್, ವ್ಯಾಘ್ರ ಫ್ರೆಂಡ್ಸ್‌ನ ರಾಜೇಶ್ ಸುವರ್ಣ, ಜೀವರಕ್ಷಕ ಈಜುಗಾರರ ಸಂಘದ ಅಧ್ಯಕ್ಷ ಮೋಹನ್ ಪುತ್ರನ್, ಮೊಗವೀರಪಟ್ನ ಅಯ್ಯಪ್ಪ ಮಂದಿರದ ಗುರುಸ್ವಾಮಿ ಸುಧೀರ್ ಬಂಗೇರ, ಉಳ್ಳಾಲ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಬಂಗೇರ, ವಜ್ರಮಹೋತ್ಸವದ ಪದಾಧಿಕಾರಿಗಳಾದ ವಿಶ್ವನಾಥ ಬಂಗೇರ, ಸುನೀಲ್ ಪುತ್ರನ್, ದಯಾನಂದ ಬಂಗೇರ, ಯಶಪಾಲ್ ಪುತ್ರನ್, ಜಯಚಂದ್ರ ಅಮೀನ್, ಬಾಬು ಬಂಗೇರ, ಬಾಬು ಸಾಲ್ಯಾನ್, ದಾಮೋದರ್ ಉಳ್ಳಾಲ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪುತ್ರನ್ ಸ್ವಾಗತಿಸಿದರು. ರಾಜೇಶ್ ಪುತ್ರನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿವಿಧ ಸ್ಪರ್ಧೆಗಳು
ಸ್ಥಳೀಯ ಮಹಿಳೆಯರಿಗೆ, ಪುರುಷರಿಗೆ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದ್ದು, ದೋಣಿ ಚಲಾಯಿಸುವ ಸ್ಪರ್ಧೆ, ಮಡಕೆ ಒಡೆಯುವುದು, ಬಲೆ ಬೀಸುವ ಸ್ಪರ್ಧೆ, ಬೀಚ್ ತ್ರೋಬಾಲ್ ಪಂದ್ಯಾಟ, ಮೀನು ಹಿಡಿಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.